ಯಾದಗಿರಿ: ಮಂಗಳೂರಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣದ ಬೆನ್ನಲ್ಲೇ ಯಾದಗಿರಿಯಲ್ಲಿ ಪ್ರತ್ಯೇಕವಾಗಿ ಎರಡು ಕಡೆ ಅನುಮಾನಾಸ್ಪದ ಬ್ಯಾಗ್ಗಳು ಪತ್ತೆಯಾಗಿ ಸಾರ್ವಜನಿಕರು ಆತಂಕಗೊಂಡಿದ್ದರು.
ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಅಜೀಜ್ ಕಾಲೋನಿಯಲ್ಲಿ ಪ್ರತ್ಯೇಕವಾಗಿ ಎರಡು ಬ್ಯಾಗ್ಗಳು ಪತ್ತೆಯಾಗಿದ್ದು, ಜನರಲ್ಲಿ ಭಯ ಮೂಡಿಸಿತ್ತು. ಬೆಳಗ್ಗೆ 7ಗಂಟೆಗೆ ಬಸ್ ನಿಲ್ದಾಣದಲ್ಲಿ ಅಪರಿಚಿತ ಬ್ಯಾಗ್ ಕಂಡು ಬಂದಿತ್ತು. ಮಾಹಿತಿ ತಿಳಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬ್ಯಾಗ್ ಪರಿಶೀಲಿಸಿದರು.
ಬ್ಯಾಗ್ಗಳಲ್ಲಿ ಬಟ್ಟೆ, ಹಣ ಮತ್ತು ಇತರ ಶಾಲಾ ಪಠ್ಯ ವಸ್ತುಗಳು, ವಿದ್ಯಾರ್ಥಿ ಐಡಿ ಕಾರ್ಡ್ ಇರುವುದು ಪತ್ತೆಯಾಗಿದೆ. ಬಳಿಕ ಸಾರ್ವಜನಿಕರು ನಿರಾಳರಾದರು. ಜನ ಆತಂಕಗೊಳ್ಳದೆ ಶಂಕಿತ ವ್ಯಕ್ತಿ, ವಸ್ತುಗಳು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.