15 ವಾರಗಳ ಬಳಿಕವೂ ಸ್ಪಷ್ಟವಾಗಿ ಗೋಚರಿಸದ ಕೋವಿಡ್ ರೋಗಲಕ್ಷಣಗಳು ಕನಿಷ್ಠ ಒಂದು ವರ್ಷ ಉಳಿಯುವ ಸಾಧ್ಯತೆಯಿದೆ ಎಂದು ಲಕ್ಸೆಂಬರ್ಗ್‌ನ ಸಂಶೋಧಕರು ಕಂಡುಕೊಂಡಿದ್ದಾರೆ. ಕೋವಿಡ್ ಸೋಂಕಿರುವ ಅಂದಾಜು 25-40% ಜನರು ದೀರ್ಘವಾಗಿ ಉಳಿಯುವ ಕೊರೊನಾ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಇದು ಅವರ ಬಹುಅಂಗಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಯನ್ನು ಸಹ ಉಂಟುಮಾಡಬಹುದು. ಇಲ್ಲಿಯವರೆಗಿನ ಹೆಚ್ಚಿನ ದತ್ತಾಂಶವು ಕೋವಿಡ್ ರೋಗಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಆಧರಿಸಿದೆ. ಇದು ಸಾಮಾನ್ಯವಾಗಿ ಕೋವಿಡ್ ಪ್ರಕರಣಗಳಿಗೆ ಹೇಗೆ ಅನ್ವಯಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಈ ವಿಷಯವಾಗಿ ಇನ್ನೂ ಹೆಚ್ಚಿನದ್ದನ್ನು ಕಂಡುಹಿಡಿಯಲು ಲಕ್ಸೆಂಬರ್ಗ್‌ನ ಸ್ಟ್ರಾಸೆನ್‌ನ ಲಕ್ಸೆಂಬರ್ಗ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಲ್ಲಿ ಆರೆಲಿ ಫಿಶರ್ ಮತ್ತು ಸಹೋದ್ಯೋಗಿಗಳು ಒಂದು ವರ್ಷದ ನಂತರವೂ ಕೋವಿಡ್-19 ಹೊಂದಿರುವ ಸುಮಾರು 300 ಜನರನ್ನು ಸಮೀಕ್ಷೆಗಾಗಿ ಆಯ್ಕೆ ಮಾಡಿದರು. ಇದರಲ್ಲಿ 289 ಜನ (50.2% ಮಹಿಳೆಯರು) ಸರಾಸರಿ 40.2 ವರ್ಷ ವಯಸ್ಸಿನವರಾಗಿದ್ದರು. ಅವರ ಆರಂಭಿಕ ಸೋಂಕಿನ ತೀವ್ರತೆಯ ಆಧಾರದ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಲಕ್ಷಣರಹಿತ, ಸೌಮ್ಯ ಮತ್ತು ಮಧ್ಯಮ/ತೀವ್ರವಾದ ಕೋವಿಡ್ ಲಕ್ಷಣವೆಂದು ಮೂರು ಗುಂಪುಗಳಾಗಿ ವಿಂಗಡಿಸಲಾಯಿತು.
ತುಂಬಾ ದಿನಗಳಿಂದ ಕೋವಿಡ್-ಸಂಬಂಧಿತ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಅವರಿಗೆ ಭರ್ತಿ ಮಾಡಲು ಪ್ರಶ್ನಾವಳಿಯನ್ನು ನೀಡಲಾಯಿತು. ಅವರು ನಿದ್ರೆಯ ಗುಣಮಟ್ಟ ಮತ್ತು ಉಸಿರಾಟದ ಸಮಸ್ಯೆಗಳನ್ನು ಆಧರಿಸಿ, ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು. ಇದರಲ್ಲಿ ಭಾಗವಹಿಸಿದ ಹತ್ತರಲ್ಲಿ ಆರು (59.5%) ಜನ ತಮ್ಮ ಆರಂಭಿಕ ಸೋಂಕಿನಿಂದ ಹಿಡಿದು ಒಂದು ವರ್ಷದವರೆಗೆ ಕೋವಿಡ್ ರೋಗಲಕ್ಷಣವನ್ನು ಹೊಂದಿದ್ದರು ಎಂಬುದು ತಿಳಿದುಬಂದಿದೆ. ಅವರಲ್ಲಿ ಆಯಾಸ, ಉಸಿರಾಟದ ತೊಂದರೆ ಮತ್ತು ಕಿರಿಕಿರಿಯು ಅತ್ಯಂತ ಸಾಮಾನ್ಯವಾಗಿತ್ತು.
