ಯಾದಗಿರಿ: ಕೋಲಿ ಸಮುದಾಯದ ಮುಖಂಡನೊಬ್ಬ ಮಾಜಿ ಸಚಿವ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಚಿಂಚನಸೂರ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಇದೇ ವೇಳೆ ನಿವೃತ್ತ ಬಿಎಸ್ಎನ್ಎಲ್ ನೌಕರ ಹಾಗೂ ಕೋಲಿ ಸಮಾಜದ ಮುಖಂಡ ವೆಂಕಟೇಶ್ ಎನ್ನುವವರು ಬಿಜೆಪಿ ಸರ್ಕಾರ ನೀಮಗೆ ನಿಗಮದ ಅಧ್ಯಕ್ಷ ಮಾಡಿದೆ. ಆದ್ರೆ ನಯಾ ಪೈಸೆ ಕೊಟ್ಟಿಲ್ಲ. ನಿಗಮದ ಖಾತೆಗೆ ಹಣ ಬಿಡುಗಡೆ ಮಾಡಿಲ್ಲ. ಒಂದು ಅರ್ಥದಲ್ಲಿ ಅಂಗಡಿ ಇದೆ. ಆದ್ರೆ ಅಂಗಡಿಯಲ್ಲಿ ವಸ್ತುಗಳಿಲ್ಲ ಅಂತಾ ಅಂಗಡಿಯಲ್ಲಿ ನಿಮ್ಮನ್ನು ಕೂರಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು.
ನಿಮ್ಮ ಹಿಂಬಾಲಕರೇ ಸಮಾಜ ಇಬ್ಭಾಗ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಚೇಲಾಗಳಿಂದ ನೀವು ಸ್ವಲ್ಪ ದೂರ ಇರಿ. ಜೊತೆಗೆ ನಾನು ಸಹ ಸಮುದಾಯದ ಮುಖಂಡನಿದ್ದೇನೆ. ಆದ್ರೆ ನನಗೆ ಯಾರೂ ಕೆರೆಯುವುದಿಲ್ಲ. ಬಿಜೆಪಿಯಿಂದ ಉಮೇಶ್ ಜಾಧವ್ ಸಂಸದರಾಗಿ ಗೆದ್ದು ಹೋಗಿದ್ದಾರೆ. ಕೋಲಿ ಸಮಾಜಕ್ಕೆ ಏನು ಮಾಡಿದ್ದಾರೆ ಎಂದು ಚಿಂಚನಸೂರ ಅವರಿಗೆ ಪ್ರಶ್ನಿಸಿದ್ರು.