ETV Bharat / sukhibhava

ಕೇರಳದಲ್ಲಿ ಮತ್ತೊಂದು ನಿಫಾ ಪ್ರಕರಣ.. ಸೋಂಕು ಪತ್ತೆಗೆ ಮೊಬೈಲ್​​ ವೈರಾಲಾಜಿ ಘಟಕಕ್ಕೆ ಚಾಲನೆ - ಸಕ್ರಿಯ ಸೋಂಕಿತರ ಸಂಖ್ಯೆ

Nipah Virus: ಕೇರಳದ ಕೋಯಿಕ್ಕೋಡ್​ ಜಿಲ್ಲೆಯಲ್ಲಿ ನಿಫಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.

another Nipah Case found in Kerala
another Nipah Case found in Kerala
author img

By ETV Bharat Karnataka Team

Published : Sep 15, 2023, 12:52 PM IST

ತಿರುವನಂತಪುರಂ: ಕೇರಳದಲ್ಲಿ ನಿಫಾ ಸೋಂಕು ಮತ್ತೊಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದು, ಒಟ್ಟಾರೆ ಸಕ್ರಿಯ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಕೋಯಿಕ್ಕೋಡ್​ನಲ್ಲಿ 39 ವರ್ಷದ ವ್ಯಕ್ತಿಯಲ್ಲಿ ನಿಫಾ ಸೋಂಕು ದೃಢಪಟ್ಟಿರುವ ಕುರಿತು ಆರೋಗ್ಯ ಸಚಿವರು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅದೃಷ್ಟವಶಾತ್​ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಅವರಲ್ಲಿ ಕಂಡು ಬಂದಿಲ್ಲ ಎಂದಿದ್ದಾರೆ.

ಮೊಬೈಲ್​​ ವೈರಾಲಾಜಿ ಘಟಕಕ್ಕೆ ಚಾಲನೆ: ಕೇರಳದಲ್ಲಿ ನಿಫಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸೋಂಕಿನ ಪರೀಕ್ಷೆಗೆ ಇಲ್ಲಿನ ರಾಜೀವ್​ ಗಾಂಧಿ ಸೆಂಟರ್​ ಫಾರ್​ ಬಯೋಟೆಕ್ನಾಲಜಿ (ಆರ್​ಜಿಸಿಬಿ) ಸುಸ್ಸಜ್ಜಿತ ಮೊಬೈಲ್​ ವೈರಾಲಜಿ ಪರೀಕ್ಷಾ ಪ್ರಯೋಗಾಲಯವನ್ನು ಹೊರ ತಂದಿದೆ. ಕೋಯಿಕ್ಕೋಡ್​ ಜಿಲ್ಲೆಯಲ್ಲಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಸಲಾಗಿದೆ.

ಈ ಮೊಬೈಲ್​ ವೈರಾಲಾಜಿ ಲ್ಯಾಬ್​​ಗೆ ಕೇರಳದ ವಿಧಾನಸಭೆ ಸಂಕೀರ್ಣದಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್​ ಚಾಲನೆ ನೀಡಿದರು. ಇದು ನಿಫಾ ಕಂಟೈನ್​ಮೆಂಟ್​ ಪ್ರದೇಶದಲ್ಲಿ ಈ ಆರ್​ಜಿಸಿಬಿ ಮಹತ್ವದ ಸೌಲಭ್ಯ ಒದಗಿಸಲಿದೆ. ಕೋಯಿಕ್ಕೋರ್​ ಪ್ರದೇಶದಲ್ಲಿ ಇದು ಹೆಚ್ಚಿನ ಮಾದರಿಗಳನ್ನು ಪರೀಕ್ಷಿಸಲು ಸಹಾಯ ಮಾಡಲಿದೆ.

