ETV Bharat / sukhibhava

Migraine: ದೀರ್ಘಕಾಲದ ಮೈಗ್ರೇನ್​ಗೆ ಅಟೊಜೆಪೆಂಟ್​ ಔಷಧ ಸುರಕ್ಷಿತ ಮತ್ತು ಪರಿಣಾಮಕಾರಿ; ಅಧ್ಯಯನ - ಜಗತ್ತಿನಲ್ಲಿ ಪ್ರತಿ ವರ್ಷ ಒಂದು ಬಿಲಿಯನ್​ಗೂ

ಜಾಗತಿಕವಾಗಿ ಒಂದು ಬಿಲಿಯನ್​ಕ್ಕೂ ಹೆಚ್ಚು ಜನರನ್ನು ಕಾಡುತ್ತಿರುವ ಈ ಮೈಗ್ರೇನ್​ ಅಂಗವೈಕಲ್ಯಕ್ಕೂ ಕಾರಣವಾಗಬಹುದು.

Atogepant safe, effective to treat chronic migraine: Study

author img

By

Published : Aug 3, 2023, 12:27 PM IST

ದೀರ್ಘಕಾಲ ಕಾಡುವ ಮೈಗ್ರೇನ್​ಗೆ ಅಟೋಜೆಪೆಂಟ್​ ಔಷಧ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ತಿಳಿಸಿದೆ. ಜಗತ್ತಿನಲ್ಲಿ ಪ್ರತಿ ವರ್ಷ ಒಂದು ಬಿಲಿಯನ್​ಗೂ ಅಧಿಕ ಮಂದಿಯನ್ನು ಈ ಮೈಗ್ರೇನ್​ ಕಾಡುತ್ತಿದೆ. ಇದಕ್ಕೆ ಈ ಔಷಧವನ್ನು ಸೂಚಿಸಲಾಗಿದೆ ಎಂದು ದಿ ಲ್ಯಾನ್ಸೆಟ್​ನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿದೆ.

ಮೈಗ್ರೇನ್​ ಅನ್ನು ಬೆಳಕು ಮತ್ತು ಶಬ್ಧ ಅಥವಾ ಚಲನೆಯ ಸೂಕ್ಷಮತೆ ಹೊಂದಿರುವ ಕೆಲವು ವಿಶಿಷ್ಟ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿರುವ ಎಪಿಸೊಡಿಕ್​ ತಲೆನೋವು ಎಂದು ಗುರುತಿಸಲಾಗಿದೆ. ಅಥವಾ ನರವೈಜ್ಞಾನಿಕ ಅಪಸಾಮಾನ್ಯ ಕ್ರಿಯೆಯ ಇತರ ರೋಗಲಕ್ಷಣಗಳೊಂದಿಗೆ ಸಂಬಂಧಿಸಿದ ತಲೆನೋವು ಮರುಕಳಿಸುವ ಸಿಂಡ್ರೋಮ್ ಇದು ಎಂದು ಗುರುತಿಸಲಾಗಿದೆ.

ಜಾಗತಿಕವಾಗಿ ಅಂಗವೈಕಲ್ಯಕ್ಕೆ ಕಾರಣವಾಗುತ್ತಿರುವ ಎರಡನೇ ಪ್ರಮುಖ ಕಾರಣ ಇದಾಗಿದೆ. ನರ ಸಮಸ್ಯೆಯಲ್ಲಿ ಇದು ಸಾಮನ್ಯವಾಗಿದೆ. ಯುವ ಜನತೆ ಅದರಲ್ಲೂ ಮಹಿಳೆಯರು ಈ ಮೈಗ್ರೇನ್​ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಿದ್ದಾರೆ.

ಇಂಟರ್​ನ್ಯಾಷನಲ್​ ಟೀಮ್​ ಆಫ್​​ ರಿಸರ್ಚರ್ಸ್​ ನೇತೃತ್ವದ ಹೊಸ ಅಧ್ಯಯನ ತಂಡ, ಈ ಅಟೋಜೆಪೆಂಟ್​ನ ಸಾಮರ್ಥ್ಯ, ಸುರಕ್ಷತೆ ಮತ್ತು ಸಹಿಷ್ಣುತೆಯ ಮೌಲ್ಯಮಾಪನ ನಡೆಸುತ್ತದೆ. ಅಮೆರಿಕದ ಪ್ರಮುಖ ಔಷಧ ಸಂಸ್ಥೆ ಅಬ್ಬವೀ ಇದನ್ನು ಅಭಿವೃದ್ಧಿ ಪಡಿಸಿದ್ದು, ಕ್ಯೂಲಿಪ್ಟ್​​ ಇದನ್ನು ಮಾರುಕಟ್ಟೆ ಮಾಡುತ್ತದೆ. ದೀರ್ಘ ಮೈಗ್ರೇನ್​ನಲ್ಲಿ ತಡೆಯಬಹುದಾದ ಚಿಕಿತ್ಸೆಗೆ ಇದನ್ನು ಬಳಕೆ ಮಾಡಲಾಗುವುದು.

