ETV Bharat / state

ರೈತನ ಮಗನಿಗೆ ಒಲಿದ ಕೆಎಎಸ್ ಉನ್ನತ ಹುದ್ದೆ.. ಸಾಧನೆಯ ಹಾದಿ ಬಿಚ್ಚಿಟ್ಟ ಅಶೋಕ - KAS exam

ಹಲವು ವರ್ಷಗಳ ತುಡಿತ. ಸಾಧಿಸಲೇಬೇಕೆಂಬ ಛಲ. ಅಚಲ ವಿಶ್ವಾಸ. ಅದಕ್ಕೆ ತಕ್ಕಂತೆ ಹಗಲು ರಾತ್ರಿ ಎನ್ನದೇ ಪಟ್ಟ ಶ್ರಮಕ್ಕೆ ರೈತನ ಮಗನಿಗೆ ಕೆಎಎಸ್​ ಉನ್ನತ ಹುದ್ದೆ ಒಲಿದಿದೆ.

KAS Officer by Yadagiri farmer son  Yadagiri farmer Son Become KAS Officer  Yadagiri farmer Son  ರೈತನ ಮಗನಿಗೆ ಕೆಎಎಸ್​ ಉನ್ನತ ಹುದ್ದೆ  ಕರ್ನಾಟಕ ಲೋಕಸೇವಾ ಆಯೋಗ  ಕರ್ನಾಟಕ ಆಡಳಿತ ಸೇವೆ ಅಧಿಕಾರಿ ಹುದ್ದೆಗೆ ಆಯ್ಕೆ  ಮುರಾರ್ಜಿ ದೇಸಾಯಿ ವಸತಿ ಶಾಲೆ  ಸ್ಪರ್ಧಾತ್ಮಕ ‌ಪರೀಕ್ಷೆಯ ಫಲಿತಾಂಶ
ಕರ್ನಾಟಕ ಲೋಕಸೇವಾ ಆಯೋಗ ಫಲಿತಾಂಶ
author img

By

Published : Sep 23, 2022, 12:47 PM IST

Updated : Sep 24, 2022, 12:19 PM IST

ಯಾದಗಿರಿ : 2017-18‌ನೇ ಸಾಲಿನ ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೋಬೆಷನರಿ ಗ್ರೂಪ್ 'ಎ', ಗ್ರೂಪ್ 'ಬಿ' ವೃಂದದ 106 ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ‌ಪರೀಕ್ಷೆಯ ಫಲಿತಾಂಶದ ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ. ಗ್ರಾಮದ ಯುವಕ ಅಶೋಕ್ ಸಾಲೋಗಿ (ವಾಣಿಜ್ಯ ತೆರಿಗೆ ಇಲಾಖೆ) ಹುದ್ದೆಗೆ ಆಯ್ಕೆ ಆಗುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾನೆ.

ಗ್ರಾಮದ ಕೃಷಿ ಕುಟುಂಬದ ದಿ. ಮಲ್ಲಪ್ಪ, ಮಲ್ಲಮ್ಮ ದಂಪತಿಯ ದ್ವಿತೀಯ ಪುತ್ರ ಅಶೋಕ ಸಾಲೋಗಿ ಛಲ ಬಿಡದೇ ಅಧ್ಯಯನ ಮಾಡಿ, ಕರ್ನಾಟಕ ಆಡಳಿತ ಸೇವೆ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾನೆ. ಸದ್ಯ ಶಹಾಪುರ ತಾಲೂಕಿನ ಬೇವಿನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಜ್ಞಾನ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೋಟಗೇರಾ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಗಾಜರ್ ಕೋಟದಲ್ಲಿ ಪ್ರೌಢ ಶಿಕ್ಷಣ, ಯಾದಗಿರಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ, ಕಲ್ಬುರ್ಗಿ ಜಿಲ್ಲೆ ಶಹಾಬಾದ ತಾಲೂಕಿನ ಎಸ್. ಎಸ್. ಮರಗೋಳ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಯಾದಗಿರಿ ಡಾನ್ ಬಾಸ್ಕೋ ವಿದ್ಯಾಸಂಸ್ಥೆಯಲ್ಲಿ ಬಿಇಡಿ ಪದವಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂಎಸ್​ಸಿ ( ಜೀವಶಾಸ್ತ್ರ) ಪೂರ್ಣಗೊಳಿಸಿದ್ದಾರೆ.

