ETV Bharat / sukhibhava

Covid 19: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 72 ಹೊಸ ಕೋವಿಡ್​ ಪ್ರಕರಣ ದಾಖಲು - ದೇಶದಲ್ಲಿರುವ ಸಕ್ರಿಯ ಪ್ರಕರಣ

ಕೋವಿಡ್​ ಹೊಸ ರೂಪಾಂತಾರಿ ತಳಿಗಳಿಂದಾಗಿ ಭಾರತ ಸೇರಿದಂತೆ ಹಲವು ದೇಶದಲ್ಲಿ ಸೋಂಕಿನ ಪ್ರಕರಣಗಳ ಏರಿಕೆ ಕಾಣುತ್ತಿವೆ.

http://10.10.50.85:6060/reg-lowres/11-October-2023/covid-new-1_1110newsroom_1697004056_301.jpg

author img

By PTI

Published : Oct 11, 2023, 11:38 AM IST

ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 72 ಹೊಸ ಕೋವಿಡ್​​ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 348 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದತ್ತಾಂಶವನ್ನು ಬಿಡುಗಡೆ ಮಾಡಿದೆ.

ಕೋವಿಡ್​ನಿಂದ 5 ಲಕ್ಷದ 32 ಸಾವಿರದ 35 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ ಎಂದು ಬುಧವಾರ ಬೆಳಗ್ಗೆ ಸಚಿವಾಲಯ ಹೊಸ ಮಾಹಿತಿ ಹಂಚಿಕೊಂಡಿದೆ. ಸದ್ಯ ದೇಶದಲ್ಲಿ ಕೋವಿಡ್​ ಆರಂಭವಾದಾಗಿನಿಂದ 4 ಕೋಟಿ 49 ಲಕ್ಷ ಪ್ರಕರಣಗಳು ಒಟ್ಟಾರೆಯಾಗಿ ದಾಖಲಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4.44 ಕೋಟಿ ಆಗಿದ್ದು, ಚೇತರಿಕೆಯ ದರ ಶೇ 98.81 ಆಗಿದೆ. ಸಚಿವಾಲಯದ ವೆಬ್​ಸೈಟ್​ ಅನುಸಾರ ಇಲ್ಲಿಯವರೆಗೆ 220.67 ಕೋಟಿ ಕೋವಿಡ್​ ಲಸಿಕೆಗಳನ್ನು ನೀಡಲಾಗಿದೆ.

ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಕೋವಿಡ್​ನ ಹೊಸ ಉಪತಳಿಗಳಾದ ಏರಿಸ್​, ಎಕ್ಸ್​ಬಿಬಿ ಸೇರಿದಂತೆ ಹಲವು ತಳಿಗಳು ಹೊಸ ಸೋಂಕಿನ ಪ್ರಕರಣಗಳಿಗೆ ಕಾರಣವಾಗಿದೆ. ಈ ಸೋಂಕುಗಳಿಂದ ಪ್ರಕರಣಗಳು ದಾಖಲಾಗುತ್ತಿದ್ದರೂ, ಯಾವುದೇ ಅಪಾಯ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಬೂಸ್ಟರ್​ ಡೋಸ್​ ಪಡೆಯುವುದು ಅಗತ್ಯ. ಅದರಲ್ಲೂ ವೃದ್ಧರು ಮತ್ತು ಮಕ್ಕಳು ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆ ಹೊಂದಿರುವವರ ಮೇಲ್ವಿಚಾರಣೆಗೆ ಹೆಚ್ಚಿನ ಗಮನ ನೀಡುವಂತೆ ತಜ್ಞರು ಕರೆ ನೀಡಿದ್ದಾರೆ.

ಸಿಂಗಾಪೂರ್​, ಹಾಂಕಾಂಗ್​​, ಅಮೆರಿಕದಲ್ಲಿ ಏರಿಕೆ: ಇತರ ದೇಶಗಳಿಗೆ ಹೋಲಿಕೆ ಮಾಡಿದಾಗ ಹೊಸ ತಳಿಯ ಕೋವಿಡ್​ ಪ್ರಕರಣಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಭಾರತದಲ್ಲಿ ಕಡಿಮೆ ಇದೆ. ಸಿಂಗಾಪುರ​, ಹಾಂಕಾಂಗ್​​ ಸೇರಿದಂತೆ ಹಲವೆಡೆ ಕೋವಿಡ್​ನ ರೂಪಾಂತರ ತಳಿಗಳಾದ ಎಕ್ಸ್​ಬಿಬಿ, ಎರಿಸ್​, ಬಿಎ.2.86 ಸೋಂಕಿಗೆ ಕಾರಣವಾಗುತ್ತಿದೆ. ಈ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಇವರಲ್ಲಿ ಸೋಂಕಿನ ಸೌಮ್ಯ ಲಕ್ಷಣ ಕಾಣಿಸಿಕೊಂಡಿದ್ದು, ಇದು ಅಪಾಯಕಾರಿಯಾಗಿಲ್ಲ ಎಂದು ವರದಿಗಳು ತಿಳಿಸಿದೆ. ಆದಾಗ್ಯೂ ಅಧಿಕಾರಿಗಳು ಮತ್ತು ತಜ್ಞರು ಬೂಸ್ಟರ್​ ಡೋಸ್​​ ಪಡೆಯುವಂತೆ ಒತ್ತು ನೀಡಿದ್ದು, ಕೋವಿಡ್​ ನಿಯಮವಾಳಿ ಪಾಲನೆ ಮಾಡುವಂತೆ ಸೂಚಿಸಿದ್ದಾರೆ.

ಇದು ಎಕ್ಸ್​ಬಿಬಿ.1.16 ಸ್ಟ್ರೈನ್ ರೂಪಾಂತರಕ್ಕಿಂತ ಶೇ 95 ಪ್ರತಿಶತ ಹೆಚ್ಚು ಹರಡುವ ಸಾಧ್ಯತೆಯಿದೆ. ಈ ಹಿನ್ನಲೆ ತಜ್ಞರು ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಮತ್ತೆ ನಿಧಾನವಾಗಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಜಾಗ್ರತೆ ವಹಿಸಬೇಕಾದ ಅಗತ್ಯ ಇದೆ. (ಪಿಟಿಐ)

ಇದನ್ನೂ ಓದಿ: ಹಾಂಕಾಂಗ್​​​​ನಲ್ಲಿ ಏರಿಕೆ ಕಾಣುತ್ತಿರುವ ಕೋವಿಡ್​ ಪ್ರಕರಣ: ಅಮೆರಿಕದಲ್ಲೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.