ETV Bharat / state

ಸುರಪುರ: ಉದ್ಘಾಟನಾ ಭಾಗ್ಯವಿಲ್ಲದೆ ಪಾಳು ಬಿದ್ದ ಸಮುದಾಯ ಭವನ

ಇಲ್ಲಿನ ಕುಂಬಾರ ಓಣಿಯಲ್ಲಿ ಸಮುದಾಯದ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗುವಂತೆ ನಿರ್ಮಿಸಲಾದ ಸಮದಾಯ ಭವನ ಸದ್ಯ ಉದ್ಘಾಟನಾ ಭ್ಯಾಗ್ಯ ಕಾಣದೇ ಹಾಳು ಕೊಂಪೆಯಾಗಿದೆ. ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನ ಇನ್ನಾದರೂ ಸಾರ್ವಜನಿಕರ ಉಪಯೋಗಕ್ಕೆ ಸಿಗುವಂತಾಗಲಿ ಎಂಬುದು ಜನರ ಆಶಯವಾಗಿದೆ.

Surapura: A community hall Goes ruined without inauguration
ಸುರಪುರ: ಉದ್ಘಾಟನಾ ಭಾಗ್ಯವಿಲ್ಲದೆ ಪಾಳು ಬಿದ್ದ ಸಮುದಾಯ ಭವನ
author img

By

Published : Jun 15, 2020, 6:34 PM IST

Updated : Jun 15, 2020, 6:51 PM IST

ಸುರಪುರ( ಯಾದಗಿರಿ): ನಗರದ ರಂಗಂಪೇಟೆಯ ಕುಂಬಾರ ಓಣಿಯಲ್ಲಿ ಸಮುದಾಯ ಭವನ ನಿರ್ಮಿಸಲಾಗಿದ್ದು ಅನೇಕ ವರ್ಷಗಳಿಂದ ಉದ್ಘಾಟನೆಗೊಳಿಸದೆ ನಿರ್ಲಕ್ಷ್ಯ ತೋರಲಾಗಿದೆ.

ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಇದ್ದ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಮಾರು 15 ಲಕ್ಷ ರೂ. ಹಣದಲ್ಲಿ ಕುಂಬಾರ ಓಣಿಯಲ್ಲಿ ಸಮುದಾಯ ಭವನ ನಿರ್ಮಿಸಲಾಗಿದ್ದು, ಇದುವರೆಗೂ ಕೂಡ ಉದ್ಘಾಟನೆಗೊಳ್ಳದೆ ಹಾಗೆಯೇ ಉಳಿದಿವೆ.

ಸುರಪುರ: ಉದ್ಘಾಟನಾ ಭಾಗ್ಯವಿಲ್ಲದೆ ಪಾಳು ಬಿದ್ದ ಸಮುದಾಯ ಭವನ

ಕಾಮಗಾರಿಗಾಗಿ ವ್ಯಯಿಸಲಾದ 15 ಲಕ್ಷ ರೂ. ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಜನರ ಉಪಯೋಗಕ್ಕಾಗಿ ನಿರ್ಮಿಸಿದ ಸಮುದಾಯ ಭವನವನ್ನು ಉದ್ಘಾಟನೆಗೊಳಿಸದೆ ನಿರ್ಲಕ್ಷ್ಯ ತೋರಿರುವ ಜಿಲ್ಲಾಡಳಿತದ ವಿರುದ್ಧ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನಾಲ್ಕು ವರ್ಷದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಸಮುದಾಯ ಭವನವನ್ನು ಉದ್ಘಾಟನೆಗೊಳಿಸುವ ಮೂಲಕ ಕುಂಬಾರ ಸಮುದಾಯದ ಜನತೆ ಕಾರ್ಯಕ್ರಮಗಳನ್ನು ನಡೆಸಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ತಾಲೂಕು ಕುಂಬಾರ ಸಂಘದ ವಕ್ತಾರ ನಿಂಗಣ್ಣ ವಡಗೇರಿ ಮನವಿ ಮಾಡಿದ್ದಾರೆ.

Last Updated : Jun 15, 2020, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.