ETV Bharat / state

ಒಂದೆಡೆ ಪ್ರವಾಹದಿಂದ ಬೆಳೆ ಹಾನಿ, ಮತ್ತೊಂದೆಡೆ ಕಾರ್ಮಿಕರ ಕೊರತೆ: ಸಂಕಷ್ಟದಲ್ಲಿ ಯಾದಗಿರಿ ರೈತರು.. - ಯಾದಗಿರಿ ಜಿಲ್ಲೆಯ ರೈತರು ಭತ್ತ ಕಟಾವು ಮಾಡಿ ಮಾರಾಟ

ಜಿಲ್ಲೆಯ ಶಹಾಪುರ, ಸುರಪುರ, ಯಾದಗಿರಿ, ವಡಗೇರಾ, ಹುಣಸಗಿ,ಮೊದಲಾದ ಕಡೆ ಭತ್ತ ಕಟಾವಿಗೆ ಬಂದಿದ್ದು, ಕೂಲಿ ಕಾರ್ಮಿಕರ ಕೊರತೆ ಹಿನ್ನಲೆ ಯಂತ್ರಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೂಲಿ ಕಾರ್ಮಿಕರು ಕೊರೊನಾ ಆತಂಕದ ನಡುವೆಯು ಬೆಂಗಳೂರು, ಮುಂಬೈ, ಹೈದ್ರಾಬಾದ್ ಹಾಗೂ ಇನ್ನಿತರ ಬೃಹತ್ ನಗರಗಳತ್ತ ವಲಸೆ ಹೋಗಿದ್ದು, ಅದೆ ರೀತಿ ಈಗ ಹತ್ತಿ ಬೆಳೆ ತೆಗೆಯಲು ಕೂಲಿ ಕಾರ್ಮಿಕರು ಹತ್ತಿ ಬಿಡಿಸಲು ಹೆಚ್ಚಿಗೆ ತೆರಳುತ್ತಿದ್ದಾರೆ.

yadagiri-paddy-grown-farmers-problem-news
ಮತ್ತೊಂದೆಡೆ ಕಾರ್ಮಿಕರ ಕೊರತೆ: ಸಂಕಷ್ಟದಲ್ಲಿ ಯಾದಗಿರಿ ರೈತರು
author img

By

Published : Nov 7, 2020, 10:39 PM IST

ಯಾದಗಿರಿ: ಭೀಮಾ ಹಾಗೂ ‌ಕೃಷ್ಣಾ ನದಿ ಪ್ರವಾಹಕ್ಕೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಭತ್ತದ ಬೆಳೆ ಹಾನಿ ಆಗುವ ಮೂಲಕ ಸಂಕಷ್ಟಕ್ಕೀಡಾಗಿದ್ದು, ಇದರ ಮಧ್ಯ ಉತ್ತಮ ಇಳುವರಿ ಬೆಳೆದ ಭತ್ತ ಕಟಾವು ಮಾಡಲು ರೈತರು ಈಗ ಹೆಣಗಾಡುವಂತಾಗಿದೆ.

