ETV Bharat / state

ಅಧಿಕಾರಿಗಳಿಗೆ ಹಿಂದಿ ಭಾಷೆಯಲ್ಲಿ ಆದೇಶ ನೀಡಿದ ಸಚಿವ... ಭಾಷೆ ಬಾರದ ಅಧಿಕಾರಿಗಳು ಮಾಡಿದ್ದೇನು?

ಯಾದಗಿರಿ ನಗರ ಸ್ವಚ್ಛತೆ ಕುರಿತು ಅಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆದೇಶ ನೀಡಿದ ಸಚಿವ ಪ್ರಭು ಚವ್ಹಾಣ್. ಹೆಚ್ಚಿನ ಮಾತುಕತೆಯನ್ನು ಹಿಂದಿ ಭಾಷೆಯಲ್ಲಿ ಮಾಡಿದ್ದರಿಂದ ಹಿಂದಿ ಬಾರದ ಅಧಿಕಾರಿಗಳು ಎಲ್ಲದಕ್ಕೂ ತಲೆಯಾಡಿಸುತ್ತಿದ್ದರು.

minister prabhu chavan
ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಪ್ರಭು ಚವ್ಹಾಣ್
author img

By

Published : Jan 3, 2020, 7:00 PM IST

ಯಾದಗಿರಿ: ನಗರದ ಸ್ವಚ್ಛತೆ ಹಾಗೂ ಇತರೆ ವಿಷಯ ಕುರಿತಂತೆ ಅಧಿಕಾರಿಗಳ ಸಭೆಯಲ್ಲಿ ಹೆಚ್ಚಿನದಾಗಿ ಹಿಂದಿ ಭಾಷೆಯಲ್ಲಿಯೇ ಆದೇಶ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಚಿವ ಪ್ರಭು ಚವ್ಹಾಣ್. ಇದರಿಂದ ಹಿಂದಿ ತಿಳಿಯದ ಅಧಿಕಾರಿಗಳು ಕಕ್ಕಾಬಿಕ್ಕಿಯಾದ ಘಟನೆ ನಡೆಯಿತು.

ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಪ್ರಭು ಚವ್ಹಾಣ್

ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದ ಸಚಿವ ಪ್ರಭು ಚವ್ಹಾಣ್​, ಅಧಿಕಾರಿಗಳಿಗೆ ಈ ವೇಳೆ ಕೆಲವು ಸೂಚನೆ ನೀಡಿದರು.

ನಗರ ಸಂಪೂರ್ಣ ಕಸದ ತೊಟ್ಟೆಯಂತಾಗಿದೆ ಸ್ವಚ್ಛತೆ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ನಗರಸಭೆ ಅಧಿಕಾರಿಗೆ ಹೇಳಿದರು. ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಎಂ.ಕುರ್ಮಾರಾವ್, ಎಸ್​.ಪಿ ರಿಷಿಕೇಶ್ ಭಗವಾನ್ ಸೋನಾವಾಣೆ ಇದ್ದರು.

Intro:ಯಾದಗಿರಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಯಾದಗಿರಿ ಗೆ ಭೇಟಿ ನೀಡುವ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿಗಳ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು...

Body:ಇದೆ ಸಂದರ್ಭದಲ್ಲಿ ಸಂಪೂರ್ಣ ಕಸದ ತೊಟ್ಟೆಯಂತಾಗಿರುವ ಯಾದಗಿರಿ ನಗರದ ಸ್ವಚ್ಚತೆ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ನಗರಸಭೆ ಅಧಿಕಾರಿಗೆ ಸೂಚಿಸಿದರು. ಇನ್ನ ಕನ್ನಡ ಭಾಷೆಯಲ್ಲಿ ಸಭೆ ನಡೆಸಬೇಕಾದಂತಾ ಸಚಿವ ಪ್ರಭು ಚವ್ಹಾಣ್ ಕನ್ನಡ ಭಷೆಗಿಂತಲೂ ಹೆಚ್ಚು ಹಿಂದಿ ಭಾಷೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ತೆಗೆದುಕೊಂಡರು. ಸಭೆಯಲ್ಲಿ ಹಿಂದಿ ಭಾಷೆ ಅರ್ಥವಾಗದ ಅಧಿಕಾರಿಗಳು ಸಚಿವರ ಮಾತಿಗೆ ತಲೆ ಅಳೆಗಾಡಿಸುವಂತಾಯಿತು....

Conclusion:ಇನ್ನ ಸಭೆಯಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಎಮ್ ಕುರ್ಮಾರಾವ್, ಎಸ್ ಪಿ ರಿಷಿಕೇಶ್ ಭಗವಾನ್ ಸೋನಾವಾಣೆ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.