KAS Officer by Yadagiri farmer son  Yadagiri farmer Son Become KAS Officer  Yadagiri farmer Son  ರೈತನ ಮಗನಿಗೆ ಕೆಎಎಸ್​ ಉನ್ನತ ಹುದ್ದೆ  ಕರ್ನಾಟಕ ಲೋಕಸೇವಾ ಆಯೋಗ  ಕರ್ನಾಟಕ ಆಡಳಿತ ಸೇವೆ ಅಧಿಕಾರಿ ಹುದ್ದೆಗೆ ಆಯ್ಕೆ  ಮುರಾರ್ಜಿ ದೇಸಾಯಿ ವಸತಿ ಶಾಲೆ  ಸ್ಪರ್ಧಾತ್ಮಕ ‌ಪರೀಕ್ಷೆಯ ಫಲಿತಾಂಶ
ಕೆಎಎಸ್ ಉನ್ನತ ಹುದ್ದೆ ಪಡೆದ ರೈತನ ಮಗ ಅಶೋಕ ಸಾಲೋಗಿ

2011 ರಲ್ಲಿ ಶಹಾಪುರ ತಾಲೂಕಿನ ಬೇವಿನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕ, 2012 ರಲ್ಲಿ ಹೊಸಕೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುತ್ತಿಗೆ ಆಧಾರದ ಶಿಕ್ಷಕ, 2013 ರಲ್ಲಿ ಯಾದಗಿರಿ ರತನ್ ಟಾಟಾ ಟ್ರಸ್ಟ್​ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, 2014 ಬೆಂಗಳೂರಿನ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ 2016 ರಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಮಯ ಮೀಸಲಿಡುತ್ತಿದ್ದೆ. ಮಾಸಿಕ ಮ್ಯಾಕ್ಸಿನ್, ದಿನಪತ್ರಿಕೆ ಪತ್ರಿಕೆಗಳು ಓದುತ್ತಿದ್ದೆ. ಮನನ ಮಾಡಿಕೊಳ್ಳುತ್ತಿದ್ದೆ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಿದೆ. ಆಗಸ್ಟ್ 2020 ಕ್ಕೆ ಪ್ರಿಲಿಮ್​ನರಿ ಪರೀಕ್ಷೆ, ಫೆಬ್ರವರಿ 2021 ಮುಖ್ಯ ಪರೀಕ್ಷೆ, ಆಗಸ್ಟ್ 2022 ಸಂದರ್ಶನ ನಡೆಯಿತು. ಯಾದಗಿರಿ ರಾಜಕೀಯ, ಸಾಮ್ರಾಟ ಅಶೋಕನ ಕುರಿತು ಪ್ರಶ್ನೆಗಳು ಕೇಳಿದರು. ಸೆ.21 ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಂಡಿತು. ಅದರಲ್ಲಿ ನನ್ನ ಹೆಸರು ಇರುವುದು ಸಂತಸ ತಂದಿದೆ ಎಂದು ಅಶೋಕ ಸಾಲೋಗಿ ಪರೀಕ್ಷಾ ಸಿದ್ಧತೆ ಕುರಿತು ತಿಳಿಸಿದರು.

ಓದಿ: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮುದ್ದೇಬಿಹಾಳ ಯುವತಿ ಸಾಧನೆ.. ತಹಶೀಲ್ದಾರ್ ಹುದ್ದೆಗೆ ಆಯ್ಕೆ

Last Updated : Sep 24, 2022, 12:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.