ETV Bharat / state

ದಿನೇಶ್ ಗುಂಡೂರಾವ್​ಗೆ ಯಾದಗಿರಿ ಶಾಸಕ ಮುದ್ನಾಳರಿಂದ ಟಾಂಗ್ - kannada news

ಆಪರೇಷನ್ ಕಮಲದ ಬಗ್ಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್​ಗೆ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ
author img

By

Published : Jul 2, 2019, 10:48 PM IST

ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಯಮಕನಕರಡಿ ಕ್ಷೇತ್ರದ ಶಾಸಕ ರಮೇಶ ಜಾರಕಿಹೋಳಿ ಹಾಗೂ ವಿಜಯನಗರದ ಶಾಸಕ ಆನಂದ ಸಿಂಗ್ ರಾಜೀನಾಮೆ ಹಿನ್ನೆಲೆಯಲ್ಲಿ ಬಿಜೆಪಿಯವರು ಆಪರೇಷನ್ ಮಾಡಿದರೆ ನಾವು ರಿವರ್ಸ್ ಅಪರೇಶನ್ ಮಾಡುತ್ತೇವೆ ಎಂದು ಬಿಜೆಪಿಗೆ ತೀರುಗೇಟು ನೀಡಿದ್ದರು. ಈ ಹಿನ್ನೆಲೆ ಶಾಸಕ ಮುದ್ನಾಳ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಬಿಜೆಪಿ ಪಕ್ಷವು ಮೋದಿ ನಾಯಕತ್ವದಲ್ಲಿ ಮುಂದುವರಿಯುತ್ತಿದೆ. ದೋಸ್ತಿ ಸರ್ಕಾರದಲ್ಲಿ ನಾಯಕತ್ವವಿಲ್ಲ. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಕೊರತೆಯಿಂದ ನಾಯಕರೇ ಕಚ್ಚಾಟದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷವು ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಅಸಾಧ್ಯ ಎಂದು ವ್ಯಂಗವಾಗಿ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಶಾಸಕರ ರಾಜೀನಾಮೆಯಲ್ಲಿ ಬಿಜೆಪಿ ಪಕ್ಷದ ನಾಯಕರ ಕೈವಾಡವಿಲ್ಲ. ನಮ್ಮ ಹೈಕಮಾಂಡಿನಿಂದ ಕಾಂಗ್ರೆಸ್​ನ ಯಾವೊಬ್ಬ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳದಿರಿ ಎಂದು ನಿರ್ದೇಶನವಿದೆ ಎಂದು ಅವರು ಹೇಳಿದರು.

Intro:ಯಾದಗಿರಿ : ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಕಾಂಗ್ರೆಸನ ಹಿರಿಯ ನಾಯಕ್ ಹಾಗೂ ಕೆ ಪಿ ಸಿ ಸಿ ಅಧ್ಯಕ್ಷ ದಿನೇಶ ಗುಂಡುರಾವ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಯಮಕನಕರಡಿ ಕ್ಷೇತ್ರದ ಶಾಸಕ ರಮೇಶ ಜಾರಕಿಹೋಳಿ, ಹಾಗೂ ವಿಜಯನಗರದ ಶಾಸಕ ಆನಂದ ಸಿಂಗ್ ರಾಜೀನಾಮೆ ಹಿನ್ನೆಲೆ ಕೆಪಿಸಿ ಸಿ ಅಧ್ಯಕ್ಷ ದಿನೇಶ ಗುಂಡುರಾವ ಬಿಜಿಪಿಯಲ್ಲಿ ರೀವರ್ಸ ಅಪರೇಶನ ಮಾಡುತ್ತಿವೆ ಎಂದು ಪರೋಕ್ಷವಾಗಿ ಬಿಜೆಪಿ ಪಕ್ಷಕ್ಕೆ ತೀರುಗೇಟು ನೀಡಿದ ಹಿನ್ನಲೆ ಶಾಸಕ ಮುದ್ನಾಳ ಕಾಂಗ್ರೆಸ್ ನಾಯಕ ದಿನೇಶ ಗುಂಡುರಾವ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಬಿಜೆಪಿ ಪಕ್ಷವು ಮೋದಿ ನಾಯಕತ್ವದಲ್ಲಿ ಮುಂದುವರಿಯುತ್ತಿದೆ. ದೋಸ್ತಿ ಸರಕಾರದಲ್ಲಿ ನಾಯಕತ್ವವಿಲ್ಲ. ಅದರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಕೊರತೆಯಿಂದ ನಾಯಕರುಗಳೆ ಕಚ್ಚಾಟದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ರೂವಾರಿಗಳಿಲ್ಲ. ಕಾಂಗ್ರೆಸ ಪಕ್ಷವು ಸೂತ್ರವಿಲ್ಲದ ಗಾಳೀಪಟವಂತಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಅಸಾಧ್ಯ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ವ್ಯಂಗವಾಗಿ ದಿನೇಶ ಗುಂಡುರಾವ್ಗೆ ವಾಗ್ದಾಳಿ ನಡೆಸಿದ್ದಾರೆ.

Body:ಕಾಂಗ್ರೆಸ್ ಶಾಸಕರ ರಾಜೀನಾಮೆಗೆ ಬಿಜೆಪಿ ಪಕ್ಷದ ನಾಯಕರ ಕೈವಾಡವಿಲ್ಲ. ನಮ್ಮ ಹೈಕಮಾಂಡನಿಂದ ಕಾಂಗ್ರೆಸ್ನ ಯಾವೊಬ್ಬ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳದಿರಿ ಎಂದು ನಿರ್ದೇಶನವಿದೆ.

Conclusion:ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ರಾಜೀನಾಮೆ ನೀಡಿರುವುದು ಅವರ ವ್ಯಯಕ್ತಿಕ ವಿಚಾರ. ಇಬ್ಬರೂ ನಾಯಕರು ರಾಜೀನಾಮಿ ನೀಡಿದ್ರೆ ಬಿಜೆಪಿ ಪಕ್ಷವು ಸರಕಾರ ರಚನೆ ಮಾಡಲು ಆಗುವುದಿಲ್ಲ. ಇನ್ನಷ್ಟು ನಾಯಕರು ರಾಜೀನಾಮೆ ನೀಡಿದ್ರೆ ಬಿಜೆಪಿ ಪಕ್ಷವು ಸರಕಾರ ರಚನೆ ಮಾಡಬಹುದು ಎಂದು ಮಾರ್ಮಿಕವಾಗಿ ಶಾಸಕ ಮುದ್ನಾಳ ಅಪಹ್ಯಾಸ ಮಾಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.