ಸುರಪುರ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟಿರುವ ಘಟನೆ ತಾಲೂಕಿನ ಮಾಚಗುಂಡಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್‌ಗೆ ಆಹುತಿಯಾದ ಮನೆ ಮಾಚಗುಂಡಾಳ ಗ್ರಾಮದ ಮಾನಪ್ಪ ಹೆಬ್ಬಾಳ ಎಂಬುವವರು ಚಿಗರಿಹಳ್ಳಿ ಕ್ರಾಸ್ ಬಳಿಯ ಜಮೀನಿನಲ್ಲಿ ತಗಡಿನ ಗುಡಿಸಲು ಹಾಕಿಕೊಂಡಿದ್ದರು. ಮಧ್ಯಾಹ್ನ ಹೊಲದಲ್ಲಿ ಕೆಲಸ ಮಾಡಲು ಹೋಗಿರುವಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿದೆ. ಇದರಿಂದ ಮನೆಯಲ್ಲಿದ್ದ ಅಕ್ಕಿ, ಜೋಳ, ಸಜ್ಜೆ, ಜಮೀನಿನ ಕಾಗದ ಪತ್ರಗಳು, ಆಧಾರ ಕಾರ್ಡ್, ಪಡಿತರ ಚೀಟಿ ಸೇರಿದಂತೆ 20 ಗ್ರಾಂ. ಚಿನ್ನ ಹಾಗೂ 50,000 ರೂ. ನಗದು ಬೆಂಕಿಗೆ ಆಹುತಿ ಆಗಿವೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಸುರಪುರ ಪೊಲೀಸರು ಮತ್ತು ಗ್ರಾಮ ಲೆಕ್ಕಿಗ ಪ್ರದೀಪ್ ಅವರು ಭೇಟಿ ನೀಡಿ ಪರಿಶೀಲಿಸಿದರು. 3.50 ಲಕ್ಷ ರೂ.ಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ನೆರವು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಭೇಟಿ ನೀಡಿ, ಸಂತ್ರಸ್ತ ಕುಟುಂಬಸ್ಥರಿಗೆ 10,000 ರೂ. ಧನ ಸಹಾಯ ಮಾಡಿದರು. ಸರ್ಕಾರದಿಂದ ಮನೆ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.