ETV Bharat / sukhibhava

ಕೂದಲು ಬೂದು ಬಣ್ಣಕ್ಕೆ ತಿರುಗಲು ಕಾರಣ ಪತ್ತೆ ಮಾಡಿದ ಅಮೆರಿಕ ವಿಜ್ಞಾನಿಗಳು - ಕೆಲವರಿಗೆ ಈ ಬಿಳಿ ಕೂದಲಿನ ಸಮಸ್ಯೆ ಕಾಡುತ್ತದೆ

ಕೂದಲು ಬೂದು ಬಣ್ಣಕ್ಕೆ ತಿರುಗಲು ಕಾರಣ ಏನು ಎಂಬ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಅದರ ಅನುಸಾರ ಬೂದು ಕೂದಲಿಗೆ ಕಾಂಡ ಕೋಶಗಳು ಕಾರಣ ಎಂದು ಅಮೆರಿಕದ ವಿಜ್ಞಾನಿಗಳು ತಿಳಿಸಿದ್ದಾರೆ.

American scientists have discovered the cause of hair turning gray

author img

By

Published : Apr 22, 2023, 11:40 AM IST

ನ್ಯೂಯಾರ್ಕ್​: ವಯಸ್ಸಾದಂತೆ ಬಿಳಿ ಕೂದಲು ಆಗುವುದು ಸಹಜ. ಆದರೆ, ವಯಸ್ಸಿಗೆ ಮುಂಚೆ ಕೆಲವರಿಗೆ ಈ ಬಿಳಿ ಕೂದಲಿನ ಸಮಸ್ಯೆ ಕಾಡುತ್ತದೆ. ಯುವಜನತೆಯಲ್ಲೂ ಕಾಡುವ ಬೂದು ಬಣ್ಣದ ಸಮಸ್ಯೆ ಅವರಲ್ಲಿ ಚಿಂತೆ ಮೂಡಿಸದೇ ಇರಲಾರದು. ಪರಿಸರಾತ್ಮಕ ಕಾರಣಗಳ ಹೊರತಾಗಿ ಕೂದಲು ಬೂದು ಬಣ್ಣಕ್ಕೆ ತಿರುಗಲು ಕಾರಣ ಏನು ಎಂಬ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಅದರ ಅನುಸಾರ ಬೂದು ಕೂದಲಿಗೆ ಕಾಂಡ ಕೋಶಗಳು ಕಾರಣ ಎಂದು ಅಮೆರಿಕದ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕುರಿತು ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನವನ್ನು ನೇಚರ್​ ಜರ್ನಲ್​ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ.

ಮೆಲನೊಸೈಟ್​ ಕಾಂಡಕೋಶ: ಕೂದಲಿನ ಕಿರುಚೀಲಗಳನ್ನು ಹೊಂದಿದ್ದು, ಅದು ಚರ್ಮದ ಕೋಶಗಳನ್ನು ರೂಪಿಸುವ ಸಣ್ಣ ಚೀಲಗಳಾಗಿವೆ. ಈ ಕೂದಲು ಕಿರುಚೀಲಗಳು ಮೆಲನಿನ್ ಎಂದು ಕರೆಯಲ್ಪಡುವ ಪಿಗ್ಮೆಂಟ್ ಕೋಶಗಳನ್ನು ಹೊಂದಿರುತ್ತವೆ. ಈ ಸ್ಕೀ ಕೋಶಗಳು ನಿಮ್ಮ ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ. ಆದರೆ, ಕಾಲಾನಂತರದಲ್ಲಿ, ಈ ಕೂದಲಿನ ಕಿರುಚೀಲಗಳು ತಮ್ಮ ನೈಸರ್ಗಿಕ ವರ್ಣದ್ರವ್ಯ ಕಳೆದುಕೊಳ್ಳಬಹುದು ಇದರಿಂದ ಇದು ಕೂದಲು ಬೂದು ಬಣ್ಣಕ್ಕೆ ತಿರುಗುತ್ತದೆ. ಇದರಲ್ಲಿ ವ್ಯಕ್ತಿಯ ಮೆಲನೊಸೈಟ್​ ಕಾಂಡಕೋಶ ಪ್ರಮುಖ ಪಾತ್ರವಹಿಸುತ್ತದೆ.

ಅಧ್ಯಯನದಲ್ಲಿ ಮೆಲನೋಮೈಟ್​ ಕಾಂಡಕೋಶ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತು ತಿಳಿದುಕೊಳ್ಳಲಾಗುವುದು ಎಂದು ಎವೈಯು ಲ್ಯಾಂಗೋನ್​ ಹೆಲ್ತ್​​ನಲ್ಲಿ ಕ್ವಿ ಸನ್​ ತಿಳಿಸಿದ್ದಾರೆ. ಮೆಲನೋಸೈಟ್​ ಕಾಂಡಕೋಶ ಬದಲಾವಣೆ ಕಾರ್ಯ ನಷ್ಟದಿಂದ ಕೂದಲಿನ ಬಣ್ಣ ಬದಲಾಗುವುದು ಕಾರಣವಾಗುತ್ತದೆ. ಈ ಸಂಶೋಧನೆಗಳು ಮೆಲನೋಸೈಟ್​ ಕಾಂಡಕೋಶದ ಚಲನಶೀಲತೆ ಮತ್ತು ರಿವರ್ಸಬಲ್​ ಡಿಫರೆನ್ಷಿಯಲ್​ ಕೂದಲನ್ನು ಆರೋಗ್ಯವಾಗಿಡಲು ಪ್ರಮುವಾಗುತ್ತದೆ ಎಂದು ತಿಳಿಸಿದ್ದಾರೆ.

