ETV Bharat / sukhibhava

ಆಂಧ್ರಪ್ರದೇಶದ ಸೀತಾರಾಮರಾಜು ಜಿಲ್ಲೆಯಲ್ಲಿ ಆಂಥ್ರಾಕ್ಸ್ ಭೀತಿ.. ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್

author img

By

Published : Sep 2, 2022, 7:49 PM IST

Updated : Sep 2, 2022, 8:15 PM IST

ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮುಂಚಂಗಿಪುತ್ತುವಿನಲ್ಲಿ ಆಂಥ್ರಾಕ್ಸ್ ಲಕ್ಷಣಗಳಿರುವ ಶಂಕೆಯ ಮೇರೆಗೆ ಏಳು ಮಂದಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆ ನೆಗೆಟಿವ್ ಬಂದಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ಜೆ ನಿವಾಸ್ ತಿಳಿಸಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ಜೆ ನಿವಾಸ್
ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ಜೆ ನಿವಾಸ್

ಆಂಧ್ರಪ್ರದೇಶ: ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮುಂಚಂಗಿಪುಟ್ಟು ಮಂಡಲದ ದೂರದ ಗ್ರಾಮವಾದ ದೊರಗುಡದಲ್ಲಿನ ಜನರಿಗೆ ಆಂಥ್ರಾಕ್ಸ್ ತರಹದ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಇದು ವೈದ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಲಕ್ಷ್ಮೀಪುರಂ ಪಂಚಾಯಿತಿಯ ಗ್ರಾಮವಾದ ದೊರಗುಡದಲ್ಲಿ ಆಂಥ್ರಾಕ್ಸ್ ರೋಗಲಕ್ಷಣಗಳಿಂದ ಹತ್ತಾರು ಮಕ್ಕಳು ಮೃತಪಟ್ಟಿದ್ದರು.

ಇತ್ತೀಚೆಗಷ್ಟೇ ಆಶಾ ಕಾರ್ಯಕರ್ತೆಯೊಬ್ಬರು ಗ್ರಾಮದಲ್ಲಿ ಮಗುವಿನ ಗಾಯಗಳನ್ನು ನೋಡಿ ಫೋಟೋ ತೆಗೆದು ವೈದ್ಯರಿಗೆ ಕಳುಹಿಸಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಸುಮಿತ್ ಕುಮಾರ್, ಗುರುವಾರ ದೊರಗುಡ್ಡದಲ್ಲಿ ವಿಶೇಷ ವೈದ್ಯಕೀಯ ಶಿಬಿರ ಆಯೋಜಿಸಿದ್ದರು. ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ವೈದ್ಯಕೀಯ ತಪಾಸಣೆ ನಡೆಸಿತು.

15 ಜನರಲ್ಲಿ ರೋಗಲಕ್ಷಣಗಳಿದ್ದರೆ, ಅವರಲ್ಲಿ ಏಳು ಜನರಲ್ಲಿ ತೀವ್ರತರವಾದ ರೋಗಲಕ್ಷಣಗಳು ಕಂಡು ಬಂದಿವೆ. ಈಗಾಗಲೇ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ರಕ್ತದ ಮಾದರಿಗಳನ್ನು ವಿಶಾಖಪಟ್ಟಣಂ ಕೆಜಿಹೆಚ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ರಕ್ತದ ಮಾದರಿ ಸಂಗ್ರಹ: ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮುಂಚಂಗಿಪುತ್ತುವಿನಲ್ಲಿ ಆಂಥ್ರಾಕ್ಸ್ ಲಕ್ಷಣಗಳಿರುವ ಶಂಕೆಯ ಮೇರೆಗೆ ಏಳು ಮಂದಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆ ನೆಗೆಟಿವ್ ಬಂದಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ಜೆ. ನಿವಾಸ್ ತಿಳಿಸಿದ್ದಾರೆ.

ಗ್ರಾಮದಲ್ಲಿ ಮುಂಜಾಗ್ರತಾ ಕ್ರಮ: ಟಿಶ್ಯೂ ಕಲ್ಚರ್ ಪರೀಕ್ಷೆಯ ಸಂಪೂರ್ಣ ಫಲಿತಾಂಶ ಪಡೆಯಲು 48 ಗಂಟೆಗಳ ಕಾಲಾವಕಾಶ ಬೇಕಾಗಲಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಂಚಂಗಿಪುಟ್ಟು ಗ್ರಾಮದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಭಾಗದ ಎಲ್ಲ ಪ್ರಾಣಿಗಳಿಗೂ ಲಸಿಕೆ ಹಾಕಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಓದಿ: ವ್ಯಾಕ್ಸಿನ್ ಪಡೆದು ಓಮಿಕ್ರಾನ್​ ಸೋಂಕಿಗೊಳಗಾದವರಿಗೆ ಕೋವಿಡ್​ನಿಂದ ನಾಲ್ಕು ಪಟ್ಟು ಹೆಚ್ಚು ರಕ್ಷಣೆ

Last Updated : Sep 2, 2022, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.