ETV Bharat / state

ನಿತ್ಯೋತ್ಸವ ಕವಿಗೆ ಸುರಪುರ ಪತ್ರಕರ್ತರಿಂದ ಶ್ರದ್ಧಾಂಜಲಿ - ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್

ಅಗಲಿದ ಕನ್ನಡದ ಹೆಸರಾಂತ ಕವಿ ನಿಸಾರ್ ಅಹಮ್ಮದ್​ ಅವರಿಗೆ ಸುರಪುರ ಕರ್ನಾಟಕ ಜರ್ನಲಿಸ್ಟ್​ ಯೂನಿಯನ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Taluk Journalist association Tributes to kannada poet Nisar ahmed in Surapura
ನಿತ್ಯೋತ್ಸವ ಕವಿಗೆ ಸುರಪುರ ಪತ್ರಕರ್ತರ ವತಿಯಿಂದ ಶ್ರದ್ಧಾಂಜಲಿ
author img

By

Published : May 4, 2020, 10:59 PM IST

ಸುರಪುರ(ಯಾದಗಿರಿ): ಮೊನ್ನೆಯಷ್ಟೇ ನಿಧನರಾದ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಕರ್ನಾಟಕ ಜರ್ನಲಿಸ್ಟ್​ ಯೂನಿಯನ್ ಸುರಪುರ ತಾಲೂಕು ಘಟಕದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಗರದ ಕರ್ನಾಟಕ ಜರ್ನಲಿಸ್ಟ್​ ಯೂನಿಯನ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ನಂತರ ಸಂಘದ ಅಧ್ಯಕ್ಷ ರಾಜು ಕುಂಬಾರ ಮಾತನಾಡಿ, ಕೆ.ಎಸ್.ನಿಸಾರ್ ಅಹಮದ್ ಅವರು ಈ ನಾಡು ಕಂಡ ಮೇರು ಸಾಹಿತಿಗಳಲ್ಲಿ ಒಬ್ಬರು. ಅವರ ಚಿಂತನೆಗಳು ತುಂಬಾ ವೈಚಾರಿಕವಾಗಿದ್ದವು. ಅಲ್ಲದೆ ಅವರು ಬದುಕಿನುದ್ದಕ್ಕೂ ಕನ್ನಡವೇ ಜಾತಿ ಧರ್ಮ ದೇವರೆಂದು ಜೀವಿಸಿದವರು. ಇಂದು ಅವರು ನಮ್ಮನ್ನೆಲ್ಲ ಅಗಲಿದ್ದರಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.