ETV Bharat / sukhibhava

Oil for Health: ಯಾವ ಅಡುಗೆ ಎಣ್ಣೆ ಆರೋಗ್ಯಕ್ಕೆ ಉತ್ತಮ; ತಿಂಗಳಿಗೆ ಎಷ್ಟು ಬಳಕೆ ಮಾಡಬೇಕು?

ಅತಿಯಾದ ಎಣ್ಣೆಯನ್ನು ಅಡುಗೆಯಲ್ಲಿ ಬಳಕೆ ಮಾಡುವುದು ಸರಿಯಾದ ಕ್ರಮವಲ್ಲ. ಹಾಗೆಂದ ಮಾತ್ರಕ್ಕೆ ಎಣ್ಣೆಯನ್ನು ಬಳಸದೇ ಇರುವುದು ತಪ್ಪು.

2-liter-cooking-oil-is-enough-for-four-member-family-a-month

author img

By

Published : Jul 4, 2023, 12:43 PM IST

ಭಾರತೀಯ ಅಡುಗೆಯಲ್ಲಿ ಎಣ್ಣೆಗೆ ಪ್ರಮುಖ ಸ್ಥಾನ. ಪ್ರತಿ ಅಡುಗೆಯಲ್ಲಿ ಸಾಕಷ್ಟು ಎಣ್ಣೆಯನ್ನು ಬಳಕೆ ಮಾಡುತ್ತೇವೆ. ಆಹಾರದ ರುಚಿ ಹೆಚ್ಚಿಸುವಲ್ಲಿ ಎಣ್ಣೆy ಅವಶ್ಯಕತೆ ಇರುವ ಹಿನ್ನೆಲೆ ಕೆಲವರು ಅಡುಗೆ ಬಳಿಕವೂ ಎಣ್ಣೆಯನ್ನು ಮತ್ತಷ್ಟು ಸೇರಿಸುತ್ತಾರೆ. ಇದರ ಹೊರತಾಗಿ ಕೆಲವರು ವನಸ್ಪತಿಯನ್ನು ಬಳಕೆ ಮಾಡುತ್ತಾರೆ. ಅಡುಗೆ ರುಚಿ ಹೆಚ್ಚಿಸಿದರೂ ಅತಿಯಾದ ಎಣ್ಣೆಯನ್ನು ಬಳಕೆ ಮಾಡುವುದು ಸರಿಯಲ್ಲ. ಇದರಿಂದ ರಕ್ತನಾಳದಲ್ಲಿ ಹೆಪ್ಪುಗಟ್ಟುವಿಕೆ (ಕ್ಲಾಟ್)​ ಆಗುವ ಸಾಧ್ಯತೆಯೂ ಇದೆ. ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗೆ ಇದು ಕಾರಣವಾಗುವ ಹಿನ್ನೆಲೆ ಎಣ್ಣೆ ಬಳಕೆಯಲ್ಲಿ ಜಾಗ್ರತೆ ವಹಿಸುವುದು ಮುಖ್ಯವಾಗುತ್ತದೆ.

ಅಂಶ ತಿಳಿಯಿರಿ: ಎಣ್ಣೆ ಬಳಕೆ ಅಡುಗೆ ಮಾಡುವುದು ಅಸಾಧ್ಯ. ದೇಹಕ್ಕೆ ವಿಟಮಿನ್​ ಎ, ಡಿ, ಇ ಮತ್ತು ಕೆ ಯಿಂದ ಸಮೃದ್ಧವಾದ ಎಣ್ಣೆ ಅವಶ್ಯಕವಾಗಿದೆ. ದೈಹಿಕ ಚಟುವಟಿಕೆಗೆ ಬೇಕಾದ ಶಕ್ತಿಯನ್ನು ಈ ಎಣ್ಣೆ ನೀಡುತ್ತದೆ. ಅನೇಕ ವಿಧದ ಎಣ್ಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ನಡುವೆ ನಮಗೆ ಯಾವ ಎಣ್ಣೆ ಅವಶ್ಯಕತೆ ಇದೆ ಎಂಬುದನ್ನು ನಾವು ತಿಳಿಯಬೇಕಿದೆ. ಎಣ್ಣೆ ಬೀಜಗಳನ್ನು ಕೋಲ್ಡ್​ ಪ್ರೆಸ್ಡ್​​ ಮಾಡಿದರೆ, ಇದರಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ. ಇವುಗಳನ್ನು ಹೆಚ್ಚು ಬಿಸಿ ಕೂಡ ಮಾಡಿರುವುದಿಲ್ಲ. ಇದರ ನೈಸರ್ಗಿಕ ರುಚಿ ಹಾಗೇಯೇ ಇರುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್​ ಮತ್ತು ಆ್ಯಂಟಿಆಕ್ಸಿಡೆಂಟ್​ ಇರುತ್ತದೆ.

