ETV Bharat / state

ಸುರಪುರದ 8 ಕ್ವಾರಂಟೈನ್​ ಕೇಂದ್ರದಿಂದ 158 ಜನರ ಗಂಟಲು ದ್ರವ ಪರೀಕ್ಷೆಗೆ ರವಾನೆ - Polytechnic College Hostel

ಯಾದಗಿರಿ ಜಿಲ್ಲೆಯಲ್ಲೂ ಕೊರೊನಾ ಭೀತಿ ಹಿನ್ನೆಲೆ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಮತ್ತೊಂದು ಸೋಂಕು ದೃಢಪಟ್ಟಿದ್ದ ಹಿನ್ನೆಲೆ ಕ್ವಾರಂಟೈನ್ ಕೇಂದ್ರದಲ್ಲಿರುವ ಸುಮಾರು 158 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗತ್ತಿದೆ. ಇದರಿಂದ ತಾಲೂಕಿನ ಜನತೆಯಲ್ಲಿ ಭೀತಿ ಉಂಟಾಗಿದೆ.

throat fluid of 8 Quarantine Centers will taken to test at Surapur
ಸುರಪುರದ 8 ಕ್ವಾರಂಟೈನ್​ ಕೇಂದ್ರದಿಂದ ಗಂಟಲು ದ್ರವ ಪರೀಕ್ಷಗೆ ರವಾನೆ
author img

By

Published : May 16, 2020, 7:25 PM IST

ಸುರಪುರ(ಯಾದಗಿರಿ): ನಗರದ ಪಾಲಿಟೆಕ್ನಿಕ್ ಕಾಲೇಜು ವಸತಿ ನಿಲಯಗಳು ಸೇರಿ ಎಂಟು ಕ್ವಾರಂಟೈನ್‌ಗಳಲ್ಲಿರುವ 158ಕ್ಕೂ ಹೆಚ್ಚು ಜನರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿದೆ.

ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಮಾಹಿತಿ ನೀಡಿ, ಸರ್ಕಾರದ ನಿರ್ದೇಶನದಂತೆ ಕ್ವಾರಂಟೈನಲ್ಲಿರುವವರಲ್ಲಿನ 10 ವರ್ಷದ ಒಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಗರ್ಬಿಣಿ ಹಾಗೂ ಕ್ಯಾನ್ಸರ್ ‌ನಂತಹ ಮಾರಕ ಕಾಯಿಲೆಗಳಿಂದ ಬಳಲುತ್ತಿರುವವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಸುರಪುರದ 8 ಕ್ವಾರಂಟೈನ್​ ಕೇಂದ್ರದಿಂದ ಗಂಟಲು ದ್ರವ ಪರೀಕ್ಷಗೆ ರವಾನೆ

ಇಲ್ಲಿಯ 8 ಕ್ವಾರಂಟೈನ್ ಸೆಂಟರ್​​​​ಗ​​ಳಲ್ಲಿನ ಒಟ್ಟು 158 ಜನರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ನಗರದ ಆಸರ ಮೊಹಲ್ಲಾದ ಇಬ್ಬರಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದರಿಂದ ಭಯಭೀತರಾಗಿರುವ ನಗರದ ಜನರು, ಈಗ 158 ಜನರ ಗಂಟಲು ದ್ರವ ಪರೀಕ್ಷೆಗೆ ಸಂಗ್ರಹಿಸಿದ್ದರಿಂದ ಇವರಲ್ಲಿ ಯಾರಿಗಾದರೂ ಕೊರೊನಾ ಪಾಸಿಟಿವ್ ಬಂದರೆ ಗತಿ ಏನು ಎಂಬ ಆತಂಕ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.