ಸುರಪುರ: ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದಲ್ಲಿರುವ ಶ್ರೀ ರಾಮಲಿಂಗೇಶ್ವರ ಆಶ್ರಮದಲ್ಲಿ ಶ್ರೀ ಮರಿ ಹುಚ್ಚೇಶ್ವರ ಮಹಾಸ್ವಾಮಿಯವರ ಮೌನಾನುಷ್ಠಾನ ಮಂಗಲ ಕಾರ್ಯಕ್ರಮ ಜರುಗಿತು.
ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಪ್ರತಿವರ್ಷವೂ ಮೌನಾನುಷ್ಠಾನ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವ ಶ್ರೀ ಮರಿ ಹುಚ್ಚೇಶ್ವರ ಮಹಾಸ್ವಾಮಿಯವರು ಕಳೆದ 25 ದಿನಗಳಿಂದ ನಿರಂತರವಾಗಿ ಮೌನ ಅನುಷ್ಠಾನ ಮಾಡಿಕೊಂಡು ಬರುತ್ತಿದ್ದು ಇಂದು ಅನುಷ್ಠಾನ ಮಂಗಲಗೊಳಿಸಿದರು.
ಈ ಸಂದರ್ಭದಲ್ಲಿ ಮರಿ ಹುಚ್ಚೇಶ್ವರ ಮಹಾಸ್ವಾಮಿಯವರು ಆಶೀರ್ವಚನ ನೀಡಿ ಹಿಂದಿನಿಂದಲೂ ಕೂಡ ರಾಮಲಿಂಗೇಶ್ವರ ಶ್ರೀಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಚರಣೆಗ ಮಾಡಿಕೊಂಡು ಬರುತ್ತಿದ್ದು, ಅದರಂತೆ ಈ ವರ್ಷವೂ ಕೂಡ ಮೌನ ಅನುಷ್ಠಾನ ಹಮ್ಮಿಕೊಂಡು ಲೋಕ ಕಂಟಕವಾಗಿರುವ ಕೊರೊನಾ ನಿರ್ಮೂಲನೆಯಾಗಲಿ ಹಾಗೂ ದೇಶಕ್ಕೆ ಉತ್ತಮ ಮಳೆಯಾಗಿ ಸಮೃದ್ಧಿಯಾಗಿ ಜನತೆಗೆ ಸುಖ ಸಂತೋಷ ದೊರೆಯಲೆಂದು ಬೇಡಿಕೊಳ್ಳಲಾಯಿತು ಎಂದರು.
ಇದೇ ಸಂದರ್ಭದಲ್ಲಿ ಮೌನ ಅನುಷ್ಠಾನ ಮುಗಿಸಿದ ಮರಿ ಹುಚ್ಚೇಶ್ವರ ಮಹಾಸ್ವಾಮಿಯವರಿಗೆ ಭಕ್ತರು ಹೂಮಳೆಗೈದು ಭಕ್ತಿ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಗುಳಬಾಳ, ಮಾಳೂರ, ಹುಣಸಗಿ, ಬಂಡೆಪ್ಪನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.