ಮೂರನೆಯವರು (34.3%) ಒಂದು ವರ್ಷದಿಂದ ಆಯಾಸವನ್ನು ಅನುಭವಿಸುತ್ತಿದ್ದಾರೆ, 12.9% ಜನರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಅವರ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಿತ್ತು. ಅರ್ಧಕ್ಕಿಂತ ಹೆಚ್ಚು (54.2%) ವ್ಯಕ್ತಿಗಳು ನಿದ್ರೆಯ ಸಮಸ್ಯೆಗಳನ್ನು ಹೊಂದಿದ್ದರು. ಮಧ್ಯಮ/ತೀವ್ರವಾದ ಕೋವಿಡ್-19 ಲಕ್ಷಣ ಹೊಂದಿರುವವರಲ್ಲಿ ಆರಂಭಿಕ ಸೋಂಕು ಲಕ್ಷಣರಹಿತವಾಗಿರುತ್ತದೆ. ಆದ್ರೆ ವರ್ಷದಲ್ಲಿ ಕನಿಷ್ಠ ಒಂದು ರೋಗಲಕ್ಷಣವನ್ನು ಹೊಂದುವ ಸಾಧ್ಯತೆ ಎರಡು ಪಟ್ಟು ಹೆಚ್ಚಿರುತ್ತದೆ.
ಇದನ್ನೂ ಓದಿ: Summer Health Tips: ಬೇಸಿಗೆಯಲ್ಲಿ ನಿಮ್ಮನ್ನು Hydrated ಆಗಿರಿಸಲು ಈ ಹಣ್ಣುಗಳನ್ನು ಸೇವಿಸಿ ನೋಡಿ!
ಸೌಮ್ಯ ಸ್ವರೂಪದ ಕೊರೊನಾ ರೋಗ ಲಕ್ಷಣ ಹೊಂದಿರುವವರು ಒಂದು ವರ್ಷದಲ್ಲಿ ಕನಿಷ್ಠ ಒಂದು ರೋಗಲಕ್ಷಣವನ್ನು ಹೊಂದಿರುತ್ತಾರೆ ಮತ್ತು ನಿದ್ರೆಯ ಸಮಸ್ಯೆ ರೋಗಲಕ್ಷಣಗಳಿಲ್ಲದವರಿಗಿಂತ ಹೆಚ್ಚು ಸಾಧ್ಯತೆಯಿದೆ. ಆದರೆ ಮಧ್ಯಮ ಅಥವಾ ತೀವ್ರತರವಾದ ಕಾಯಿಲೆ ಇರುವವರಿಗಿಂತ ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ. ಭಾಗವಹಿಸಿದ ಏಳು ಜನರಲ್ಲಿ ಒಬ್ಬರು (14. 2%) ಅವರು ತಮ್ಮ ರೋಗಲಕ್ಷಣಗಳನ್ನು ದೀರ್ಘಕಾಲದವರೆಗೆ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಲಕ್ಸೆಂಬರ್ಗ್‌ನಲ್ಲಿ ಕೋವಿಡ್ ತೀವ್ರತೆ ಮತ್ತು ದೀರ್ಘಕಾಲದ ಆರೋಗ್ಯದ ಪರಿಣಾಮಗಳಿಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳು ಮತ್ತು ಬಯೋಮಾರ್ಕರ್‌ಗಳ ಕುರಿತಾದ ದೊಡ್ಡ-ಪ್ರಮಾಣದ ಅಧ್ಯಯನವಾದ ಪ್ರಿಡಿ-ಕೋವಿಡ್‌ನ ಭಾಗವಾಗಿ ಭಾಗವಹಿಸುವವರ ಕೋವಿಡ್ ರೋಗನಿರ್ಣಯದ ನಂತರ ಭಾಗವಹಿಸುವವರ ಆರೋಗ್ಯವನ್ನು ಟ್ರ್ಯಾಕ್ ಮಾಡಲಾಗಿದೆ. ತೀವ್ರವಾದ ಸೋಂಕಿನ ಒಂದು ವರ್ಷದ ನಂತರವೂ ದೀರ್ಘವಾದ ಕೋವಿಡ್ ಇನ್ನೂ ಜೀವನದ ಗುಣಮಟ್ಟದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂದು ಇದು ತೋರಿಸುತ್ತದೆ. ಸಾಮಾನ್ಯವಾಗಿ, ತೀವ್ರವಾದ ಅನಾರೋಗ್ಯವು ಹೆಚ್ಚು ತೀವ್ರವಾಗಿರುತ್ತದೆ, ಯಾರಾದರೂ ರೋಗಲಕ್ಷಣಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚು. ಆದಾಗ್ಯೂ, ಲಕ್ಷಣರಹಿತ ಅಥವಾ ಸೌಮ್ಯವಾದ ಆರಂಭಿಕ ಸೋಂಕನ್ನು ಹೊಂದಿರುವವರು ತಮ್ಮ ಜೀವನದ ಗುಣಮಟ್ಟದಲ್ಲಿ ಕ್ಷೀಣತೆಯನ್ನು ಅನುಭವಿಸಬಹುದು.