ETV Bharat / sukhibhava

ತೂಕ ಇಳಿಸಿಕೊಳ್ಳಬೇಕಾ? ಈ 5 ಅಂಶಗಳು ನಿಮಗೆ ತೊಡಕಾಗಬಹುದು ಎಚ್ಚರ!

ತುಂಬಾ ಪ್ರಯತ್ನ ಮಾಡಿದ ನಂತರವೂ ನಿಮ್ಮ ದೇಹದ ಕೊಬ್ಬಿನಾಂಶ ಕಡಿಮೆ ಆಗದೇ, ಯಾವುದೇ ಫಲಿತಾಂಶಗಳನ್ನು ನೀವು ಕಾಣದೆ ಆಯಾಸಗೊಂಡಿದ್ದೀರಾ?. ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಗಟ್ಟಿಯಾದ ನಿರ್ಣಯದ ಅಗತ್ಯವಿರುತ್ತದೆ. ಅಧಿಕ ತೂಕದಿಂದ ವ್ಯಕ್ತಿ ಮನಸ್ಸು ವಿಚಲಿತವಾಗಿ ಶಾಂತಿಯನ್ನು ಕಳೆದುಕೊಳ್ಳುತ್ತಾನೆ. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಮತ್ತು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದಿರುವಂತಹ ಅಂಶಗಳು ತೂಕ ಹೆಚ್ಚಾಗಲು ಕಾರಣವಾಗಬಹುದು.

author img

By

Published : Jul 13, 2022, 4:11 PM IST

ತೂಕ ಇಳಿಕೆ
ತೂಕ ಇಳಿಕೆ

ದೇಹದಲ್ಲಿ ಕೊಬ್ಬು ಹೆಚ್ಚಾದರೆ ಅದರಿಂದ ಹಲವಾರು ರೀತಿಯ ಅನಾರೋಗ್ಯಗಳು ಉಂಟಾಗುತ್ತವೆ. ದೇಹದ ಬೊಜ್ಜು ಹಾಗೂ ಕೊಬ್ಬು ಕರಗಿಸಲು ನಾನಾ ರೀತಿಯಿಂದ ಪ್ರಯತ್ನಿಸಿ ಸೋತಿರುವವರು ಇದ್ದಾರೆ. ಒಬ್ಬ ವ್ಯಕ್ತಿಯು ತೂಕ ಹೆಚ್ಚಾದಾಗ ಚಿಂತಿಸುವುದು ಸಾಮಾನ್ಯ. ನಾವು ತೂಕ ಕಡಿಮೆ ಮಾಡಲು ತುಂಬಾ ಪ್ರಯತ್ನ ಪಟ್ಟರೂ, ಅದು ಹೆಚ್ಚಾಗುತ್ತಲೇ ಇದ್ದರೆ ಅದಕ್ಕೆ ಹಲವು ಕಾರಣಗಳಿವೆ. ಅಂದರೆ ನಮ್ಮ ತೂಕವನ್ನು ಹೆಚ್ಚು ಮಾಡುವ ಕೆಲವು ಸರಳ ತಪ್ಪುಗಳನ್ನು ನಾವು ಮಾಡುತ್ತಿದ್ದೇವೆ ಎಂದರ್ಥ. ಆ ತಪ್ಪುಗಳು ಯಾವುವು ಅನ್ನೋದನ್ನು ತಿಳಿಯೋಣ..

ಅಸಮರ್ಪಕ ನಿದ್ರೆ: ನಾವು ಯಾವಾಗಲೂ ನಿರ್ಲಕ್ಷಿಸುವ ಒಂದು ವಿಷಯವೆಂದರೆ ಸಾಕಷ್ಟು ನಿದ್ದೆ ಮಾಡದಿರುವುದು. ನಿದ್ರೆ ಮಾಡುವುದರಿಂದ ನಮ್ಮ ತೂಕ ನಷ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ನಿದ್ರೆಯಿಂದ, ನಿಮ್ಮ ದೇಹವು ಅಗತ್ಯವಾದ ಶಕ್ತಿಯನ್ನು ಪಡೆಯುತ್ತದೆ ಮತ್ತು ನಿಮ್ಮ ವ್ಯಾಯಾಮ ಮತ್ತು ಉತ್ಪಾದಕತೆಗೆ ಸಹಾಯ ಮಾಡುತ್ತದೆ. ಆದರೆ ನೀವು ಕಡಿಮೆ ನಿದ್ರೆ ಮಾಡಿದಾಗ, ನಿಮ್ಮ ದೇಹಕ್ಕೆ ಕೆಲಸ ಮಾಡಲು ಶಕ್ತಿ ಇರುವುದಿಲ್ಲ. ಅಲ್ಲದೆ, ಸಾಕಷ್ಟು ನಿದ್ರೆ ಮಾಡದಿರುವುದು ಅನಾರೋಗ್ಯಕರ ತಿಂಡಿಗಳ ಸೇವನೆಗೆ ಕಾರಣವಾಗುತ್ತದೆ. ಅದು ನಿಮ್ಮ ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸುತ್ತದೆ.