ಬಯೋಸೈಫ್ಟಿ ಲೆವೆಲ್​ 2 (ಬಿಎಸ್​ಎಲ್​) ಪ್ಲಸ್​ ಲೆವೆಲ್​ 3 ತರಬೇತಿಯನ್ನು ಈ ಲ್ಯಾಬ್​ನಲ್ಲಿ ಮಾಡಬಹುದಾಗಿದೆ. ಎರಡು ಮೆಷಿನ್​ಗಳ ಸಮನಾಂತರವಾಗಿ ಕಾರ್ಯ ನಿರ್ವಹಿಸಲಿದೆ. ಯಾವುದೇ ಹೇಳಿದ ಸಮಯದಲ್ಲಿ ಮೆಷಿನ್​ ಅನ್ನು 96 ಮಾದರಿಗಳನ್ನು ಪರೀಕ್ಷೆ ನಡೆಸಲಿದೆ. ಎರಡು ಮೆಷಿನ್​ಗಳಿಂದ ಒಟ್ಟು 192 ಮಾದರಿಗಳನ್ನು ಪರಿಶೀಲಿಸಬಹುದಾಗಿದೆ ಎಂದು ಜಾರ್ಜ್ ತಿಳಿಸಿದರು. ಪುಣೆಯ ನ್ಯಾಷನಲ್​ ಇನ್ಸುಟಿಟ್ಯೂಟ್​ ಆಫ್​ ಬಯೀಸೈನ್ಸ್​​ (ಎನ್​ಐಬಿ) ಮೊಬೈಲ್​ ಲ್ಯಾಬ್​ಗಳು ಈಗಾಗಲೇ ಕೋಯಿಕ್ಕೋಡ್​​ಗೆ ಬಂದು ತಲುಪಿವೆ ಎಂದರು.

ಆರ್​ಜಿಸಿಬಿ ನಿರ್ದೇಶಕ ಪ್ರೋ ಚಂದ್ರಭೋಸ್​ ನಾರಾಯಣ್​ ಮಾತನಾಡಿ, ಈ ಮೊಬೈಲ್​ ಘಟಕದಲ್ಲಿ ಆರು ತಜ್ಞರ ಗುಂಪು ಸೇವೆಗೆ ಲಭ್ಯವಿದೆ. ಮಾದರಿ ಪರೀಕ್ಷೆ ನಡೆಸಿ, ಫಲಿತಾಂಶ ಬರಲು ಆರು ಗಂಟೆ ಆಯಿತು. ಮೊಬೈಲ್​ ಲ್ಯಾಬ್​ ಕಂಟೈನ್​ಮೆಂಟ್​ ವಲಯದಲ್ಲಿ ನಿಯೋಜಿಸಲಾಗಿದೆ. ಎಷ್ಟೇ ಸಣ್ಣ ಪ್ರಮಾಣದ ಮಾದರಿಗಳನ್ನು ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.

ಬಿಎಸ್​ಎಲ್​ 3 ಸೌಲಭ್ಯ, ಮೊಬೈಲ್​ ಲ್ಯಾಬ್​ ಡಬಲ್​ ಏರ್​ಲಾಕ್​ ವ್ಯವಸ್ಥೆಯನ್ನು ಹೊಂದಿದೆ. ಸ್ಥಳದ;ಲ್ಲಿ ಪತ್ತೆ ಮಾಡುವ ಮತ್ತು ಜೈವಿಕ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಕ್ಟೀರಿಯಾ, ಶೀಲೀಂದ್ರ ಮತ್ತು ರೋಗಕಾರಕ ಜೀವಿಗಳಿಗೆ ಪರೀಕ್ಷೆಯನ್ನು ಮಾಡಬಹುದು ಎಂದು ನಾರಾಯಣ ಅವರು ತಿಳಿಸಿದ್ದಾರೆ.

ಆರ್​ಜಿಸಿಬಿ ಅತ್ಯಾಧುನಿಕ ಯಂತ್ರೋಪಕರಣ ಹೊಂದಿದೆ. ರೋಗ ನಿರ್ಣಯ ಪರಿಣಿತಿಯನ್ನು ಹೊಂದಿರುವ ಸಿಬ್ಬಂದಿಗಳು ಇದರಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಮತ್ತೆ ನಿಫಾ ಉಲ್ಬಣ; ರಾಜ್ಯದಲ್ಲಿ ನಾಲ್ಕನೇ ಬಾರಿ ಕಾಣಿಸಿಕೊಂಡ ಸೋಂಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.