ETV Bharat / state

ಯಾದಗಿರಿ: ಅಕ್ರಮ ಗಾಂಜಾ ಬೆಳೆ ಜಪ್ತಿ: ಮೂವರು ಆರೋಪಿಗಳ ಬಂಧನ.. - ಈಟಿವಿ ಭಾರತ ಕನ್ನಡ

ಅಕ್ರಮವಾಗಿ ತೋಟದಲ್ಲಿ ಗಾಂಜಾ ಬೆಳೆ ಬೆಳೆದಿದ್ದ ಮೂವರು ಆರೋಪಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

YDR :
ಗಾಂಜಾ ಬೆಳೆದ ಆರೋಪಿಗಳ ಬಂಧನ
author img

By

Published : Nov 24, 2022, 9:38 PM IST

ಯಾದಗಿರಿ: ಶಹಾಪುರ ಅಬಕಾರಿ ವಲಯದ ವ್ಯಾಪ್ತಿಯಲ್ಲಿ ಬರುವ ವಡಿಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಉಳ್ಳೆಸೂಗೂರು ಗ್ರಾಮದ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಬೆಳೆ ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

ಉಳ್ಳೆಸೂಗೂರು ಗ್ರಾಮದ ಜಮೀನೊಂದರಲ್ಲಿ ಹತ್ತಿ ಮತ್ತು ಮೆಣಸಿನ ಗಿಡದ ಮಧ್ಯದಲ್ಲಿ ಅಕ್ರಮವಾಗಿ ಬೆಳೆದಿದ್ದ 13 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. 1 ಕೆಜಿ ಒಣ ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿಗಳಾದ ನಾಗರೆಡ್ಡಿ ಕಲಾಲ್, ಭೀಮಪ್ಪ ಕೈಕಟ್ ಹಾಗೂ ಸುರಪುರ ತಾಲೂಕಿನ ಏವೂರ ಗ್ರಾಮದ ಹಣಮಂತ್ರಾಯ ಟಣಿಕೇದಾರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 2.1 ಕೆಜಿ ಒಣ ಗಾಂಜಾ ವಶಪಡಿಸಿಕೊಂಡು, ಆರೋಪಿಗಳನ್ನು ಯಾದಗಿರಿ ಜಿಲ್ಲಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಳೆಗಳ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಮತ್ತು ಒಣ ಗಾಂಜಾ ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಅಬಕಾರಿ ಇಲಾಖೆಯ ಶಹಾಪುರ ಉಪ ವಿಭಾಗದ ಉಪ ಅಧೀಕ್ಷಕ ಮಲ್ಲಿಕಾರ್ಜುನ್‌ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರಾದ ವಿಜಯಕುಮಾರ್ ಹಿರೇಮಠ, ಧನರಾಜ್ ಹಳ್ಳಿಖೇಡಾ, ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ಕೇದಾರನಾಥ್ ಹಾಗೂ ಅಬಕಾರಿ ಉಪ ನಿರೀಕ್ಷಕ ಸುರೇಶ್ ಮೆಲ್ಕರ್, ಪೂಜಾ ಖರ್ಗೆ, ಬಸವರಾಜ್ ರಾಜಣ್ಣನವರ್ ಸಿಬ್ಬಂದಿಗಳಾದ ಮಡಿವಾಳ, ಗುರುನಾಥ, ಸುಭಾನಿ, ನಾಗರಾಜ, ಗೋಪಾಲ್, ಜೆಟ್ಟಪ್ಪ, ಅನಿಲ್ ಕುಮಾರ್, ವೆಂಕಟೇಶ್, ಮೊಹ್ಮದ್ ರಫಿ, ಪ್ರವೀಣ್ ರಜಪುತ್, ದೊಂಡಿಬಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ : ಹೊಲದಲ್ಲಿ ಬೆಳೆದಿದ್ದ ಗಾಂಜಾ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.