ಪಿಗ್ಮೆಂಟ್​ ಉತ್ಪಾದನೆಯಲ್ಲಿ ವಿಫಲವಾದಾಗ ಕೂದಲು ಕಿತ್ತುಬರುವ ಮತ್ತು ಬಲವಂತವಾಗಿ ಬೆಳೆಯುವ ಮೂಲಕ ದೈಹಿಕವಾಗಿ ವಯಸ್ಸಾದಾಗ, ಇಲ್ಲ ಮೆಲನೊಸೈಟ್​ ಕಾಂಡಕೋಶಗಳೊಂದಿಗೆ ಕೂದಲು ಕಿರುಚೀಲಗಳು ಸಂಖ್ಯೆಯು ಕೋಶಕ ಉಬ್ಬುಗಳಲ್ಲಿ 15ರಷ್ಟು ಹೆಚ್ಚಾದಾಗ ಈ ಪ್ರಕ್ರಿಯೆ ಉಂಟಾಗುತ್ತದೆ. ಇದರಿಂದ ಬಲವಂತವಾಗಿ ಕೂದಲು ನೆರೆತ ಸಮಸ್ಯೆ ಉಂಟಾಗುತ್ತದೆ. ಇವು ಪಿಗ್ಮೆಂಟ್​ ಉತ್ಪಾದಿಸಲು ಮೆಲನೋಸೈಟ್​ಗಳಾಗಿ ಪಕ್ವವಾಗಲು ಅಸಮರ್ಥವಾಗಿಸುತ್ತದೆ ಎಂದು ತಿಳಿಸಿದರು.

ಕೂದಲಿನ ಸೂಕ್ಷ್ಮಾಣುಗಳ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವುದನ್ನು ಮುಂದುವರಿಸಲು ಇತರ ಮೆಲನೋಸೈಟ್ ಪುನರುತ್ಪಾದಿಸುವ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತದೆ. ಮೆಲನೋಸೈಟ್‌ಗಳಾಗಿ ಚಲನಶೀಲತೆಯನ್ನು ಮರುಸ್ಥಾಪಿಸುವ ಅಥವಾ ಭೌತಿಕವಾಗಿ ಅವುಗಳನ್ನು ತಮ್ಮ ಸೂಕ್ಷ್ಮಾಣು ವಿಭಾಗಕ್ಕೆ ಹಿಂತಿರುಗಿಸುವ ವಿಧಾನಗಳನ್ನು ತನಿಖೆ ಮಾಡಲು ತಂಡವು ಯೋಜಿಸಿದೆ ಎಂದು ಇಟೊ ಹೇಳಿದರು. ಅಲ್ಲಿ ಅವರು ಕೂದಲಿನ ಬಣ್ಣದ ದ್ರವ್ಯವನ್ನು ಉತ್ಪಾದಿಸಬಹುದು. ನರಗಳ ನೊರ್ಪೈನ್ಫ್ರಿನ್ ಕಾಂಡಕೋಶಗಳನ್ನು ಅತಿಯಾಗಿ ಸಕ್ರಿಯಗೊಳಿಸಲು ಕಾರಣವಾಗುತ್ತದೆ. ಕಾಂಡಕೋಶಗಳೆಲ್ಲವೂ ಪಿಗ್ಮೆಂಟ್-ಉತ್ಪಾದಿಸುವ ಕೋಶಗಳಾಗಿ ಪರಿವರ್ತನೆಗೊಳ್ಳುತ್ತವೆ.

ಇದರ ಹೊರತಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೂದು ಬಣ್ಣಕ್ಕೆ ತಿರುಗಲು ಒತ್ತಡ. ಅನುವಂಶಿಕತೆ, ವಿಟಮಿನ್​ ಬಿ 12 ಕೊರತೆ, ಥೈರಾಯ್ಡ್​ ಸಮಸ್ಯೆಗಳು ಕಾರಣವಾಗುತ್ತದೆ. ಈ ಕುರಿತು ಅಗತ್ಯ ಕಾಳಜಿವಹಿಸಬೇಕಿದೆ.

ಇದನ್ನೂ ಓದಿ: ಭಾರತೀಯ ಯುವ ಜನರ ಮಾನಸಿಕ ಅರೋಗ್ಯದ ಮೇಲೆ ಕೋವಿಡ್​ ಮತ್ತು ಹವಮಾನ ಬದಲಾವಣೆಯಿಂದ ನಕಾರಾತ್ಮಕ ಪರಿಣಾಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.