ETV Bharat / sukhibhava

ಖಿನ್ನತೆಯ ಒತ್ತಡ ನಿವಾರಣೆಗೆ ದಯೆಯ ವರ್ತನೆ ಪರಿಣಾಮಕಾರಿ; ಅಧ್ಯಯನದಲ್ಲಿ ಬಯಲು - ಮೂರು ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದ್ದು

ದಯೆಯೇ ವ್ಯಕ್ತಿಯ ಖಿನ್ನತೆ ನಿವಾರಣೆಗೆ ಮದ್ದು - ಮೂರು ಗುಂಪಾಗಿ ಅಧ್ಯಯನ ನಡೆಸಿದ ತಂಡ - ದಯೆ ವರ್ತನೆ ಹೊಂದಿದವರಲ್ಲಿ ಉತ್ತಮ ಫಲಿತಾಂಶ

ಖಿನ್ನತೆಯ ಒತ್ತಡ ನಿವಾರಣೆಗೆ ದಯೆಯ ವರ್ತನೆ ಪರಿಣಾಮಕಾರಿ; ಅಧ್ಯಯನದಲ್ಲಿ ಬಯಲು
a-kind-attitude-is-effective-in-relieving-depression-anxiety-open-in-study
author img

By

Published : Jan 11, 2023, 11:59 AM IST

ಕೊಲೊಂಬೊ: ದಯವಿಲ್ಲದ ಧರ್ಮವಾವುದಯ್ಯಾ, ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ.. ದಯೆಯೇ ಧರ್ಮದ ಮೂಲವಯ್ಯ.. ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.. ಇದು 12 ನೇ ಶತಮಾನದಲ್ಲಿ ದಯೆ ಕುರಿತು ಭಕ್ತಿ ಭಂಡಾರಿ ಬಸವಣ್ಣನವರು ಬರೆದ ಅರ್ಥಪೂರ್ಣ ವಚನ. ನಾವೀಗ ಇಲ್ಲಿ ಹೇಳಹೊರಟಿರುವುದು ಇದೇ ದಯೆ ಕುರಿತು ನಡೆದಿರುವ ಅಧ್ಯಯನದ ಬಗ್ಗೆ. ಹೌದು, ಇತರರ ಜೊತೆಗಿನ ಉತ್ತಮ ಸಾಂಗತ್ಯ, ಸಹಾಯ ಮಾಡುವುದರಿಂದ ಒತ್ತಡ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಮೂರು ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರಲ್ಲಿ ದಯೆ ವರ್ತನೆ ಉತ್ತಮ ಬೆಳವಣಿಗೆ ಫಲಿತಾಂಶ ನೀಡುತ್ತದೆ ಎಂಬುದು ಸಾಬೀತಾಗಿದೆ.

ದಯೆ ಮಧ್ಯೆಸ್ಥಿಕೆಯ ತಂತ್ರ.. ಇತರರೊಂದಿಗೆ ಹೆಚ್ಚು ಸಂಪರ್ಕ ಹೊಂದಲು ಸಹಾಯ ಮಾಡುವಲ್ಲಿ ದಯೆ ಮಧ್ಯಸ್ಥಿಕೆಯ ತಂತ್ರವಾಗಿದೆ ಎಂದು ಅಧ್ಯಯನದ ಸಹ ಲೇಖಕ ಡೇವಿಡ್ ಕ್ರೆಗ್ ತಿಳಿಸಿದ್ದಾರೆ. ದಯೆ ಸಾಮಾಜಿಕ ಸಂಪರ್ಕದ ಯೋಗಕ್ಷೇಮದೊಂದಿಗೆ ಸಂಬಂಧಿಸಿರುವ ಜೀವನದ ಅಂಶಗಳಲ್ಲಿ ಒಂದಾಗಿದೆ. ದಯೆಯ ಕಾರ್ಯಗಳನ್ನು ನಿರ್ವಹಿಸುವುದು ಆ ಸಂಪರ್ಕಗಳನ್ನು ಉತ್ತೇಜಿಸಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಪಾಸಿಟಿವ್​ ಸೈಕಾಲಾಜಿ ಎಂಬ ಜರ್ನಲ್​ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ಈ ಸಂಶೋಧನೆಯಲ್ಲಿ ದಯೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಬಹಿರಂಗಪಡಿಸಲಾಗಿದೆ. ದಯೆಯಿಂದಾಗಿ ಜನರು ತಮ್ಮ ಒತ್ತಡ ಮತ್ತು ಆತಂಕದ ಲಕ್ಷಣಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಲಾಗಿದೆ. ಈಗಾಗಲೇ ಖಿನ್ನತೆಯಲ್ಲಿರುವ ಜನರು ಇದನ್ನು ನಿರ್ವಹಿಸುವುದು ಸಾಕಷ್ಟಿರುತ್ತದೆ. ಈ ಹಿನ್ನೆಲೆ ಬೇರೆಯವರಿಗೆ ಸಹಾಯ ಮಾಡುವಂತೆ ಅವರಿಗೆ ನಾವು ಒತ್ತಡ ಹೇರುವಂತಿಲ್ಲ. ಆದರೆ ಇದರ ಫಲಿತಾಂಶ ಇದಕ್ಕೆ ವಿರುದ್ಧವಾಗಿದೆ ಎನ್ನುತ್ತಾರೆ ಡೇವಿಡ್​ ಕ್ರೆಗ್​.

