ETV Bharat / sukhibhava

ವಾಯು ಮಾಲಿನ್ಯದಿಂದ ಹೆಚ್ಚುತ್ತಿದೆ ಸಿವಿಡಿ ಸಾವು.. ಅಂಗವೈಕಲ್ಯತೆಯ ಅಪಾಯ - ಅಕಾಲಿಕ ಸಾವಿನಂತಹ ಅಪಾಯ

ವಾಯು ಮಾಲಿನ್ಯದ ನಿರ್ದಿಷ್ಟ ಕಣಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

http://10.10.50.85:6060/reg-lowres/10-August-2023/heart-1_1008newsroom_1691641065_755.jpg

author img

By

Published : Aug 10, 2023, 10:41 AM IST

ಸ್ಯಾನ್​ ಪ್ರಾನ್ಸಿಸ್ಕೊ( ಅಮೆರಿಕ): ನಿರ್ದಿಷ್ಟ ವಾಯು ಮಾಲಿನ್ಯ ಜಗತ್ತಿನಾದ್ಯಂತ ಹೃದಯ ರಕ್ತನಾಳ ಸಮಸ್ಯೆ (ಸಿವಿಡಿ) ಮತ್ತು ಅಕಾಲಿಕ ಸಾವಿನಂತಹ ಅಪಾಯವನ್ನು ಹೆಚ್ಚಿಸುತ್ತಿದೆ. ಅಲ್ಲದೇ ಇದು ಅಂಗವೈಕಲ್ಯಕ್ಕೂ ಕಾರಣವಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಜರ್ನಲ್​ ಆಫ್​ ದಿ ಅಮೆರಿಕನ್​ ಹಾರ್ಟ್​ ಅಸೋಸಿಯೇಷನ್​ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಸಾವು ಮತ್ತು ಅಂಗವೈಕಲ್ಯದೊಂದಿಗೆ ಮಾಲಿನ್ಯದ ಅಪಾಯದ ಕಣಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಈ ಅಧ್ಯಯನಕ್ಕಾಗಿ 1990ರಿಮದ 2019ರವರೆಗೆ 204 ದೇಶಗಳ ದತ್ತಾಂಶವನ್ನು ಸಂಗ್ರಹಿಸಲಾಗಿದೆ.

ಈ ಹಿಂದಿನ ಅಧ್ಯಯನದಲ್ಲಿ ಮಾಲಿನ್ಯದ ಕಣಗಳು ಸಿವಿಡಿ ಸಾವು ಮತ್ತು ಅಂಗವೈಕಲ್ಯದೊಂದಿಗೆ ಸಂಬಂಧ ಹೊಂದಿರುವುದನ್ನು ತಿಳಿಸಲಾಗಿದೆ. ಈ ರೀತಿ ಮಾಲಿನ್ಯಗಳ ಜಗತ್ತಿನಾದ್ಯಂತ ಬೀರುವ ಪರಿಣಾಮಗಳು ಮತ್ತು ಸಮಯ ಬಂದಂತೆ ಆಗುವ ಬದಲಾವಣೆಗಳ ಕುರಿತು ಪ್ರಶ್ನೆಗಳು ಹಾಗೇ ಉಳಿದಿದೆ ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.

ಈ ಮಾಲಿನ್ಯ ಜಾಗತಿಕವಾಗಿ ಹೇಗೆ ಹೊರೆಯಾಗುತ್ತಿದೆ ಎಂಬುದನ್ನು ಪರೀಕ್ಷೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಏಕೆಂದರೆ ಮಾಲಿನ್ಯದ ನಿರ್ಧಿಷ್ಟ ಕಣಗಳು ಪರಿಸರದಲ್ಲಿ ಅಪಾಯಕಾರಿ ಅಂಶವನ್ನು ಹರಡಿದ್ದು, ಅದು ಜಗತ್ತಿನ ಎಲ್ಲ ಮಾಲಿನ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ನಾವು ಇದು ಹೃದಯ ರಕ್ತನಾಳದ ಆರೋಗ್ಯದ ಮೇಲೆ ಬೀರುವ ಪರಿಣಾಮ ಮತ್ತು ಜನರ ಆರೋಗ್ಯದ ಮದ್ಯಸ್ಥಿಕೆ ಮತ್ತು ನಿಯಮದ ನಿರ್ಧಾರಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅಧ್ಯಯನದ ಲೇಖಕ ಫರ್ಶಾದ್​ ಫರ್ಜಾದ್ಫರ್​​ ತಿಳಿಸಿದ್ದಾರೆ.

