ಯಾದಗಿರಿ: ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ್ಗೆ ಹಂದಿಗಳ ಹಿಂಡು ಸ್ವಾಗತ ಕೋರಿವೆ.
ವಸತಿ ನಿಲಯದ ಒಳಪ್ರವೇಶ ಮಾಡುತ್ತಿದ್ದಂತೆ ಹಂದಿಗಳ ಹಿಂಡು ಕಂಡ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಕೆಂಡಾಮಂಡಲರಾದರು. ಇಂದು ಯಾದಗಿರಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವರು, ವಸತಿ ನಿಲಯದ ಅವ್ಯವಸ್ಥೆ ಕಂಡು ವಾರ್ಡನ್ ವಿರುದ್ಧ ಹರಿಹಾಯ್ದರು.
ವಸತಿ ನಿಲಯದಲ್ಲಿ ಹಂದಿಗಳು ಹಾಗೂ ಕಸ ಕಂಡು, ಅಲ್ಲಿದ್ದ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡರು. ವಸತಿ ನಿಲಯದ ಹಾಜರಾತಿ ಪರಿಶೀಲಿಸಿದ ಅವರು, ವಾರ್ಡನ್ ದೇವೇಂದ್ರಪ್ಪ ಮೇಲೆ ಗರಂ ಆದ್ರು.