ಅತಿಯಾದ ವ್ಯಾಯಾಮ: ಖಂಡಿತವಾಗಿ, ವ್ಯಾಯಾಮವು ನಿಮ್ಮ ತೂಕ ನಷ್ಟದ ಒಂದು ಅವಿಭಾಜ್ಯ ಅಂಗವಾಗಿದೆ. ಆದರೆ ಒಂದು ಸಾಮಾನ್ಯ ತಪ್ಪು ಎಂದರೆ ವ್ಯಾಪಕವಾಗಿ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸದಿರುವುದು ತೂಕ ನಷ್ಟಕ್ಕೆ ತೊಡಕಾಗಬಹುದು.

ಊಟ ಬಿಡುವುದು: ತಿನ್ನದೇ ಇದ್ದರೆ ಹೆಚ್ಚು ತೂಕ ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ನೀವು ಊಟವನ್ನು ತ್ಯಜಿಸಿದಾಗ, ನೀವು ಹಸಿವಿನಿಂದ ಇರುತ್ತೀರಿ ಮತ್ತು ಅಗತ್ಯವಾದ ಪೋಷಕಾಂಶಗಳಿಂದ ವಂಚಿತರಾಗುತ್ತೀರಿ. ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ನೀವು ಯಾವಾಗಲೂ ಹಸಿವಿನಿಂದ ತಿಂಡಿ ತಿನಿಸುಗಳನ್ನು ಸೇವಿಸುತ್ತೀರಿ. ಸ್ಥಿರವಾಗಿ ಮತ್ತು ಸರಿಯಾದ ಸಮಯದಲ್ಲಿ ತಿನ್ನದಿರುವುದು ನಿಮ್ಮ ಕೊಬ್ಬು ನಷ್ಟಕ್ಕೆ ತೊಡಕಾಗಬಹುದು.

ಇದನ್ನೂ ಓದಿ: ಪುಟ್ಟ ಕಂದನ ನಿರೀಕ್ಷೆಯಲ್ಲಿರುವಿರಾ? ಲಾಲನೆ - ಪಾಲನೆಗೆ ನಿಮ್ಮನ್ನು ಸಜ್ಜುಗೊಳಿಸಿ..

ಕಡಿಮೆ ನೀರಿನ ಸೇವನೆ: ಸಾಕಷ್ಟು ನೀರು ಕುಡಿಯುವುದು ನಿಮ್ಮ ತೂಕ ನಷ್ಟ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ನೀರಿನ ಕೊರತೆ ಇದ್ದರೇ, ನೀವು ಸ್ವಯಂಚಾಲಿತವಾಗಿ ಹೆಚ್ಚು ಆಹಾರವನ್ನು ತಿನ್ನಲು ಒಲವು ತೋರುತ್ತೀರಿ. ಎಲ್ಲಾ ಅಂಗಗಳ ಸುಗಮ ಕಾರ್ಯವನ್ನು ಖಚಿತಪಡಿಸಿಕೊಳ್ಳಲು ನಿಮ್ಮ ದೇಹಕ್ಕೆ ಪ್ರತಿದಿನ ಒಂದು ನಿರ್ದಿಷ್ಟ ಪ್ರಮಾಣದ ನೀರು ಬೇಕಾಗುತ್ತದೆ. ಇದಲ್ಲದೆ, ನೀರು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪ್ಯಾಕ್ ಮಾಡಿದ ಆಹಾರಗಳನ್ನು ತಿನ್ನುವುದು: ನಮ್ಮ ದೇಹದಿಂದ ಕೊಬ್ಬನ್ನು ಕಡಿಮೆ ಮಾಡಲು ನಾವು ಬಯಸಿದರೆ ಪ್ಯಾಕೇಜ್ ಮಾಡಿದ ಆಹಾರಗಳು ಸಾಕಷ್ಟು ಹಾನಿಕಾರಕವಾಗಿವೆ. ಹೆಚ್ಚಿನ ಪ್ಯಾಕ್ ಮಾಡಲಾದ ಆಹಾರವು ಬಹಳಷ್ಟು ಸಂರಕ್ಷಕಗಳನ್ನು ಹೊಂದಿರುತ್ತದೆ ಮತ್ತು ಸಕ್ಕರೆ, ಹೆಚ್ಚಿನ ಮಟ್ಟದ ಉಪ್ಪು, ನಿಮಗೆ ತಿಳಿದಿರದ ಇತರ ಪದಾರ್ಥಗಳನ್ನು ಹೊಂದಿರುತ್ತದೆ. ಆದ್ದರಿಂದ, ಈ ಪ್ಯಾಕೇಟ್​ ಮಾಡಿದ ಆಹಾರಗಳನ್ನು ಸೇವಿಸುವ ಬದಲು, ನಿಮಗೆ ಹಸಿವಾದಾಗಲೆಲ್ಲ ತಿನ್ನಲು ಸೇಬು ಅಥವಾ ಬಾಳೆಹಣ್ಣು, ಒಣ ಹಣ್ಣುಗಳನ್ನು ತಿನ್ನಿರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.