ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಕ್ರಾಸ್ ಬಳಿ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದೇವಾಪುರದ ನಿವಾಸಿ ಅಮರೇಶ ಪೈದೊಡ್ಡಿ (38) ಮೃತ ದುರ್ದೈವಿ.
ಜಮೀನಿಗೆ ಕೆಲಸದ ನಿಮಿತ್ತ ಹೋಗುವಾಗ ಸಿಂಧನೂರಿನಿಂದ ಮಹಾರಾಷ್ಟ್ರಕ್ಕೆ ಹೊರಟ್ಟಿದ್ದ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ದಾರಿಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಶಾಸಕ ರಾಜೂಗೌಡ ಅವರು ಹೋಗುವಾಗ ಅಪಘಾತವಾಗಿರುವುದನ್ನು ಕಾಣುತ್ತಿದ್ದಂತೆ ವಾಹನ ನಿಲ್ಲಿಸಿ ವಿಚಾರಿಸಿದ್ದಾರೆ. ಸ್ಥಳೀಯರು ಲಾರಿಯನ್ನು ಬೆಂಬತ್ತಿ ಚಾಲಕನ್ನು ಹಿಡಿದಿದ್ದಾರೆ. ಬಳಿಕ ಆ್ಯಂಬುಲೆನ್ಸ್ಗೆ ಕರೆ ಮಾಡಿ ಶಾಸಕರು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಇದನ್ನೂ ಓದಿ: ನವದಂಪತಿ ಪ್ರವಾಸದ ವೇಳೆ ದುರಂತ.. ಸ್ಟ್ರೆಚರ್ನಲ್ಲಿದ್ದೇ ಗಂಡನ ಮುಖ ಸವರಿದ ಪತ್ನಿ.. ಗ್ರಾಮಸ್ಥರ ಕಂಬನಿ!
ಸ್ಥಳಕ್ಕಾಗಮಿಸಿದ ಮೃತರ ಸಂಬಂಧಿಕರಿಗೆ ಶಾಸಕರು ಸಾಂತ್ವನ ಹೇಳಿದರು. ಘಟನಾ ಸ್ಥಳಕ್ಕೆ ಸುರಪುರ ವಿಭಾಗದ ಡಿವೈಎಸ್ಪಿ ಡಾ. ಟಿ ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದರು. ಸುರಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.