ETV Bharat / state

ಮೀನಾಸಪುರ ಗ್ರಾಮದ ದಲಿತರು ಸತ್ಮೇಲೂ ನೆಮ್ಮದಿ ಇಲ್ರೀ.. ಅಂತ್ಯಕ್ರಿಯೆ ಅಂದ್ರೇ ಯಮಲೋಕ ದರ್ಶನ!! - Gurumathakal News of Yadagiri District

ಹಳ್ಳಕ್ಕೆ ಸೇತುವೆ ನಿರ್ಮಿಸಿ ಹಾಗೂ ರುದ್ರಭೂಮಿ ಮಂಜೂರಾತಿ ಮಾಡಬೇಕೆಂದು ಅದೆಷ್ಟೋ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಪಂದಿಸಿಲ್ಲ. ಅಧಿಕಾರಿಗಳ ನಿಷ್ಕಾಳಜಿಯಿಂದ ಜನ ಪರದಾಡುವಂತಾಗಿದೆ..

Meenasapura villagers has to cross lake for funeral....
ಈ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೂ ಹಳ್ಳ ದಾಟಬೇಕು.... ಶತೃವಿಗೂ ಬೇಡ ಈ ದುಸ್ಥಿತಿ
author img

By

Published : Oct 3, 2020, 3:48 PM IST

ಗುರುಮಿಠಕಲ್​(ಯಾದಗಿರಿ) : ಗುರುಮಠಕಲ್ ತಾಲೂಕಿನ ಮೀನಾಸಪುರ ಗ್ರಾಮದಲ್ಲಿ ದಲಿತರು ಮೃತಪಟ್ಟರೆ ಅಂತ್ಯಕ್ರಿಯೆ ಮಾಡಲು ಯೋಚಿಸುವ ಪರಿಸ್ಥಿತಿ ಇದೆ. ಯಾಕೆಂದರೆ, ರುದ್ರಭೂಮಿ ಹಾಗೂ ಗ್ರಾಮದ ಮಧ್ಯೆ ದೊಡ್ಡ ಹಳ್ಳವಿದೆ. ಯಾರಾದ್ರೂ ಸತ್ತರೇ ಹಳ್ಳದಾಟಿ ಸ್ಮಶಾನಕ್ಕೆ ಶವ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಬೇಕು.

ಈ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೂ ಹಳ್ಳ ದಾಟಬೇಕು..

ಮಳೆಗಾಲದಲ್ಲಂತೂ ಇವರ ಸ್ಥಿತಿ ಅಯೋಮಯ. ಸದ್ಯ ಮೀನಾಸಪುರ ಗ್ರಾಮದ ಕೆರೆ ಭರ್ತಿಯಾಗಿದೆ. ಹಳ್ಳವು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಮೀನಾಸಪುರದ ಗ್ರಾಮಸ್ಥರು ಮೃತದೇಹವನ್ನು ಹೀಗೆ ಹರಿಯುತ್ತಿರುವ ಹಳ್ಳದ ಮಧ್ಯೆ ಹೊತ್ತೊಯ್ಯುವ ದೃಶ್ಯ ನೋಡಿದ್ರೆ ಎಂಥವರ ಮನಸ್ಸೂ ಒಮ್ಮೆ ಕಲಕದೇ ಇರಲ್ಲ. ಜೀವವಿಲ್ಲದ ದೇಹದ ಅಂತ್ಯಕ್ರಿಯೆಗೆ ಜೀವದ ಹಂಗು ತೊರೆದು ಹೋಗುವ ಸ್ಥಿತಿ ಇದೆ.

ಹಳ್ಳಕ್ಕೆ ಸೇತುವೆ ನಿರ್ಮಿಸಿ ಹಾಗೂ ರುದ್ರಭೂಮಿ ಮಂಜೂರಾತಿ ಮಾಡಬೇಕೆಂದು ಅದೆಷ್ಟೋ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಪಂದಿಸಿಲ್ಲ. ಅಧಿಕಾರಿಗಳ ನಿಷ್ಕಾಳಜಿಯಿಂದ ಜನ ಪರದಾಡುವಂತಾಗಿದೆ. ಅಷ್ಟೇ ಅಲ್ಲ, ನಿತ್ಯ ಕೃಷಿ ಕೆಲಸ ಮಾಡಲು ಜಮೀನಿಗೆ ತುಂಬಿದ ಹಳ್ಳ ದಾಟಿ ಹೋಗುವುದು ಕಷ್ಟ.

ಈ ಬಗ್ಗೆ ಗುರುಮಠಕಲ್ ತಹಶೀಲ್ದಾರ್ ಸಂಗಮೇಶ್ ಜಿಡಿಗೆ ಮಾತನಾಡಿ, ಮೀನಾಸಪೂರ ಗ್ರಾಮದ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಮೀನಾಸಪುರ ಗ್ರಾಮದಲ್ಲಿ ಸರ್ಕಾರಿ ಜಮೀನು ಗುರುತಿಸಲಾಗಿದೆ. ಸ್ಮಶಾನ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತೇವೆ ಅಂತಾ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.