ರಿಫೈಡ್​ ಎಣ್ಣೆ: ರಿಫೈಡ್​ ಎಣ್ಣೆಗಳನ್ನು ಎಣ್ಣೆ ಬೀಜಗಳನ್ನು ಬಿಸಿ ಮಾಡುವುದರಿಂದ ತಯಾರಿಸಲಾಗುತ್ತದೆ. ರಾಸಾಯನಿಕ ದ್ರಾವಕಗಳನ್ನು ಕೂಡ ಇದರಲ್ಲಿ ಬೆರೆಸುವ ಮೂಲಕ ದೀರ್ಘಾವಧಿಗೆ ಶುದ್ಧವಾಗಿರುವಂತೆ ಕಾಪಾಡಲಾಗುವುದು. ಈ ಎಣ್ಣೆ ಪ್ರಕ್ರಿಯೆ ವೇಳೆ ಒಮೆಗಾ 3 ಫ್ಯಾಟಿ ಆಸಿಡ್​ ಮತ್ತು ಆ್ಯಂಟಿಆಕ್ಸಿಡೆಂಟ್ ಕಣ್ಮರೆಯಾಗುತ್ತದೆ. ಜೊತೆಗೆ ಅಪಾಯಕಾರಿ ರಾಸಾಯನಿಕಗಳನ್ನು ತೆಗೆದು ಹಾಕುತ್ತದೆ. ಉದಾಹರಣೆಗೆ, ಶಿಲೀಂಧ್ರದಿಂದ ಕಲುಷಿತಗೊಂಡ ಕಡಲೆಕಾಯಿಗಳು ಅಫ್ಲಾಟಾಕ್ಸಿನ್ ಎಂಬ ವಿಷವನ್ನು ಹೊಂದಿರಬಹುದು. ಇದು ವಾಂತಿ, ತಲೆ ಸುತ್ತುವಿಕೆ ಮತ್ತು ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ.

ಮಿಶ್ರಣದ ಎಣ್ಣೆ: ಎಲ್ಲಾ ಎಣ್ಣೆಗಳು ಒಂದೇ ಆಗಿರುವುದಿಲ್ಲ. ಕೆಲವು ಎಣ್ಣೆಗಳು ಪ್ರಯೋಜನಕಾರಿ ವಸ್ತುವನ್ನು ಹೊಂದಿರುತ್ತದೆ. ಈ ಹಿನ್ನೆಲೆ ಅವುಗಳನ್ನು ಒಟ್ಟಿಗೆ ಬಳಸುವುದು ಉತ್ತಮ. ಕೆಲವು ಕೋಲ್ಡ್​ ಪ್ರೆಸ್ಡ್​​ ಎಣ್ಣೆಯನ್ನು ಎಳ್ಳು, ಕಡಲೆ, ಹರಳು ಮತ್ತು ಸಾಸಿವೆ ಎಣ್ಣೆಯಲ್ಲಿ ಮಿಶ್ರಣ ಮಾಡಬಹುದು. ಆಲಿವ್​ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಾಗಿದೆ. ಆದರೆ, ಇದು ದುಬಾರಿಯಾಗಿದೆ.

ತಿಂಗಳಿಗೆ ಅರ್ಧ ಲೀಟರ್​: ವ್ಯಕ್ತಿಯೊಬ್ಬರು ದಿನಕ್ಕೆ 3-5 ಸ್ಪೂನ್​ ಎಣ್ಣೆಯನ್ನು ಬಳಕೆ ಮಾಡಬೇಕು. ಅದರ ಅನುಸಾರ ತಿಂಗಳಿಗೆ ಅರ್ಧ ಲೀಟರ್​ ಎಣ್ಣೆ ಸಾಕಾಗುತ್ತದೆ. ಇದರ ಅನುಸಾರ ನಾಲ್ಕು ಜನರ ಕುಟುಂಬಕ್ಕೆ ತಿಂಗಳಿಗೆ 2 ಲೀಟರ್​​ ಎಣ್ಣೆಗಿಂತ ಹೆಚ್ಚು ಬಳಕೆ ಮಾಡಬಾರದು. ಎಣ್ಣೆಯನ್ನು ಯಾವ ತಾಪಮಾನದಲ್ಲಿ ಬಿಸಿಯಾಗಿದೆ, ಇದರ ರುಚಿ ಮತ್ತು ಪೋಷಕಾಂಶದ ಮೌಲ್ಯ ಏನು? ಈ ರೀತಿ ಎಣ್ಣೆ ಕುರಿತು ಪ್ರತಿಯೊಂದು ಮಾಹಿತಿ ಪಡೆದ ಬಳಿಕ ಅಡುಗೆ ಎಣ್ಣೆಯನ್ನು ಕೊಳ್ಳಬೇಕಿದೆ. ಇದಕ್ಕಿಂತ ಮುಖ್ಯವಾಗಿ, ಎಣ್ಣೆ ಫ್ಯಾಟ್​ ಎಷ್ಟು ಇರುತ್ತದೆ ಎಂಬುದನ್ನು ಸಹ ಗಮನಿಸಬೇಕಿದೆ.

ಇದನ್ನೂ ಓದಿ: Millets Pizza: ನೀವು ಪಿಜ್ಜಾ ಪ್ರಿಯರೇ? ಆರೋಗ್ಯಕರ ಸಿರಿಧಾನ್ಯ ಪಿಜ್ಜಾ ಗೊತ್ತೇ? ಇಲ್ಲಿದೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.