ವಾಷಿಂಗ್ಟನ್: ಕೂದಲಿನ ಸ್ಟ್ರೈಟ್ನಿಂಗ್ (ನೇರ ಗೊಳಿಸಲು) ಮಾಡಲು ಬಳಕೆ ಮಾಡುವ ಉತ್ಪನ್ನಗಳನ್ನು ರಾಸಾಯನಿಕ ಅಂಶಗಳಿದ್ದು, ಅವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆ ಕೆಲವು ಉತ್ಪನ್ನಗಳನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಅಮೆರಿಕದ ಫುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ (ಎಫ್ಡಿಎ) ಹೊಂದಿದೆ.
ಫಾರ್ಮಾಲ್ಡಿಹೈಡ್ ರಾಸಾಯನಿಕ ಮತ್ತು ಫಾರ್ಮಾಲ್ಡಿಹೈಡ್ ಬಿಡುಗಡೆ ಮಾಡುವ ಮೆಥೆಲೆನೆ ಅಥವಾ ಗ್ಲೆಕೊಲ್ ರಾಸಾಯನಿಕಗಳು ಹೊಂದಿರುವ ಉತ್ಪನ್ನಗಳನ್ನು ಮಾತ್ರ ನಿಷೇಧಿಸುವ ಗುರಿಯನ್ನು ಹೊಂದಲಾಗಿದೆ.
ಈ ರಾಸಾಯನಿಕಗಳನ್ನು ಕೆಲವು ನಿರ್ದಿಷ್ಟ ಸೌಂದರ್ಯ ವರ್ಧಿತ ಉತ್ಪನ್ನಗಳಲ್ಲಿದೆ. ಇವುಗಳನ್ನು ಕೂದಲನ್ನು ನೇರವಾಗಿಸುವ ಅಥವಾ ಮೃದುವಾಗಿಸುವ ಚಿಕಿತ್ಸೆಗಳ ಸಾಧನಗಳಲ್ಲಿ ಮತ್ತು ರಾಸಾಯನಿಕಗಳ ಭಾಗವಾಗಿ ಕೂದಲಿಗೆ ಬಳಕೆ ಮಾಡಲಾಗುವುದು
ಹಲವು ಆರೋಗ್ಯದ ಅಪಾಯ: ಈ ರಾಸಾಯನಿಕಗಳು ಕಡಿಮೆ ಅವಧಿಯ ಆರೋಗ್ಯ ಅಪಾಯಗಳಾದ ಸೆನ್ಸೆಷನಲ್ ಪ್ರತಿಕ್ರಿಯೆ ಮತ್ತು ಉಸಿರಾಟ ಸಮಸ್ಯೆ ಹೊಂದಿದ್ದು. ಕೆಲವೊಮ್ಮೆ ಕ್ಯಾನ್ಸರ್ನಂತಹ ದೀರ್ಘ ಕಾಲದ ಆರೋಗ್ಯದ ಪರಿಣಾಮ ಹೊಂದಿದೆ ಎಂದು ಎಫ್ಡಿಎ ತಿಳಿಸಿದೆ. ಪ್ರಸ್ತಾವನೆ ನಿಯಮ ಸಲ್ಲಿಕೆ ಬಳಿಕ ಎಫ್ಡಿಎ ಸಾರ್ವಜನಿಕ ಹೇಳಿಕೆಯನ್ನು ಪರಿಶೀಲಿಸಲಿದ್ದು, ಬಳಿಕ ಮುಂದಿನ ಅಗತ್ಯ ಕ್ರಮದ ಬಗ್ಗೆ ನಿರ್ಧರಿಸಲಿದೆ.
ಈ ಹೇಳಿಕೆ ಆಧಾರದ ಮೇಲೆ ನಾವು ನಿಯಮ ರೂಪಿಸುವ ಪ್ರಕ್ರಿಯೆಯನ್ನು ನಿರ್ಧಾರವನ್ನು ಅಂತಿಮಗೊಳಿಸಲಿದ್ದಾರೆ. ನಾವು ಹೊಸ ನಿಯಮದ ಪ್ರಸ್ತಾವನೆ ಹೊಂದಿದ್ದು, ಅಂತಿಮ ನಿಯವವನ್ನು ನೀಡಲಿದ್ದೇವೆ. ಅಂತಿಮ ನಿಯಮವನ್ನು ನಾವು ಜಾರಿ ಮಾಡಲು ನಿರ್ಧರಿಸಿದರೆ, ಅದನ್ನು ಫೆಡರಲ್ ರಿಜಿಸ್ಟ್ರಲ್ ಅಂತಿಮ ನಿಯಮವನ್ನು ಪ್ರಕಟಿಸಲಿದೆ ಎಂದು ಎಫ್ಡಿಎ ತಿಳಿಸಿದೆ.
ಅಧ್ಯಯನದಲ್ಲೂ ಸಾಬೀತು: ಈ ಅಧ್ಯಯನದಲ್ಲಿ ಕೂಡ ರಾಸಾಯನಿಕವೂ ಗರ್ಭಕಂಠ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಜೊತೆಗೆ ಸಂಬಂಧ ಹೊಂದಿದೆ ಎಂದು ತೋರಿಸಿದೆ. ಕಳೆದ ವರ್ಷ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಜರ್ನಲ್ನಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟವಾಗಿತ್ತು. ಈ ಸಂಶೋಧನೆಯಲ್ಲಿ ಸ್ಟ್ರೈಟ್ನಿಮಗ್ ಉತ್ಪನ್ನಗಳು ಮತ್ತು ಅಂಡಾಶಯದ ಕ್ಯಾನ್ಸರ್ ನಡುವಿನ ಸಂಪರ್ಕವನ್ನು ತೋರಿಸಿತು. ಇದಕ್ಕಾಗಿ 34 ಸಾವಿರ ಅಮೆರಿಕದ ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 35 ರಿಂದ 74 ವರ್ಷದ ಮಹಿಳೆಯರನ್ನು ಒಳಗೊಂಡ ಅಧ್ಯಯನದಲ್ಲಿ 12 ತಿಂಗಳುಗಳಲ್ಲಿ ಕೂದಲು ಸ್ಟ್ರೈಟ್ನಿಂಗ್ಗೆ ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಇರುವವರಿಗೆ ಹೋಲಿಸಿದರೆ ಬಳಕೆ ಮಾಡಿದವರಲ್ಲಿ ಗರ್ಭಾಶಯದ ಕ್ಯಾನ್ಸರ್ ದರ ಹೆಚ್ಚಿರುವುದನ್ನು ಅಧ್ಯಯನ ಪತ್ತೆ ಮಾಡಿತು. (ಐಎಎನ್ಎಸ್)
ಇದನ್ನೂ ಓದಿ: ಉದ್ದದ ಬಲಶಾಲಿ ಕೂದಲು ನಿಮ್ಮದಾಗಬೇಕೇ? ಈ ನೈಸರ್ಗಿಕ ಪದಾರ್ಥಗಳಿಂದ ಆರೈಕೆ ಮಾಡಿ ಸಾಕು!