ಅಮೆರಿಕ, ಇಂಗ್ಲೆಂಡ್​, ಕೆನಾಡ, ಚೀನಾ, ಜೆಕ್​ ರಿಪಬ್ಲಿಕ್​, ಡೆನ್ಮಾರ್ಕ್​, ಫ್ರಾನ್ಸ್​, ಜರ್ಮನಿ, ಇಟಲಿ, ಜಪಾನ್​, ದಕ್ಷಿಣ ಕೊರಿಯಾ, ಪೊಲಾಂಡ್​​, ರಷ್ಯಾ, ಸ್ಪೇನ್​, ಸ್ವಿಡನ್​ ಮತ್ತು ತೈವನ್​ನಿ 778 ಭಾಗಿದಾರರನ್ನು ಯಾದೃಚಿಕ, ಡಬ್ಬಲ್​ ಬ್ಲೈಂಡ್​, ಪ್ಲೆಸೆಬೊ ನಿಯಂತ್ರಣದಲ್ಲಿ ಪೇಸ್​ 3 ಟ್ರಯಲ್​ ನಡೆಸಲಾಗಿದೆ.

ಅಧ್ಯಯನದಲ್ಲಿ ಯಾರೆಲ್ಲ ಭಾಗಿ: ಈ ಅಧ್ಯಯನದಲ್ಲಿ 18ರಿಂದ 80 ವರ್ಷದ ವಯಸ್ಕರು ಭಾಗಿಯಾಗಿದ್ದಾರೆ. ಒಂದು ವರ್ಷದ ಅಥವಾ ದೀರ್ಘದ ಮೈಕ್ರೇನ್​ ಹೊಂದಿರುವವರಿಗೆ ದಿನಕ್ಕೆ ಎರಡು ಸಮಯ ಆಟೋಜೆಪೆಂಟ್ 30 ಎಂಜಿಯಷ್ಟು ನೀಡಲಾಗಿದೆ. ಮಾತ್ರೆ ಮೂಲಕವಾಗಿ 60 ಎಂಜಿ ಅನ್ನು ದಿನಕ್ಕೆ ನೀಡಲಾಗಿದೆ.

ಅಟೋಜೆಪೆಂಟ್​ 30 ಎಂಜಿ ಅನ್ನು ದಿನಕ್ಕೆ ಎರಡು ಬಾರಿ ಮತ್ತು ದಿನಕ್ಕೆ 60mg ಅನ್ನು ದಿನಕ್ಕೆ ಒಂದು ಬಾರಿ ನೀಡುವುದರಿಂದ 12 ವಾರದಲ್ಲಿ ದೀರ್ಘ ಮೈಗ್ರೇನ್​ ರೋಗಿಗಳನ್ನು ನೋವು ಕಡಿಮೆಯಾಗಿದೆ. ಅಟೋಜೆಪೆಂಟ್​ ಡೋಸ್​ ಅನ್ನು ಸರಿಯಾಗಿ ನಿಯಂತ್ರಿಸಲಾಗಿದ್ದು, ಉತ್ತಮ ಸುರಕ್ಷಿತ ರೀತಿಯಲ್ಲಿ ನಿರ್ವಹಿಸಲಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಇನ್ನು ಈ ಮಾತ್ರೆಯಿಂದ ಮಲಬದ್ಧತೆ ಮತ್ತು ತಲೆ ಸುತ್ತುವಿಕೆಯಂತಹ ಅಡ್ಡ ಪರಿಣಾಮ ಉಂಟಾಗಿದೆ. ಅಟೋಜೆಪೆಂಟ್​​ ಕ್ಯಾಲ್ಸಿಟೋನಿನ್ ಜೀನ್-ಸಂಬಂಧಿತ ಪೆಪ್ಟೈಡ್ ಆಗಿದ್ದು, ಇದು ಮೈಗ್ರೇನ್​ ತಡೆಯ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ದಿನದಲ್ಲಿ ನಾಲ್ಕು ಅಥವಾ ಐದು ಬಾರಿ ಮೈಗ್ರೇನ್​ಗೆ ಒಳಗಾಗುವರಿಗೆ ಇದು ಚಿಕಿತ್ಸೆ ನೀಡಬಲ್ಲದು.

