ETV Bharat / sukhibhava

ನಗರದ ಮಕ್ಕಳಲ್ಲಿ ಅಸ್ತಮಾ ಹೆಚ್ಚಿಸುವ ವಾಯು ಮಾಲಿನ್ಯ; ಲ್ಯಾನ್ಸೆಟ್​ ವರದಿ - ಹದಿಹರೆಯದವರಲ್ಲಿ ಆಸ್ತಮಾ ದಾಳಿಯನ್ನು ಕೆರಳಿಸಬಹುದು

ಕಡಿಮೆ ಆದಾಯದ ನಗರ ಪ್ರದೇಶದ ಮಕ್ಕಳು ಅಸ್ತಮಾ ದಾಳಿಯ ನಿರ್ದಿಷ್ಟ ಅಪಾಯ ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Air pollution increases asthma attacks in urban children

author img

By ETV Bharat Karnataka Team

Published : Dec 23, 2023, 4:03 PM IST

ನ್ಯೂಯಾರ್ಕ್( ಅಮೆರಿಕ)​: ವಾಯು ಮಾಲಿನ್ಯ ಮಕ್ಕಳು ಮತ್ತು ಹದಿಹರೆಯದವರಲ್ಲಿ ಅಸ್ತಮಾವನ್ನು ಹೆಚ್ಚಿಸಬಹುದು ಎಂದು ದಿ ಲ್ಯಾನ್ಸೆಟ್​​ ಫ್ಲಾನೆಟರಿ ಹೆಲ್ತ್​​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಓಝೋನ್​ನ ಸುಧಾರಿತ ಮಟ್ಟ ಮತ್ತು ಸೂಕ್ಷ್ಮವಾದ ವಾಯು ಕಣಗಳು ಹೊಗೆಯ ಎರಡು ಅಂಶಗಳಾಗಿವೆ. ಇವು ಮಕ್ಕಳಲ್ಲಿ ಆಸ್ತಮಾ ದಾಳಿಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ನಗರದಲ್ಲಿ ಮಕ್ಕಳಲ್ಲಿ ನಿರ್ದಿಷ್ಟ ವಾಯು ಮಾಲಿನ್ಯಕಾರಕಗಳ ಮತ್ತು ಆಸ್ತಮಾ ದಾಳಿಗಳ ನಡುವೆ ಹೆಚ್ಚಿನ ಪೂರಕ ಸಂಬಂಧಗಳಿವೆ. ವಾಯು ಮಾಲಿನ್ಯವನ್ನು ಕಡಿಮೆ ಮಾಡುವುದರಿಂದ ಆರೋಗ್ಯ ಸುಧಾರಿಸಬಹುದು ಎಂಬುದಕ್ಕೆ ಹಲವು ಪುರಾವೆಳಿವೆ ಎಂದು ಯುಎಸ್​ ನ್ಯಾಷನಲ್​​ ಇನ್ಸುಟಿಟ್ಯೂಟ್​ ಆಫ್​ ಅಲರ್ಜಿ ಅಂಡ್​ ಇನ್ಫೆಕ್ಷಸ್​ ಡೀಸಿಸ್​​ ಕಾರ್ಯಕಾರಿ ನಿರ್ದೇಶಕ ಡಾ ಹಗ್ ಆಚಿನ್‌ಕ್ಲೋಸ್ ತಿಳಿಸಿದ್ದಾರೆ.

ನಗರದ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ವಾಯು ಮಾಲಿನ್ಯ ಮಟ್ಟವೂ ಹೆಚ್ಚಿದ್ದು, ಇದು ಅಸ್ತಮಾ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬ ಅಂಶವೂ ಅಧ್ಯಯನದ ವೇಳೆ ಕಂಡು ಬಂದಿದೆ. ಅಸ್ತಮಾ ದಾಳಿ ವೇಳೆಯಲ್ಲಿ ಊರಿಯೂತದ ಕಾರಣ ಸ್ನಾಯು ಊತಕ್ಕೆ ಕಾರಣವಾಗುತ್ತದೆ. ಈ ವೇಳೆ ವಾಯುಮಾರ್ಗಗಳ ಸುತ್ತಲಿನ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಶ್ವಾಸಕೋಶದ ಒಳಗೆ ಮತ್ತು ಹೊರಗೆ ಗಾಳಿಯು ಹಾದು ಹೋಗುವ ಜಾಗವನ್ನು ಗಣನೀಯವಾಗಿ ಕಿರಿದಾಗಿಸುತ್ತದೆ.

ಕಡಿಮೆ ಆದಾಯದ ನಗರ ಪ್ರದೇಶದ ಮಕ್ಕಳು ಆಸ್ತಮಾ ದಾಳಿಯ ನಿರ್ದಿಷ್ಟ ಅಪಾಯ ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ ಆರರಿಂದ 17 ವರ್ಷದ 208 ಮಕ್ಕಳನ್ನು ಭಾಗಿ ಮಾಡಿಕೊಳ್ಳಲಾಗಿತ್ತು. ತಂಡವೂ ನಗರ ಪ್ರದೇಶದಲ್ಲಿನ ಮಕ್ಕಳ ಅಸ್ತಮಾ ದಾಳಿ ವರದಿಯನ್ನು ಪ್ರತಿನಿತ್ಯದ ವಾಯುಗುಣಮಟ್ಟದೊಂದಿಗೆ ಪತ್ತೆ ಮಾಡಿದೆ. ಇದೇ ವೇಳೆ, ಶ್ವಾಸಕೋಶ ವೈರಸ್​ ನಿಂದ ಬಳಲದ ಮಕ್ಕಳಲ್ಲಿ ಅಸ್ತಮಾ ದಾಳಿ ಬಗ್ಗೆ ಕೂಡ ಪರಿಶೀಲಿಸಲಾಗಿದೆ.

ಸಂಶೋಧಕರು ಅಸ್ತಮಾ ದಾಳಿಯು ವೈರಸ್​​ಗಿಂದ ಶೇ 30ರಷ್ಟು ಮಟ್ಟದಲ್ಲಿ ವಾಯು ಮಾಲಿನ್ಯದಿಂದ ಆಗುತ್ತದೆ ಎಂಬುದನ್ನು ಪತ್ತೆ ಮಾಡಿದ್ದಾರೆ. ನಗರ ಪ್ರದೇಶದಲ್ಲಿ ವಾಸಿಸುವ ಮೂರರಲ್ಲಿ ಎರಡು ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಾಣಿಸುತ್ತದೆ. ಈ ದಾಳಿಯು ಸ್ಥಳ ವಾಯು ಸೂಕ್ಷ್ಮಕಣಗಳು ಮತ್ತು ಹೊರಾಂಗಣದ ಗಾಳಿಯ ವಾಯುವಿನೊಂದಿಗೆ ನಿರ್ದಿಷ್ಟ ಸಂಬಂಧದ ಮೇಲೆ ದಾಳಿ ಮಾಡಿದೆ ಎಂದು ತಂಡ ತಿಳಿಸಿದೆ.

ಈ ಫಲಿತಾಂಶವೂ ವ್ಯಕ್ತಿ ವಾಯು ಮಾರ್ಗದ ಮೇಲೆ ವಾಯು ಮಾಲಿನ್ಯ ಬೀರುವ ಹಾನಿಕಾರಕ ಪರಿಣಾಮವನ್ನು ಗುರಿಯಾಗಿಸಿ ಚಿಕಿತ್ಸೆಗೆ ತಿಳಿಸುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: ಶ್ವಾಸಕೋಶ ಸಂಬಂಧಿ ಅನಾರೋಗ್ಯ ಹೆಚ್ಚಳ; ದೆಹಲಿ ಸರ್ಕಾರದಿಂದ ಮುನ್ನೆಚ್ಚರಿಕೆ ಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.