ಟೊರೊಂಟೊ(ಕೆನಡಾ): ಬಂಜೆತನಕ್ಕೆ ಆಯುರ್ವೇದ ಔಷಧಿಯ ಚಿಕಿತ್ಸೆ ಪಡೆದ 39ವರ್ಷ ಮಹಿಳೆಯೊಬ್ಬರ ದೇಹದಲ್ಲಿ ವಿಷಕಾರಿ ಪ್ರಮಾಣದ ಸೀಸದ ಅಂಶ ಪತ್ತೆಯಾಗಿದ್ದು, ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಿಎಂಎಜೆಯಲ್ಲಿ ವರದಿ ದಾಖಲಾಗಿದೆ.
ಸೀಸದ ವಿಷಕಾರಿ ಎಂಬುದು ಅಸಾಮಾನ್ಯವಾಗಿದ್ದು, ಇದರ ಇರುವಿಕೆ ಕೂಡ ಅನಿರ್ದಿಷ್ಟವಾಗಿದೆ. ಈ ಅಂಶ ಪತ್ತೆಯಾಗುವ ಮೊದಲು ಮಹಿಳೆ ಅನೇಕ ಆರೋಗ್ಯ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂಬುದು ತಿಳಿದು ಬರುತ್ತಿದೆ ಎಂದು ಟೊರೊಂಟೊ ಯುನಿವರ್ಸಿಟಿಯ ಡಾ ಜುಲಿಯನ್ ಗಿಟೆಲ್ಮನ್ ತಿಳಿಸಿದ್ದಾರೆ. ಈ ರೋಗ ನಿರ್ಣಯ ಸೂಚಿಸಲು ಅವರ ಚಿಕಿತ್ಸೆಗೆ ತೆರೆದುಕೊಂಡಿರುವ ಇತಿಹಾಸವೂ ಮುಖ್ಯವಾಗಿದೆ.
ಕೆನಡಿಯನ್ ಮಹಿಳಾ ರೋಗಿ ಆರು ವಾರದಲ್ಲಿ ಮೂರು ಬಾರಿ ತುರ್ತು ವಿಭಾಗಕ್ಕೆ ದಾಖಲಾಗಿದ್ದಾರೆ. ಅವರಿಗೆ ಹೊಟ್ಟೆ ನೋವು, ಮಲಬದ್ಧತೆ, ತಲೆ ಸುತ್ತುವಿಕೆ ಮತ್ತು ವಾಂತಿ ಲಕ್ಷಣಗಳು ಕಾಣಿಸಿಕೊಂಡಿವೆ. ಮೂರನೇ ಭೇಟಿಯಲ್ಲಿ ರೋಗಿಯು ರಕ್ತಹೀನತೆ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೊತೆಗೆ ಅವರಲ್ಲಿ ಜೀರ್ಣಾಂಗವ್ಯೂಹದಲ್ಲಿ ಸ್ರಾವ ಆಗಿರುವ ಸಾಧ್ಯತೆ ಕೂಡ ಇದೆ. ಈ ಸಂಬಂಧ ಅನೇಕ, ತಪಾಸಣೆ ಹಾಗೂ ತನಿಖೆಗಳು ಕೂಡ ಅವರ ಈ ಲಕ್ಷಣಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಮಾಡುವಲ್ಲಿ ವಿಫಲವಾಗಿದೆ.
ಫಾಲೋ ಅಪ್ ಭೇಟಿಯ ವಾರದ ಬಳಿಕ ಆಕೆ, ತಾನು ಬಂಜೆತನಕ್ಕಾಗಿ ವರ್ಷದಿಂದ ಆಯುರ್ವೇದಿಕ್ ಚಿಕಿತ್ಸೆಯ ಮಾತ್ರೆಯನ್ನು ನಿತ್ಯ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಅವರಲ್ಲಿ ರಕ್ತದಲ್ಲಿನ ಸೀಸದ ಮಟ್ಟ ಹೆಚ್ಚಿದ್ದು, ಅದು ಡೆಸಿಲೀಟರ್ಗೆ 55 ಮೈಕ್ರೋಗ್ರಾಮ್ ನಷ್ಟಿದೆ. ಸಾಮಾನ್ಯವಾಗಿ ದೇಹದಲ್ಲಿ ಸೀಸದ ಪ್ರಮಾಣ ಪ್ರತಿ ಡೆಸಿಲೀಟರ್ಗೆ 2 ಮೈಕ್ರೋಗ್ರಾಂಗಿಂತ ಕಡಿಮೆ ಇರುತ್ತದೆ.
