ETV Bharat / state

ಲಸಿಕೆಯಿಂದ ತಪ್ಪಿಸಿಕೊಳ್ಳಲು ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವೃದ್ಧ.. ವಿಡಿಯೋ - ಲಸಿಕೆ ಪಡೆಯುಲು ವೃದ್ಧ ಹಿಂದೇಟು

ಲಸಿಕೆ ಹಾಕಿಸಿಕೊಳ್ಳಲು ಗ್ರಾಮೀಣ ಪ್ರದೇಶದಲ್ಲಿ ಕೆಲ ಜನ ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಎಷ್ಟೇ ಡಂಗೂರ ಸಾರಿ ತಿಳುವಳಿಕೆ ಮೂಡಿಸಿದರೂ ಸಹ ಪ್ರಯೋಜನ ಮಾತ್ರ ವ್ಯರ್ಥವಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತಿದೆ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಘಟನೆ.

Old men hesitate to get vaccine at Yadgir
ಲಸಿಕೆಯಿಂದ ತಪ್ಪಿಸಿಕೊಳ್ಳಲು ಮೈ ಮೇಲೆ ದೇವರು ಬಂದಂತೆ ನಾಟಕವಾಡಿದ ವೃದ್ಧ
author img

By

Published : Oct 10, 2021, 7:02 PM IST

ಯಾದಗಿರಿ : ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪ್ರಯತ್ನ ನಡೆಸಿದ್ದರೆ, ಕೆಲವೆಡೆ ಜನರಿಂದ ಈ ಕೋವಿಡ್​ ಲಸಿಕಾ ಅಭಿಯಾನಕ್ಕೆ ಹಿನ್ನಡೆ ಆಗ್ತಿದೆ. ವ್ಯಾಕ್ಸಿನ್​ ಹಾಕಿಸಿಕೊಳ್ಳುವುದರಿಂದ ಪಾರಾಗಲು ವೃದ್ಧಯೋರ್ವರು ಮೈಮೇಲೆ ದೇವರು ಬಂದಿದೆ ಎಂದು ಹೇಳಿ ಆರೋಗ್ಯ ಸಿಬ್ಬಂದಿ ಎದುರು ವಿಚಿತ್ರವಾಗಿ ವರ್ತಿಸಿದ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಹುಲಕಲ್ ಗ್ರಾಮದಲ್ಲಿ ನಡೆದಿದೆ.

ಲಸಿಕೆಯಿಂದ ತಪ್ಪಿಸಿಕೊಳ್ಳಲು ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವೃದ್ಧ.

ಹುಲಕಲ್ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಲು ವ್ಯಕ್ತಿಯೊಬ್ಬರ ಬಳಿ ಹೋಗಿದ್ದರು. ಈ ವೇಳೆ ಆತ ತನ್ನ ಮೈಮೇಲೆ ದೇವರು ಬಂದಿದೆ. ದೇವರಿಗೆ ಲಸಿಕೆ ಹಾಕುವುದು ಸರಿಯಲ್ಲ ಎಂಬುದಾಗಿ ಕೂಗಾಡುತ್ತಾ ವಿಚಿತ್ರವಾಗಿ ವರ್ತಿಸಿದ್ದಾರೆ. ಇದರಿಂದ ಭಯಗೊಂಡು ಆರೋಗ್ಯ ಸಿಬ್ಬಂದಿ ಅಲ್ಲಿಂದ ವಾಪಸ್​ ಆಗಿದ್ದಾರೆ.

ಜಿಲ್ಲೆಯಲ್ಲಿ ಲಸಿಕೆಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಒಂದಲ್ಲ ಒಂದು ರೀತಿ ನಾಟಕ ಮಾಡುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಗ್ರಾಮೀಣ ಪ್ರದೇಶದಲ್ಲಿ ಕೆಲ ಜನ ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಎಷ್ಟೇ ಡಂಗೂರ ಸಾರಿ ತಿಳುವಳಿಕೆ ಮೂಡಿಸಿದರು ಪ್ರಯೋಜನ ಮಾತ್ರ ವ್ಯರ್ಥವಾಗುತ್ತಿದೆ.

ಇದನ್ನೂ ಓದಿ: ಊರಿಗೆ ಬರುತ್ತಿದ್ದ ಯೋಧ ಅಪಘಾತದಲ್ಲಿ ಸಾವು.. ಗರ್ಭಿಣಿ ಪತ್ನಿಗೆ ಆಘಾತ, ಆತ್ಮಹತ್ಯೆ ಯತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.