ಯಾದಗಿರಿ: ಜಿಲ್ಲಾಡಳಿತದ ನಿಷೇಧದ ನಡುವೆಯೂ ಜಿಲ್ಲೆಯ ಸುಪ್ರಸಿದ್ಧ ದೇವಸ್ಥಾನದ ಶ್ರೀ ಮೈಲಾರಲಿಂಗೇಶ್ವರ ಪಲ್ಲಕ್ಕಿ ಮೇಲೆ ಎಸೆಯಲು ಭಕ್ತರು ತಂದಿದ್ದ 700ಕ್ಕೂ ಹೆಚ್ಚು ಕುರಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಪ್ರತಿವರ್ಷ ಸಂಕ್ರಮಣದ ಹಬ್ಬದಂದು ನಡೆಯುವ ಈ ಜಾತ್ರೆಯಲ್ಲಿ ಮೈಲಾರಲಿಂಗೇಶ್ವರ ದೇವರಿಗೆ ಗಂಗಾ ಸ್ನಾನ ಮಾಡಿಸಲು ಪಲ್ಲಕ್ಕಿ ಮೂಲಕ ಹೊನ್ನಕೆರೆಗೆ ತೆಗೆದುಕೊಂಡು ಹೋಗುವಾಗ ಹರಕೆ ಹೊತ್ತ ಭಕ್ತರು ಕುರಿಗಳನ್ನ ಎಸೆಯುವ ಪದ್ದತಿ ಇದೆ. ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಜಿಲ್ಲಾಡಳಿತ ಈ ಹಿಂದಿನಿಂದ ಈ ಪದ್ಧತಿಗೆ ನಿರ್ಬಂಧ ಹೇರುತ್ತಾ ಬಂದಿದೆ. ಭಕ್ತರು ಕುರಿಗಳನ್ನ ಎಸೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ 6 ಚೆಕ್ ಪೋಸ್ಟ್ ಅಳವಡಿಕೆ ಮಾಡುವ ಮೂಲಕ ಸರ್ಪಗಾವಲು ಹಾಕಿದೆ.
ಇಷ್ಟೆಲ್ಲದರ ನಡುವೆಯೂ ಭಕ್ತರು ದೇವರಿಗೆ ಅರ್ಪಿಸಲು ಕುರಿಗಳನ್ನ ತರುತ್ತಾರೆ. ಕಂದಾಯ, ಪಶುಸಂಗೋಪನೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು 700ಕ್ಕೂ ಹೆಚ್ಚು ಕುರಿಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ.