ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಸ್ತನಿಗಳಲ್ಲಿ ಹಕ್ಕಿ ಜ್ವರ ಉಲ್ಬಣಗೊಳ್ಳುತ್ತಿದೆ. ಈ ಸೋಂಕು ಸುಲಭವಾಗಿ ಮನುಷ್ಯರಿಗೆ ತಗಲುಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಪಕ್ಷಿಗಳಲ್ಲಿ ಸಾಮಾನ್ಯವಾಗಿ ಏವಿಯನ್ ಇನ್ಫ್ಲುಂಜಾ ವೈರಸ್ ಸಾಮಾನ್ಯವಾಗಿ ಹರಡುತ್ತದೆ. ಆದರೆ, ಎಚ್5ಎನ್1 ಏವಿಯನ್ ಇನ್ಫ್ಲುಯೆಂಜಾ ಸಸ್ತನಿಗಳಲ್ಲಿ ಹೆಚ್ಚಾಗುತ್ತಿದ್ದು, ಪಕ್ಷಿಗಳಿಗಿಂತ ಜೈವಿಕವಾಗಿ ಮನುಷ್ಯರಿಗೆ ಹತ್ತಿರವಾಗಿರುವ ವೈರಸ್ ಮನುಷ್ಯರಿಗೆ ಸುಲಭವಾಗಿ ಸೋಂಕು ತಗುಲಬಹುದು ಎಂಬ ಆತಂಕವನ್ನು ಹುಟ್ಟುಹಾಕುತ್ತದೆ.
ಅಪಾಯಕಾರಿ ಸೋಂಕು: ಹೆಚ್ಚುವರಿಯಾಗಿ, ಕೆಲವು ಸಸ್ತನಿಗಳು ಇನ್ಫ್ಲುಯೆಂಜಾ ವೈರಸ್ಗಳು ಮಿಶ್ರಣವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಹೊಸ ವೈರಸ್ ಹುಟ್ಟುವಿಕೆಗೆ ಕಾರಣವಾಗುತ್ತದೆ. ಇದು ಮನುಷ್ಯರು ಮತ್ತು ಪ್ರಾಣಿಗಳಿಗೆ ಹೆಚ್ಚು ಅಪಾಯಕಾರಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇತ್ತೀಚೆಗೆ ಸಸ್ತನಿಗಳಲ್ಲಿ ಇನ್ಫ್ಲುಯೆಂಜಾ ಎ (ಎಚ್5ಎನ್1) ಸೇರಿದಂತೆ ಇನ್ಫ್ಲುಯೆಂಜಾ ಎ (ಎಚ್5) ಸೋಂಕು ಉಲ್ಬಣಗೊಂಡಿದೆ. ಮೂರು ಖಂಡದ 10 ದೇಶದಲ್ಲಿ ಈ ಸೋಂಕು ಅಧಿಕವಾಗಿ ಕಂಡು ಬಂದಿದೆ. ಅನೇಕ ದೇಶದಲ್ಲಿ ಸೋಂಕು ಉಲ್ಬಣಿಸಿದರೂ ಈ ಕುರಿತು ವರದಿಯಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪರಿಸರ ವಿಜ್ಞಾನ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಇತ್ತೀಚಿನ ದಿನದಲ್ಲಿ ಬಹು ದೊಡ್ಡ ಬದಲಾವಣೆಗಳು ಕಂಡು ಬರುತ್ತಿದ್ದು, ಏವಿಯನ್ ಇನ್ಫ್ಲುಯೆಂಜಾ ಜಾಗತಿಕವಾಗಿ ಅತಿ ಹೆಚ್ಚಿನ ಕಾಳಜಿ ವಿಷಯವಾಗಿದೆ. ಹೊಸ ಭೌಗೋಳಿಕ ಪ್ರದೇಶದಲ್ಲಿ ಈ ರೋಗಗಳು ಉಲ್ಬಣಗೊಳ್ಳುತ್ತಿದ್ದು, ಇದಕ್ಕೆ ಕಾರಣ ಕಾಡು ಹಕ್ಕಿಗೆ ಸಾಯುವುದು ಆಗಿದೆ ಎಂದು ಡಬ್ಲ್ಯೂಒಎಎಚ್ನ ಮುಖ್ಯಸ್ಥ ಜಾರ್ಜೊರಿಯೊ ಟೊರ್ರೆಸ್ ತಿಳಿಸಿದ್ದಾರೆ. ಎಚ್5ಎನ್1ನ ಕ್ಲಾಡ್ 2.3.4.4ಬಿ ವೈರಸ್ ಸೋಂಕು ಮಾನವರಲ್ಲಿ ಕೂಡ ಪತ್ತೆಯಾಗಿದೆ. ಇವು ಕಡಿಮೆಯಾಗಿದ್ದು, 2021ರಿಂದ 8 ಪ್ರಕರಣಗಳು ವರದಿ ಆಗಿದೆ ಎಂದು ಡಬ್ಲ್ಯೂಎಚ್ಒ ತಿಳಿಸಿದೆ.
ಹೆಚ್ಚಿನ ಮೇಲ್ವಿಚಾರಣೆ ಬೇಕಿದೆ: ಸೋಂಕುಗಳು ಮಾನವರಲ್ಲಿ ಅನೇಕ ಗಂಭೀರ ಸಮಸ್ಯೆಗೆ ಕಾರಣವಾಗುವ ಜೊತೆಗೆ ಸಾವಿನ ದರ ಹೆಚ್ಚಿಸುತ್ತದೆ. ಮಾನವ ಪ್ರಕರಣದ ಸೋಂಕುಗಳಲ್ಲಿ ವ್ಯಕ್ತಿಯು ಸೋಂಕಿತ ಹಕ್ಕಿ ಮತ್ತು ಕಲುಷಿತ ಪರಿಸರದೊಂದಿಗೆ ಹತ್ತಿರ ಸಂಬಂಧ ಹೊಂದಿದ್ದಾಗ ಇದರ ಹರಡುವಿಕೆ ಕಂಡು ಬರುತ್ತದೆ ಎಂಬುದು ಗಮನಿಸಬೇಕಾದ ಅಂಶ. ಸದ್ಯ ಲಭ್ಯವಿರುವ ಮಾಹಿತಿ ಅನುಸಾರ, ವೈರಸ್ಗಳು ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುವುದು ಗೋಚರ ಆಗುವುದಿಲ್ಲ. ಆದರೆ, ಈ ಕುರಿತು ಹೆಚ್ಚಿನ ಕಣ್ಗಾವಲು ವಹಿಸಬೇಕಿದೆ. ಈ ವೈರಸ್ಗಳ ಸ್ವರೂಪ ಬದಲಾವಣೆ ಆಗುತ್ತಿರುವ ಕುರಿತು ಮೌಲ್ಯಮಾಪನ ನಡೆಸಬೇಕಿದೆ ಎಂದು ಡಬ್ಲ್ಯೂಎಚ್ಒನ ಸ್ಲೈವಿ ಬ್ರಿಂಡಾ ತಿಳಿಸಿದ್ದಾರೆ.
ಇಂತಹ ವೈರಸ್ಗಳು ಮನುಷ್ಯರಲ್ಲಿ ಪತ್ತೆಯಾಗುವ ಸಂಬಂಧ ಹೆಚ್ಚಿನ ಮೇಲ್ವಿಚಾರಣೆ ನಡೆಸಲು ನಾವು ಎಲ್ಲ ದೇಶಗಳನ್ನು ಪ್ರೋತ್ಸಾಹಿಸುತ್ತೇವೆ. ವಿಶೇಷವಾಗಿ ವೈರಸ್ ಪರಿಣಾಮಕ್ಕೆ ಒಳಗಾದ ದೇಶದಲ್ಲಿ ಹೆಚ್ಚಿನ ಕಣ್ಗಾವಲು ವಹಿಸುವುದು ಅಗತ್ಯವೂ ಆಗಿದೆ. ಮಾನವರು ಸೇರಿದಂತೆ ಸಸ್ತನಿಗಳ ನಡುವೆ ವೈರಸ್ ಸುಲಭವಾಗಿ ಹರಡಲು ಸಹಾಯ ಮಾಡುವ ವೈರಸ್‌ನಲ್ಲಿನ ಯಾವುದೇ ಬದಲಾವಣೆಗಳನ್ನು ಗುರುತಿಸಲು ಅಧ್ಯಯನಗಳು ನಡೆಯುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ: ನೆರೆ ದೇಶ ಬಾಂಗ್ಲಾದಲ್ಲಿ ಡೆಂಗ್ಯೂ ಜ್ವರ ಉಲ್ಬಣ: ಲಕ್ಷಣಗಳೇನು? ರಕ್ಷಣೆ ಹೇಗೆ? ಸಂಪೂರ್ಣ ಮಾಹಿತಿ..