ETV Bharat / state

ಸುರಪುರದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರ ಶರ್ಟ್​​ ಬಿಚ್ಚಿಸಿ ಮುಖಕ್ಕೆ ಕಟ್ಟಿಸಿದ ತಹಶೀಲ್ದಾರ್​!​

ಬಂಡೋಳಿ ಗ್ರಾಮದ ಮುಖ್ಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಚೆಕ್ ‌ಪೋಸ್ಟ್​ಗೆ ಇಂದು ತಹಶೀಲ್ದಾರ್​ ನಿಂಗಣ್ಣ ಬಿರಾದಾರ್ ಭೇಟಿ ನೀಡಿದಾಗ ಅನೇಕರು ಮಾಸ್ಕ್ ಧರಿಸದೆ ಓಡಾಡುವುದು ಕಂಡು ಬಂತು.

Tahsildar warns people in surapura turn off thier shirt and tied face of travellers .mp4
ಸುರಪುರದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರ ಶರ್ಟ್​​ ಬಿಚ್ಚಿಸಿ ಮುಖಕ್ಕೆ ಕಟ್ಟಿಸಿದ ತಹಶೀಲ್ದಾರ್​
author img

By

Published : Apr 25, 2020, 5:24 PM IST

ಯಾದಗಿರಿ/ಸುರಪುರ: ಲಾಕ್‌ಡೌನ್ ನಿಯಮ ಪಾಲನೆಗೆ ನಿರ್ಮಿಸಲಾದ ಚೆಕ್ ‌ಪೋಸ್ಟ್‌ ಬಳಿ ಅನಗತ್ಯವಾಗಿ ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ ಯುವಕರ ಬಟ್ಟೆ ಬಿಚ್ಚಿಸಿ ಮುಖಕ್ಕೆ ಕಟ್ಟಿ ಕಳುಹಿಸಿದ ಘಟನೆ ನಡೆದಿದೆ. ಲಾಕ್​​ಡೌನ್​ನಿಂದಾಗಿ ಜನರ ಓಡಾಟ ನಿಷೇಧಿಸಲಾಗಿದ್ದು, ತಾಲೂಕಾಡಳಿತ ಜನರಿಗೆ ಎಷ್ಟು ತಿಳಿಹೇಳಿದರೂ ಲಾಕ್​ಡೌನ್​ ನಿಯಮ ಗಾಳಿಗೆ ತೂರಿ ಜನರು ಓಡಾಡುತ್ತಲೇ ಇದ್ದಾರೆ.

ಸುರಪುರದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರ ಶರ್ಟ್​​ ಬಿಚ್ಚಿಸಿ ಮುಖಕ್ಕೆ ಕಟ್ಟಿಸಿದ ತಹಶೀಲ್ದಾರ್​

ಇನ್ನು ವಾಹನ ಓಡಾಟಕ್ಕೆ ಸಂಬಂಧಿಸಿದಂತೆ ಬಂಡೋಳಿ ಗ್ರಾಮದ ಮುಖ್ಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಚೆಕ್ ‌ಪೋಸ್ಟ್ ಮುಖ್ಯವಾಗಿದೆ. ಈ ಚೆಕ್ ‌ಪೋಸ್ಟ್​ನಿಂದ ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಿಗೆ ಹೋಗಿ ಬರಲು ಇದೇ ಮುಖ್ಯ ರಸ್ತೆಯಾಗಿದೆ. ಈ ಚೆಕ್ ‌ಪೋಸ್ಟ್‌ಗೆ ಇಂದು ತಹಶೀಲ್ದಾರ್​ ನಿಂಗಣ್ಣ ಬಿರಾದಾರ್ ಭೇಟಿ ನೀಡಿದಾಗ ಅನೇಕರು ಮಾಸ್ಕ್ ಧರಿಸದೆ ಓಡಾಡುವುದು ಕಂಡು ಬಂತು.

ತಕ್ಷಣ ಮಾಸ್ಕ್ ಇಲ್ಲದವರನ್ನು ತಡೆದು ಅವರ ಅಂಗಿ ಬಿಚ್ಚಿಸಿ ಮುಖಕ್ಕೆ ಕಟ್ಟಿಸುವ ಮೂಲಕ ಮಾಸ್ಕ್‌ನ ಅವಶ್ಯಕತೆ ಮತ್ತು ಧರಿಸಬೇಕಾದ ಗಂಭೀರತೆಯ ಬಗ್ಗೆ ತಿಳಿಸುವ ಜೊತೆಗೆ ಈ ಚೆಕ್ ‌ಪೋಸ್ಟ್ ಮೂಲಕ ಓಡಾಡುವ ಎಲ್ಲಾ ವಾಹನ ಸವಾರರನ್ನು ತಡೆದು ಮಾಸ್ಕ್ ಧರಿಸುವಂತೆ, ಆಗಾಗ ಕೈ ತೊಳೆಯುವಂತೆ ತಿಳಿಸಿದ್ದಾರೆ.

ತಹಶೀಲ್ದಾರ್​​​ ಸ್ವತಃ ಚೆಕ್ ‌ಪೋಸ್ಟ್‌ನಲ್ಲಿ ನಿಂತು ಜನರಲ್ಲಿ ಜಾಗೃತಿ ಮೂಡಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.