ಮೂರು ಗುಂಪಾಗಿ ಅಧ್ಯಯನ: ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡುವುದು. ಇತರರ ಅಗತ್ಯತೆಗಳ ಮೇಲೆ ಕೇಂದ್ರೀಕರಿಸುವುದು ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವ ಜನರಿಗೆ ಉತ್ತಮ ಭಾವನೆಯನ್ನು ಹೊಂದಲು ಸಹಾಯ ಮಾಡುತ್ತದೆ. ಈ ಅಧ್ಯಯನಕ್ಕಾಗಿ ಮಧ್ಯ ಓಹಿಯೋದಲ್ಲಿ 122 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಅವರು ಖಿನ್ನತೆ, ಆತಂಕ ಮತ್ತು ಒತ್ತಡದ ಮಧ್ಯಮದಿಂದ ತೀವ್ರತರವಾದ ರೋಗಲಕ್ಷಣಗಳನ್ನು ಹೊಂದಿದ್ದರು. ಇವರನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ಎರಡು ಗುಂಪುಗಳನ್ನು ಖಿನ್ನತೆಗೆ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಯಲ್ಲಿ ಸಾಮಾನ್ಯವಾಗಿ ಬಳಸುವ ತಂತ್ರಗಳಿಗೆ ನಿಯೋಜಿಸಲಾಗಿದೆ.

ಸಾಮಾಜಿಕ ಚಟವಟಿಕೆ ಗುಂಪಿನಲ್ಲಿ ವಾರದಲ್ಲಿ ಎರಡು ದಿನ ಸಾಮಾಜಿಕ ಚಟುವಟಿಕೆ ನಡೆಸಲಾಯಿತು. ಮತ್ತೊಂದು ಗುಂಪಗೆಗೆ ಸಿಬಿಟಿ ಕಾಗ್ನಿಟಿವ್​​ ರಿಅಪ್ರೆಸೆಲ್​ಗೆ ಸೂಚನೆ ನೀಡಲಾಯಿತು. ಮೂರನೇ ಗುಂಪಿನ ಜನರಲ್ಲಿ ವಾರಕ್ಕೆ ಎರಡು ದಿನ ದಯೆಯಿಂದ ವರ್ತಿಸಲಾಯಿತು. ಇದರಲ್ಲಿ ಸಣ್ಣ ಮತ್ತು ದೊಡ್ಡ ಕಾರ್ಯಗಳು ಇತರರಿಗೆ ಲಾಭದಾಯಕವಾಗಿದ್ದು, ಇತರರನ್ನು ಖುಷಿಯಾಗಿಡಲು ಸಹಾಯಕವಾಗಿದೆ. ಸ್ನೇಹಿತರಿಗೆ ಕುಕ್ಕಿಗಳನ್ನು ತಯಾರಿಸುವುದು, ಸ್ನೇಹಿತರ ಜೊತೆ ರೈಡ್​ ಹೋಗುವುದು. ರೂಮ್​ಮೇಟ್​ಗೆ ಪ್ರೋತ್ಸಾಹದಾಯಕ ಪದಗಳನ್ನು ಹೇಳುವ ಮೂಲಕ ದಯೆಯ ಕಾರ್ಯ ನಡೆಸಲಾಗಿದೆ.

ಐದು ವಾರಗಳ ಕಾಲ ಬೆಂಬಲಿಗರು ಈ ಸೂಚನೆಗಳನ್ನು ಪಾಲಿಸಿದಾಗ ಮೂರು ಗುಂಪಿನ ಜನರಲ್ಲಿ ಖಿನ್ನತೆ ಮತ್ತು ಆತಂಕದ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿತು. ಮೂರು ಗುಂಪುಗಳು ಪರಿಣಾಮಕಾರಿಯಾಗಿಯಾಗಿ ಒತ್ತಡ ಮತ್ತು ಸಮಾಧಾನ ಬೆಳವಣಿಗೆಯಲ್ಲಿ ಕಾರ್ಯ ನಿರ್ವಹಿಸಿದೆ ಎಂದು ಕ್ರೆಗ್​ ತಿಳಿಸಿದ್ದಾರೆ. ಆದರೆ ದಯೆಯ ವರ್ತೆ ಉಳಿದೆರಡು ಗುಂಪಿಗಿಂತ ಹೆಚ್ಚು ಪ್ರಯೋಜನಕರಿಯಾಗಿದೆ. ದಯೆ ಗುಂಪಿನ ಕಾರ್ಯಗಳು ಅರಿವಿನ ಮರುಮೌಲ್ಯಮಾಪನ ಗುಂಪಿನ ಜೀವನ ತೃಪ್ತಿ ಮತ್ತು ಖಿನ್ನತೆ ಮತ್ತು ಆತಂಕದ ಲಕ್ಷಣಗಳಿಗಿಂತ ಹೆಚ್ಚಿನ ಸುಧಾರಣೆಗಳನ್ನು ತೋರಿಸಿದೆ, ಫಲಿತಾಂಶಗಳು ತೋರಿಸಿವೆ.

ಇದನ್ನೂ ಓದಿ: ನವಜಾತ ಶಿಶುಗಳು ದುಃಖಭರಿತ ಸಂಗೀತಕ್ಕಿಂತ ಉಲ್ಲಾಸದ ಮ್ಯೂಸಿಕ್​ಗೆ ಹೆಚ್ಚು ಪ್ರತಿಕ್ರಿಯಿಸುತ್ತವೆ : ಹೊಸ ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.