ಚೆಲೇಶನ್ ಥೆರಪಿ ಬಳಿಕ ಮಹಿಳೆ ಈ ಆಯುರ್ವೇದ ಚಿಕಿತ್ಸೆ ನಿಲ್ಲಿಸಿದ್ದಾರೆ. ಆಕೆಯ ರಕ್ತದಲ್ಲಿನ ಸೀಸದ ಮಟ್ಟ ಕಡಿಮೆಯಾಗಿದ್ದು, ಲಕ್ಷಣಗಳು ಮಾಯಾವಾಗಿದೆ ಎಂದು ವರದಿ ತಿಳಿಸಿದೆ.
ಆಕೆಯ ದೇಹದಲ್ಲಿ ಸೀಸದ ವಿಷಾಂಶ ಪತ್ತೆಯಾದ ಬಳಿಕ ವೈದ್ಯಕೀಯ ತಂಡ ಪಬ್ಲಿಕ್ ಹೆಲ್ತ್ ಒಂಟಾರಿಯಾವನ್ನು ನಡೆಸಿತು. ಈ ವೇಳೆ, ರೋಗಿಗೆ ನೀಡಲಾದ 12 ವಿವಿಧ ಮಾತ್ರೆಗಳ ಮಾದರಿಗಳನ್ನು ಪರೀಕ್ಷೆ ನಡೆಸಲಾಯಿತು. ಬಹುತೇಕ ಮಾತ್ರೆಗಳಲ್ಲಿ ಸೀಸದ ಅಂಶ ಅಧಿಕ ಇರುವುದು ಪತ್ತೆಯಾಗಿದೆ.
ತನಿಖೆಯಲ್ಲಿ ಆಯುರ್ವೇದಿಕ ಕ್ಲಿನಿಕ್ ಮಾತ್ರೆಗಳ ತಯಾರಿಸುವಲ್ಲಿ ನೈಸರ್ಗಿಕ ಆರೋಗ್ಯ ಉತ್ಪನ್ನ ನಿಯಂತ್ರಣದ ನಿಯಮ ಪಾಲನೆ ಮಾಡಿಲ್ಲ ಎಂದು ತಿಳಿದು ಬಂದಿದ್ದು, ನೂರಾರು ಮಾತ್ರೆಗಳನ್ನು ಸೀಜ್ ಮಾಡಲಾಗಿದೆ. ಕೆನಾಡ ಮತ್ತು ಟೊರೊಂಟೊ ಸಾರ್ವಜನಿಕ ಆರೋಗ್ಯ ಇಲಾಖೆ ಈ ಸಂಬಂಧ ಜನರಿಗೆ ಎಚ್ಚರಿಕೆಯ ಸಲಹೆ ಕೂಡಾ ನೀಡಿದ್ದು, ಈ ಉದ್ಯಮದ ಉತ್ಪನ್ನಗಳು ಆರೋಗ್ಯಕ್ಕೆ ಮಾರಕವಾಗಬಹುದು ಎಂದಿದೆ.
ಕ್ಲಿನಿಕ್ಗಳು ಮತ್ತು ಸಾರ್ವಜನಿಕ ಆರೋಗ್ಯ ಔಷಧಗಳಲ್ಲಿ, ಅಪಾಯಕ್ಕೆ ಕಾರಣವಾಗುವ ಸೀಸದ ಅಂಶವನ್ನು ಕಡಿಮೆ ಮಾಡುವುದು ಮುಖ್ಯವಾಗಿದೆ ಎಂದು ಲೇಖಕರು ಒತ್ತಿ ಹೇಳಿದ್ದಾರೆ.
ಇತ್ತೀಚಿನ ಪ್ರಕರಣದಲ್ಲೂ ಸೀಸದ ವಿಷದ ಅಂಶವನ್ನು ಸಾಂಪ್ರದಾಯಿಕ ಅಥವಾ ಗಿಡಮೂಲಿಕೆ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಉಪಶಮಕಾರಿಯಾಗುವ ಉದ್ದೇಶದಿಂದ ಉದ್ದೇಶ ಪೂರ್ವಕವಾಗಿ ಇಂತಹ ಭಾರೀ ಲೋಹದ ಅಂಶವನ್ನು ಸೇರಿಸಲಾಗುತ್ತಿದೆ. ಸೀಸದ ವಿಷ ಅಂಶಗಳಿಂದ ಗ್ರಾಹಕರ ಉತ್ಪನ್ನ ಕೂಡಿರುತ್ತದೆ ಇವು ಆರೋಗ್ಯ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಭಾರತದಲ್ಲಿ ನಾಲ್ವರಲ್ಲಿ ಒಬ್ಬರಿಗಿದೆ ಬಿಪಿ; ಹೃದಯಾಘಾತಕ್ಕೂ ಕಾರಣವಾಗುತ್ತದೆ ಈ ಅಧಿಕ ರಕ್ತದೊತ್ತಡ