ಅಧ್ಯಯನವೂ ಈ ಸಿಜಿಆರ್​ಪಿ ಪ್ರೋಟಿನ್​ ಅನ್ನು ಗುರಿಯಾಗಿಸಿಕೊಂಡಿದೆ. ಇದು ಮೈಗ್ರೇನ್​ ದಾಳಿಯಾದಾಗ ಮಿದುಳಿನಲ್ಲಿ ಪ್ರೋಟಿನ್​ ಬಿಡುಗಡೆ ಮಾಡುತ್ತದೆ. ಇದು ತಲೆ ನೋವು, ಮೈಗ್ರೇನ್​ ಆರಂಭ ಮತ್ತು ನೋವನ್ನು ಕೆಟ್ಟದಾಗಿಸುತ್ತಾ ಸಾಗುತ್ತದೆ.

ಅಟೋಜೆಪೆಂಟ್​ ಈ ಸಿಜಿಆರ್​ಪಿ ರೆಸೆಪ್ಟರ್​​ ಅನ್ನು ಒಳಗೊಂಡಿದ್ದು, ಮಿದುಳಿನ ಟ್ರುಜಿಎಮಿನಲ್​ ನರದಲ್ಲಿ ಮೈಗ್ರೇನ್​ ಅನ್ನು ಕಾರ್ಯಚಟುವಟಿಕೆ ನಡೆಯದಂತೆ ತಡೆ ಹಿಡಿಯುತ್ತದೆ. ಆಟೋಜೆಪೆಂಟ್​ ಅನ್ನು ಯುಎಸ್​ಎಫ್​ಡಿಎ ಕೂಡ ಅನುಮೋದಿಸಿದೆ. ವಯಸ್ಕರಲ್ಲಿನ ಮೈಗ್ರೇನ್​ ತಡೆಯುವಿಕೆಗೆ ಇದು ಸಹಾಯ ಮಾಡುತ್ತದೆ ಎಂದು ಯುರೋಪಿಯನ್​ ಮೆಡಿಸಿನ್​ ಏಜೆನ್ಸಿ ಕೂಡ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಗಮನಿಸಿ: ಅಟೋಜೆಪೆಂಟ್​ ಹೊರತಾಗಿ ಅಬ್ಬವೀ ಬೊಟಾಕ್ಸ್ ಅನ್ನು ನೀಡಿದ್ದು, ಇದು ಕೂಡ ವಯಸ್ಕರಲ್ಲಿ ಮೈಗ್ರೇನ್​ ತಡೆಯುವಲ್ಲಿ ಚಿಕಿತ್ಸೆ ನೀಡಲಿದೆ. ಇವೆಲ್ಲ ಪ್ರಯೋಗಕ್ಕೆ ಒಳಪಡಿಸಿ, ಅದರ ಪರಿಣಾಮ ತಿಳಿದುಕೊಳ್ಳಲಾಗಿದೆ. ಈ ವರದಿಯನ್ನು ನೋಡಿ, ನೀವೇ ಸ್ವತಃ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ. ಯಾರೇ ಆಗಲಿ ಮೈಗ್ರೇನ್​ನಿಂದ ಬಳಲುತ್ತಿದ್ದರೆ ಸಂಬಂಧಪಟ್ಟ ತಜ್ಞ ವೈದ್ಯರಿಂದ ತಪಾಸಣೆಗೆ ಒಳಗಾಗಿ ಅವರ ಸಲಹೆ ಮೂಲಕ ಮಾತ್ರ ಮಾತ್ರೆಗಳನ್ನು ಬಳಸಬೇಕು.

ಇದನ್ನೂ ಓದಿ: ಮಳೆಗಾಲದಲ್ಲಿ ತ್ವಚೆ, ಕೂದಲ ರಕ್ಷಣೆ ಹೇಗೆ? ಇಲ್ಲಿದೆ ವೈದ್ಯರ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.