ಗುರುಮಠಕಲ್ : ಲಂಚ ಸ್ವೀಕರಿಸುತ್ತಿದ್ದ ವೇಳೆ ತಹಶೀಲ್ದಾರ್ ಸಂಗಮೇಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ತಹಶೀಲ್ದಾರ್ ಸಂಗಮೇಶ್ ಅವರು ಜಮೀನಿನ ಮಿಟಿಗೇಷನ್ ಮಾಡಿ ಕೊಡಲು ವ್ಯಕ್ತಿಯೊಬ್ಬರಿಗೆ 10 ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಆ ವ್ಯಕ್ತಿಯಿಂದ ಕಚೇರಿಯಲ್ಲಿ ಮುಂಗಡ ₹5 ಸಾವಿರ ಲಂಚ ಪಡೆಯುತ್ತಿದ್ದರು.
ಓದಿ: ಕೋವಿಡ್ 2ನೇ ಅಲೆ ಎದುರಿಸಲು ಬಿಬಿಎಂಪಿ ತಯಾರಿ : ನಿತ್ಯ ಟೆಸ್ಟಿಂಗ್ 30 ಸಾವಿರಕ್ಕೆ ಏರಿಕೆ
ಈ ವೇಳೆ ಎಸಿಬಿ ಎಸ್ಪಿ ಮಹೇಶ್ ಮತ್ತು ಅವರ ತಂಡ ದಾಳಿ ನಡೆಸಿತ್ತು. ತಹಶೀಲ್ದಾರ್ ಸಂಗಮೇಶ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.