ಗುರುಮಠಕಲ್: ಯಾನಾಗುಂದಿ ಮಾಣಿಕ್ಯಗಿರಿಯ ಅಹಿಂಸಾ ಯೋಗೇಶ್ವರಿ ವೀರಧರ್ಮಜ ಆಶ್ರಮದಲ್ಲಿ ಮಾ. 26ರಂದು ಮಾತೆ ಮಾಣಿಕೇಶ್ವರಿ ಅಮ್ಮನವರ ಪ್ರಥಮ ಪುಣ್ಯಾರಾಧನೆ ಜರುಗಲಿದ್ದು, ಎಲ್ಲಾ ಭಕ್ತರು ಭಾಗವಹಿಸುವಂತೆ ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಕರೆ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಣಿಕೇಶ್ವರಿ ಮಾತೆಯ ಭಕ್ತರ ಸಭೆ ನಡೆಸಿ ಮಾತನಾಡಿದ ಅವರು, ಮಾತೆ ಮಾಣಿಕೇಶ್ವರಿ ಅಮ್ಮನವರು ತಮ್ಮ ಇಡೀ ಜೀವನವನ್ನು ಅಹಿಂಸೆ, ಸೋದರತ್ವ ಪ್ರಸಾರ ಮಾಡುತ್ತಾ, ಅನ್ನಾಹಾರಗಳನ್ನು ತ್ಯಜಿಸಿದ ಯೋಗಿಯಾಗಿದ್ದಾರೆ. ಯಾನಾಗುಂದಿ ಬೆಟ್ಟದ ಮೇಲೆ ನೆಲೆ ನಿಂತ ಅಮ್ಮನವರು ಸುದೀರ್ಘವಾಗಿ ತಮ್ಮ ಭಕ್ತರಿಗೆ ಮಾರ್ಗದರ್ಶನ ಮಾಡಿ ಅವರ ಜೀವನವನ್ನು ಬೆಳಗಿದ್ದಾರೆ ಎಂದರು.
ಓದಿ: ಅಹಂ ಬೇಡ, ನಾನು ನಾನು ಅನ್ನೋದು ಬೇಡ.. ಸುದ್ದಿಗೋಷ್ಠಿ ವೇಳೆ ಜಗ್ಗೇಶ್ ಮಾತು!
ಜಾತಿ, ಮತಗಳಿಗೆ ಮೀರಿ ಅಮ್ಮನವರು ಎಲ್ಲರನ್ನೂ ಪ್ರೀತಿಯಿಂದ ಆಶೀರ್ವದಿಸಿದ್ದಾರೆ. ಅವರಿಗೆ ಜಾತಿಯಿಲ್ಲ, ಮತವಿಲ್ಲ. ಅಹಿಂಸೆಯೇ ಅವರ ಅವರ ಜಾತಿಯಾಗಿತ್ತು. ನಮ್ಮ ಭಾಗವನ್ನು ಪವಿತ್ರಗೊಳಿಸಿದ ಯೋಗಿ ಅವರು. ಆದ್ದರಿಂದ ಅವರ ಪ್ರಥಮ ಆರಾಧನೆಗೆ ಎಲ್ಲರೂ ಭಾಗವಹಿಸುವ ಮೂಲಕ ಪಾದಯಾತ್ರೆಯನ್ನು ಯಶಸ್ವಿಗೊಳಿಸಿ ಎಂದು ಕೋರಿದರು.