ಮತ್ತೊಂದೆಡೆ ಕಾರ್ಮಿಕರ ಕೊರತೆ: ಸಂಕಷ್ಟದಲ್ಲಿ ಯಾದಗಿರಿ ರೈತರು

ರೈತರ ಅನಿವಾರ್ಯತೆಯನ್ನೆ ಬಂಡವಾಳ ಮಾಡಿಕೊಂಡ ದಲ್ಲಾಳಿಗಳು ಹೆಚ್ಚಿನ ಬಾಡಿಗೆ ಹಣ ಪಾವತಿಸಿದರೆ ಮಾತ್ರ ಭತ್ತ ಕಟಾವು ಮಾಡುವ ಯಂತ್ರ ತೆಗೆದುಕೊಂಡು ರೈತರ ಜಮೀನಿಗೆ ತೆರಳುತ್ತಿದ್ದಾರೆ. ಇದರಿಂದ ಸಾಲಸೂಲ ಮಾಡಿ ಭತ್ತ ಬೆಳೆದ ಯಾದಗಿರಿ ಜಿಲ್ಲೆಯ ರೈತರು ಭತ್ತ ಕಟಾವು ಮಾಡಿ ಮಾರಾಟ ಮಾಡಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲೆಯ ಶಹಾಪುರ, ಸುರಪುರ, ಯಾದಗಿರಿ, ವಡಗೇರಾ, ಹುಣಸಗಿ,ಮೊದಲಾದ ಕಡೆ ಭತ್ತ ಕಟಾವಿಗೆ ಬಂದಿದ್ದು, ಕೂಲಿ ಕಾರ್ಮಿಕರ ಕೊರತೆ ಹಿನ್ನಲೆ ಯಂತ್ರಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೂಲಿ ಕಾರ್ಮಿಕರು ಕೊರೊನಾ ಆತಂಕದ ನಡುವೆಯು ಬೆಂಗಳೂರು, ಮುಂಬೈ, ಹೈದ್ರಾಬಾದ್ ಹಾಗೂ ಇನ್ನಿತರ ಬೃಹತ್ ನಗರಗಳತ್ತ ವಲಸೆ ಹೋಗಿದ್ದು, ಅದೆ ರೀತಿ ಈಗ ಹತ್ತಿ ಬೆಳೆ ತೆಗೆಯಲು ಕೂಲಿ ಕಾರ್ಮಿಕರು ಹತ್ತಿ ಬಿಡಿಸಲು ಹೆಚ್ಚಿಗೆ ತೆರಳುತ್ತಿದ್ದಾರೆ. ಇದರಿಂದ ಭತ್ತ ಕಟಾವು ಮಾಡಲು ಭಾರಿ ಪ್ರಮಾಣದಲ್ಲಿ ಕಾರ್ಮಿಕರ ಸಂಕಷ್ಟ ಎದುರಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಹಾಗೂ ಖಾಸಗಿ ಎಜೆನ್ಸಿಗಳ ಸಹಯೋಗದಲ್ಲಿ ಕೃಷಿ ಯಂತ್ರಧಾರೆ ಬಾಡಿಗೆ ಆಧಾರಿತ ಸೇವಾ ಕೇಂದ್ರ ಆರಂಭ ಮಾಡಿದ್ದು ಯಂತ್ರಗಳಿಗೆ ಕಡಿಮೆ ದರ ನಿಗದಿ ಮಾಡಿದೆ. ಭತ್ತ ಕಟಾವು ಮಾಡುವ ಯಂತ್ರಕ್ಕೆ ಪ್ರತಿ ಗಂಟೆಗೆ 1300 ರೂ. ನಿಗದಿ ಮಾಡಿದ್ದು ಆದರೆ, 6 ಭತ್ತ ಕಟಾವು ಮಾಡುವ ಯಂತ್ರ ಮಾತ್ರ ಲಭ್ಯ ಇವೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ರೈತರಿಗೆ ಸರಿಹೋಗುತ್ತಿಲ್ಲ.

ಈಗಾಗಲೇ ಕಟಾವು ಮಾಡಿದ ಭತ್ತ ಖರೀದಿ ಮಾಡುವರು ಇಲ್ಲದಂತಾಗಿದ್ದು, ಕಡಿಮೆ ದರಕ್ಕೆ ಅಂದರೆ ಪ್ರತಿ 75 ಕೆಜಿ ಭತ್ತಕ್ಕೆ 900 ರೂ. ನಂತೆ ದಲ್ಲಾಳಿಗಳು ‌ಖರೀದಿ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 50 ಚೀಲ ಇಳುವರಿ ಬರುವ ಬದಲು ಭಾರಿ ಮಳೆಯಿಂದ 35 ಚೀಲ ಇಳುವರಿ ಬಂದಿದೆ. ಒಂದು ಕಡೆ ಇಳುವರಿ ಕಡಿಮೆ, ಮತ್ತೊಂದೆಡೆ ಭತ್ತಕ್ಕೆ ಒಳ್ಳೆ ದರ ಇಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರ ದಲ್ಲಾಳಿಗಳ ಹಾವಳಿ ತಪ್ಪಿಸುವ ಮೂಲಕ ಜಿಲ್ಲೆಯಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಅಂತ ರೈತ ಮುಖಂಡರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.