ನವದೆಹಲಿ: ಆಹಾರ ಮತ್ತು ಪಾನೀಯಗಳಲ್ಲಿ ಬಳಸುವ ಕೃತಕ ಸಿಹಿಕಾರಕವಾದ ಸುಕ್ರಲೋಸ್ ಮಾನವನ ದೇಹದ ಸ್ವಯಂ ನಿರೋಧಕ ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ಸಂಶೋಧನೆ ತಿಳಿಸಿದೆ. ಈ ಸಂಬಂಧ ಬ್ರಿಟಿಷ್ ವಿಜ್ಞಾನಿಗಳ ಇಲಿಗಳ ಮೇಲೆ ನಡೆಸಿದ ಸಂಶೋಧನೆ ಯಶಸ್ವಿಯಾಗಿದೆ.
ಟಿ ಕೋಶಗಳ ಮೇಲೆ ಪರಿಣಾಮ: ಸುಕ್ರಲೋಸ್ ಕೃತಕ ಸಿಹಿಕಾರಕವಾಗಿದೆ. ಇದು ಸಾಮಾನ್ಯ ಸಕ್ಕರೆಗಿಂತ 600 ಪಟ್ಟು ಸಿಹಿಯಾಗಿರುತ್ತದೆ. ದೇಹದ ಮೇಲೆ ಇದರ ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿ ವಿಜ್ಞಾನಿಗಳಿಗೆ ತಿಳಿದಿಲ್ಲ. ಕ್ಯಾನ್ಸರ್ ಅಥವಾ ಸೋಂಕಿನ ಪ್ರತಿಕ್ರಿಯೆಯಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಪ್ರಮುಖ ಅಂಶವಾದ ಟಿ-ಕೋಶಗಳನ್ನು ಸಕ್ರಿಯಗೊಳಿಸಲು ಈ ಸುಕ್ರಲೋಸ್ ಕಡಿಮೆ ಸಾಮರ್ಥ್ಯ ಹೊಂದಿದೆ. ಇದು ದೇಹದಲ್ಲಿನ ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಸಂಯೋಜನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಸಂಶೋಧನೆಯು ತಿಳಿಸಿದೆ.
ಫ್ರಾನ್ಸಿಸ್ ಕ್ರಿಕ್ ಇನ್ಸ್ಟಿಟ್ಯೂಟ್ ವಿಜ್ಞಾನಿಗಳು ಅದರ ಪರಿಣಾಮದ ಕುರಿತು ಅಧ್ಯಯನ ನಡೆಸಿದ್ದಾರೆ. ಈ ಸಂಬಂಧ ಅವರು ಅಮೆರಿಕ ಮತ್ತು ಯುರೋಪ್ನಲ್ಲಿ ಅನುಮತಿಸಲಾದ ಪ್ರಮಾಣದಲ್ಲಿ ಸುಕ್ರಲೋಸ್ ಅನ್ನು ಇಲಿಗಳ ಮೇಲೆ ನೀಡಿದರು. ಇದರ ಪರಿಣಾಮವಾಗಿ, ಆ ಜೀವಿಗಳ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ಟಿ ಜೀವಕೋಶಗಳು ಕ್ಯಾನ್ಸರ್ ಅಥವಾ ಸೋಂಕಿನ ಪ್ರತಿಕ್ರಿಯೆಯಾಗಿ ಕಡಿಮೆ ಸಕ್ರಿಯವಾಗಿವೆ. ಇತರ ರೀತಿಯ ಪ್ರತಿರಕ್ಷಣಾ ಕೋಶಗಳ ಸಕ್ರಿಯಗೊಳಿಸುವಿಕೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತೀರ್ಮಾನಿಸಲಾಯಿತು.
ವಿಜ್ಞಾನಿಗಳ ಎಚ್ಚರಿಕೆ: ಭವಿಷ್ಯದಲ್ಲಿ ಸ್ವಯಂ ನಿರೋಧಕ ಕಾಯಿಲೆಗಳ ಚಿಕಿತ್ಸೆಗಾಗಿ ಸುಕ್ರಲೋಸ್ ಅನ್ನು ಬಳಸಬಹುದು. ಟಿ ಕೋಶಗಳು ಅತಿಯಾಗಿ ಕ್ರಿಯಾಶೀಲವಾಗಿರುತ್ತವೆ. ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಲು ಅಥವಾ ರೋಗದಿಂದ ಚೇತರಿಸಿಕೊಳ್ಳಲು ಬಯಸುವವರಿಗೆ ಇದು ಸೂಕ್ತವಲ್ಲ ಎಂದು ಇದೇ ವೇಳೆ ವಿಜ್ಞಾನಿಗಳು ಸಲಹೆ ನೀಡಿದರು. ಕಾರಣ, ಸುಕ್ರಲೋಸ್‌ನ ಹೆಚ್ಚಿನ ಚಿಕಿತ್ಸಕ ಪ್ರಮಾಣವನ್ನು ಬಳಸುವ ಹೊಸ ಮಾರ್ಗಕ್ಕೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ದೇಹದ ಮೇಲೆ ಸುಕ್ರಲೋಸ್‌ನ ಪರಿಣಾಮಗಳನ್ನು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಆದರೆ, ಇತ್ತೀಚಿನ ಅಧ್ಯಯನಗಳು ಸುಕ್ರಲೋಸ್ ಸೂಕ್ಷ್ಮಜೀವಿಯ ಮೇಲೆ ಪರಿಣಾಮ ಬೀರುತ್ತದೆ. ಈ ಮೂಲಕ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸ್ವಯಂ ನಿರೋಧಕತೆಯಂತಹ ಪರಿಸ್ಥಿತಿಗಳನ್ನು ಸುಧಾರಿಸಲು, ವಿಶೇಷವಾಗಿ ಸಂಯೋಜಿತ ಚಿಕಿತ್ಸೆಗಳಲ್ಲಿ ಸುಕ್ರಲೋಸ್ ಅನ್ನು ಬಳಸಬಹುದೇ ಎಂದು ತೋರಿಸಿದೆ.
ಏನಿದು ಸುಕ್ರಲೋಸ್: ಸಾಮಾನ್ಯ ಡಯಟ್ ಆಗಿ ಸುಕ್ರಲೋಸ್ ಅನ್ನು ಆಹಾರ ಅಥವಾ ಪಾನೀಯದಲ್ಲಿ ಸೇವಿಸುವವರಿಗೆ ಇದರ ಪರಿಣಾಮ ಹೆಚ್ಚಾಗಿ ಕಾಣಿಸುವುದಿಲ್ಲ ಎಂದು ಇದೇ ವೇಳೆ ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಸಮತೋಲಿತ ಆರೋಗ್ಯಯುದ ಆಹಾರದ ವೇಳೆ ಸುಕ್ರಲೋಸ್ ಬಳಕೆ ಹಾನಿಕಾರಕ ಎಂಬುದನ್ನು ಮರೆಯಬಾರದು ಎಂದು ಇದೆ ವೇಳೆ ಎಚ್ಚರಿಸಿದ್ದಾರೆ.
ಆಹಾರ ಮತ್ತು ಪಾನೀಯದ ರುಚಿ ಹೆಚ್ಚಳಕ್ಕೆ ಈ ಕೃತಕ ಸಕ್ಕರೆ ಅಂಶದ ಸಿಹಿಕಾರಕಗಳನ್ನು ಬಳಕೆ ಮಾಡಲಾಗುವುದು. ಹಲವು ಬಗೆಯ ಕೃತಕ ಸಿಹಿಕಾರಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ಅನುಮೋದನೆಗೆ ಒಳಗೊಂಡ ಕೃತಕ ಸಿಹಿಕಾರಕ ಬಳಕೆ ಯಾವಾಗಲೂ ಸುರಕ್ಷಿತ. ಇದು ಕನಿಷ್ಠ ಕಾರ್ಬೋಹೈಡ್ರೇಟ್ಗಳನ್ನು ರುಚಿಯನ್ನು ಹೊಂದಿರುತ್ತದೆ.
ಇದನ್ನೂ ಓದಿ: ಶೀತ, ಕೆಮ್ಮಿನಿಂದ ಪಾರಾಗಲು ನಿಮ್ಮ ಡಯಟ್ನಲ್ಲಿರಲಿ ಈ ವಸ್ತುಗಳು!