ಯಾದಗಿರಿ: ಕುಡಿದ ಅಮಲಿನಲ್ಲಿ ವ್ಯಕ್ತಿಗಳಬ್ಬರ ನಡುವೆ ಆರಂಭವಾದ ಜಗಳ ಸಾವಿನೊಂದಿಗೆ ಅಂತ್ಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಗಂಗಾ ನಗರ ಬಡವಾಣೆಯ ನಿವಾಸಿ ನರಸಪ್ಪ ಸಾವಿಗೀಡಾದ ವ್ಯಕ್ತಿ. ಜಮೀನಿನಲ್ಲಿ ಹತ್ತಿ ಬಿಡಿಸುವ ಕೂಲಿ ಕೆಲಸಗಾರರ ವಿಚಾರವಾಗಿ ನರಸಪ್ಪ ಮತ್ತ ಸಾಬಣ್ಣ ಎಂಬುವವರು ನಡುವೆ ಜಗಳ ಉಂಟಾಗಿದೆ. ಇಬ್ಬರೂ ಕಂಠಪೂರ್ತಿ ಕುಡಿದು ಕಿತ್ತಾಡುತ್ತಿದ್ದಾಗ ಪರಸ್ಪರ ಇಬ್ಬರೂ ನೂಕಾಡಿಕೊಂಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ನರಸಪ್ಪ ಕೆಳಕ್ಕೆ ಬಿದ್ದು ತಲೆಗೆ ಪೆಟ್ಟಾದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ಸಾಬಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.