ETV Bharat / state

ಕೊರೊನಾ ನಿರ್ಮೂಲನೆಗಾಗಿ ದೇವರಗೋನಾಲ ವಿಶೇಷ ಪೂಜೆ.. - surapur

ಅನಾದಿ ಕಾಲದಿಂದಲೂ ಬಂದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಜನರು, ಬೆಳಗ್ಗೆ 6 ಗಂಟೆಗೆ ಬಾಲಕರಿಂದ ಊರಿನ ದೇವರಿಗೆ ಆದಿಲಿಂಗೇಶ್ವರ ಹೈಯಾಳಲಿಂಗೇಶ್ವರ, ಮೌನೇಶ್ವರ, ಮಾರುತೇಶ್ವರ ಮತ್ತು ಕೆಂಚಮ್ಮ ದುರ್ಗಮ್ಮ, ಪಾಲಕಮ್ಮ ಗ್ರಾಮ ದೇವತೆಯ ಪೂಜೆ ಹಾಗೂ ಗಂಗಾ ಪೂಜೆ ನೆರವೇರಿಸಿದರು.

surapur
ಕೊರೊನಾ ನಿರ್ಮೂಲನೆಗಾಗಿ ದೇವರಗೋನಾಲ ವಿಶೇಷ ಪೂಜೆ
author img

By

Published : Mar 31, 2020, 5:18 PM IST

ಸುರಪುರ: ಕೊರೊನಾ ನಿರ್ಮೂಲನೆಗಾಗಿ ದೇವರಗೋನಾಲ ಗ್ರಾಮದ ಮಕ್ಕಳು ಹಾಗೂ ಹಿರಿಯರು ದೇವರಿಗೆ ನೀರು ಸುರಿದು ಪ್ರಾರ್ಥಿಸಿ ಹರಕೆ ಸಲ್ಲಿಕೆ ಮಾಡಿದ್ದಾರೆ.

ಕೊರೊನಾ ನಿರ್ಮೂಲನೆಗಾಗಿ ದೇವರಗೋನಾಲ ವಿಶೇಷ ಪೂಜೆ..

ಗ್ರಾಮದ ಮುಖಂಡ ವೆಂಕಟೇಶ ಬೇಟೆಗಾರ ಮಾತನಾಡಿ, ಯಾವುದೇ ಕೊರೊನಾ ರೋಗ ನಮ್ಮ ಗ್ರಾಮಕ್ಕೆ, ನಮ್ಮ ನಾಡಿಗೆ, ನಮ್ಮ ದೇಶಕ್ಕೆ ಬರಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಅನಾದಿ ಕಾಲದಿಂದಲೂ ಬಂದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಜನರು, ಬೆಳಗ್ಗೆ 6 ಗಂಟೆಗೆ ಬಾಲಕರಿಂದ ಊರಿನ ದೇವರಿಗೆ ಆದಿಲಿಂಗೇಶ್ವರ ಹೈಯಾಳಲಿಂಗೇಶ್ವರ, ಮೌನೇಶ್ವರ, ಮಾರುತೇಶ್ವರ ಮತ್ತು ಕೆಂಚಮ್ಮ ದುರ್ಗಮ್ಮ, ಪಾಲಕಮ್ಮ ಗ್ರಾಮ ದೇವತೆಯ ಪೂಜೆ ಹಾಗೂ ಗಂಗಾ ಪೂಜೆ ನೆರವೇರಿಸಿದರು.

ನಂತರ ಎಲ್ಲಾ ಮನೆಯಿಂದ ತಯಾರಿಸಿ ತಂದಿದ್ದ ಸಿಹಿ ಪದಾರ್ಥವನ್ನು ದೇವರಿಗೆ ನೈವೇದ್ಯ ಮಾಡಿ ಕಾಯಿ ಕರ್ಪೂರದ ಹರಕೆ ತೀರಿಸುವುದಾಗಿ ತಿಳಿಸಿದರು‌. ಆದರೆ, ದೇವರಗೋನಾಲ ಗ್ರಾಮದ ಜನರ ಪ್ರಾರ್ಥನೆಯಂತೆ ಕೊರೊನಾ ನಿರ್ಮೂಲನೆಯಾಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ, ಎಲ್ಲರೂ ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ತಪ್ಪು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.