ಈ ವಿಶ್ಲೇಷಣೆಯಲ್ಲಿ 1990ರಲ್ಲಿ 2.6 ಮಿಲಿಯನ್​ ನಿರ್ದಿಷ್ಟ ಕಣಗಳ ವಾಯು ಮಾಲಿನ್ಯದಿಂದ ಅಕಾಲಿಕವಾಗಿ ಸಾವನ್ನಪ್ಪಿದ ಮತ್ತು ಹೃದಯ ರಕ್ತನಾಳದ ಅಂಗವೈಕಲ್ಯಕ್ಕೆ ಒಳಗಾದರೆ 2019ರಲ್ಲಿ 3.5 ಮಿಲಿಯನ್​ ಮಂದಿ ಒಳಗಾಗಿದ್ದಾರೆ. ಇದರ ಒಟ್ಟಾರೆ ಸಂಖ್ಯೆಯಲ್ಲಿ ಶೇ 31ರಷ್ಟು ಹೆಚ್ಚಳ ಕಂಡು ಬಂದಿದೆ.

ಇನ್ನು ಈ ಸಾವಿನ ಪ್ರಮಾಣ ಮಹಿಳೆಯರಲ್ಲಿ ಶೆ 23.3 ರಷ್ಟು ಕಂಡು ಬಂದಿದ್ದರೆ, ಪುರುಷರಲ್ಲಿ ಶೇ 43ರಷ್ಟು ಕಂಡು ಬಂದಿದೆ. 1990 ಮತ್ತು 2019ರ ಮಧ್ಯಯದಲ್ಲಿ ಶೇ 36.7 ರಷ್ಟು ಮಂದಿ ವಯಸ್ಸಿನ ಪ್ರಮಾಣಿತ ಅಕಾಲಿಕ ಸಾವನ್ನಪ್ಪಿದ್ದಾರೆ. ಅಂದರೆ ಕೆಲವು ಮಂದಿ ಹೃದಯರಕ್ತನಾಳ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಕೆಲವು ಜನರು ದೀರ್ಘಾವಧಿಯ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಅಧಿಕ ಸಾಮಾಜಿಕ - ಆರ್ಥಿಕ ಪರಿಸ್ಥಿತಿಯ ಪ್ರದೇಶದಲ್ಲಿ ಈ ಮಾಲಿನ್ಯದಿಂದ ಜನರು ಕಡಿಮೆ ಜೀವಿತಾವಧಿ ಹೊಂದಿದ್ದಾರೆ. ಹೃದಯರಕ್ತನಾಳದ ಪ್ರಭಾವದಲ್ಲಿನ ಬದಲಾವಣೆಗಳು ಪುರುಷರು ಮತ್ತು ಮಹಿಳೆಯರ ನಡುವೆ ಭಿನ್ನವಾಗಿವೆ.

1990 ಮತ್ತು 2019ರ ನಡುವೆ ವಯೋ ಪ್ರಮಾಣಿತ ಸಿವಿಡಿ ಸಾವು ಮತ್ತು ಅಂಗವೈಕಲ್ಯದ ಪ್ರಮಾಣವು ವಾಯು ಮಾಲಿನ್ಯವನ್ನು ಶೇ 8.1ರಷ್ಟು ಹೆಚ್ಚಿಸಿದೆ. ಇನ್ನು ಒಳಾಂಗಣ ಮಾಲಿನ್ಯವೂ (ಅಡುಗೆ ಹೊಗೆ ಸೇರಿದಂತೆ ಇನ್ನಿತರೆ ಅಂಶ) ಶೇ 65.4ರಷ್ಟು ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: Heart attack protein: ಹೃದಯಾಘಾತದ ಪ್ರೋಟಿನ್‌ ಎಂದರೇನು? ಪ್ರಾಣಾಪಾಯ ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.