ಸುರಪುರ: ಕೃಷ್ಣಾನದಿಗೆ ದೇವರ ಗಂಗ ಸ್ನಾನಕ್ಕೆಂದು ಹೋದಾಗ ಯುವಕನೊಬ್ಬ ನೀರು ಪಾಲಾದ ಘಟನೆ ಇಂದು ಸಂಜೆ ನಡೆದಿದೆ. ಪಲ್ಲಕ್ಕಿಯೊಂದಿಗೆ ಆಗಮಿಸಿದ್ದ ಬಂಟನೂರು ಗ್ರಾಮದ ಯುವಕ ಶಿವಕುಮಾರ್ ಅಸ್ಕಿ ನೀರುಪಾಲಾದ ಯುವಕ.
ಹುಣಸಗಿ ತಾಲೂಕಿನ ಕೊಡೆಕಲ್ ಬಳಿಯ ಮಂಜುಳಾ ಪುರ ಹತ್ತಿರವಿರುವ ಕೃಷ್ಣಾನದಿಗೆ ತಾಳಿಕೋಟೆ ತಾಲೂಕಿನ ಬಂಟನೂರು ಗ್ರಾಮದಿಂದ ಜಟ್ಟಿಂಗೇಶ್ವರ ದೇವರ ಪಲ್ಲಕ್ಕಿಯೊಂದಿಗೆ ಗಂಗಾ ಸ್ನಾನಕ್ಕೆ ಆಗಮಿಸಲಾಗಿತ್ತು.
ಘಟನೆ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ವಿನಯ್ ಕುಮಾರ್ ಪಾಟೀಲ್ ಭೇಟಿ ನೀಡಿದ್ದು ಕೊಡೆಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ. ಘಟನಾ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಯುವಕನ ಶೋಧ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದಾರೆ ಹಾಗೂ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.