ETV Bharat / state

ದೇವರ ಮುಂದೆ ಹಚ್ಚಿದ್ದ ದೀಪದ ಕಿಡಿ ತಗುಲಿ ₹90 ಸಾವಿರ ನಗದು, ದಾಖಲೆಗಳು ಭಸ್ಮ.. - ಗುರುಮಠಕಲ್ ಲೇಟೆಸ್ಟ್​ ನ್ಯೂಸ್

ಅಲಮೇರದಲ್ಲಿದ್ದ ಸುಮಾರು ₹90 ಸಾವಿರ ನಗದು, ಶಾಲಾ ದಾಖಲೆಗಳು, 30 ಗ್ರಾಂ ಚಿನ್ನ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಇದರಿಂದ ಬಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ..

ದೇವರ ಮುಂದೆ ಹಚ್ಚಿದ್ದ ದೀಪದ ಕಿಡಿ ತಗುಲಿ 90 ಸಾವಿರ ಮೌಲ್ಯದ ನಗದು, ದಾಖಲೆಗಳು ಭಸ್ಮ
More than 90 thousand money and school documents burnt in Gurmitkal
author img

By

Published : Feb 12, 2021, 1:16 PM IST

ಗುರುಮಠಕಲ್ : ದೇವರ ಮುಂದೆ ಹಚ್ಚಿದ್ದ ದೀಪದ ಕಿಡಿ ಬಟ್ಟೆಗೆ ತಗುಲಿ ₹90 ಸಾವಿರಕ್ಕೂ ಅಧಿಕ ನಗದು, ಶಾಲಾ ದಾಖಲೆಗಳು ಸುಟ್ಟು ಭಸ್ಮವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ದೇವರ ಮುಂದೆ ಹಚ್ಚಿದ್ದ ದೀಪದ ಕಿಡಿ ತಗುಲಿ ₹90 ಸಾವಿರ ನಗದು, ದಾಖಲೆಗಳು ಭಸ್ಮ..

ಪಟ್ಟಣದ ಮಲ್ಲಯ್ಯಕಟ್ಟ ಓಣಿಯ ನಿವಾಸಿ ಯಲ್ಲಮ್ಮ ಬಚ್ಚಂ ಎಂಬುವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆ ಯಜಮಾನಿ ಯಲ್ಲಮ್ಮ ಬೆಳಗ್ಗೆ ದೇವರ ಮುಂದೆ ದೀಪ ಹಚ್ಚಿ ಹೊಲಕ್ಕೆ ತೆರಳಿದ್ದರು. ಈ ವೇಳೆ ಗಾಳಿಯಿಂದ ದೀಪದ ಕಿಡಿ ಪಕ್ಕದಲ್ಲಿದ್ದ ಬಟ್ಟೆಗೆ ತಗುಲಿ ಬಳಿಕ ಅಲಮೇರದಲ್ಲಿದ್ದ ಬಟ್ಟೆಗಳಿಗೂ ತಗುಲಿದೆ.

ಪರಿಣಾಮ ಅಲಮೇರದಲ್ಲಿದ್ದ ತೊಗರಿ ಮಾರಿ ತಂದಿದ್ದ ಸುಮಾರು ₹90 ಸಾವಿರ ನಗದು, ಶಾಲಾ ದಾಖಲೆಗಳು, 30 ಗ್ರಾಂ ಚಿನ್ನ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಇದರಿಂದ ಬಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಹಣಮಂತ ಬಂಕಲಿಗಿ, ಕಂದಾಯ ಇಲಾಖೆಯ ವಿಜಯ್​ ಕುಮಾರ್ ಪವಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.