ETV Bharat / state

ಗುರುಮಠಕಲ್​: ಚಂಡರಕಿ ಗ್ರಾಮದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ - ಚಂಡರಕಿ ಗ್ರಾಮದಲ್ಲಿ ಚಿರತೆ ಪತ್ತೆ

ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಹೀಗಾಗಿ ರೈತರು, ಸಾರ್ವಜನಿಕರು, ಜಾನುವಾರುಗಳನ್ನು ಕಾಯುವವರು ಎಚ್ಚರಿಕೆಯಿಂದ ಇರುವಂತೆ ಡಂಗೂರ ಸಾರಲಾಗಿದೆ.

Leopard spotted on the outskirts of Chandaraki village
ಚಂಡರಕಿ ಗ್ರಾಮದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ
author img

By

Published : Sep 19, 2022, 1:13 PM IST

ಗುರುಮಠಕಲ್ (ಯಾದಗಿರಿ): ತಾಲೂಕಿನ ಚಂಡರಕಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಜಿಲ್ಲಾ ಅರಣ್ಯಾಧಿಕಾರಿಗಳು ಚಿರತೆಯ ಸಂಚಾರವನ್ನು ಖಚಿತಪಡಿಸಿದ್ದಾರೆ. ಗುರುಮಠಕಲ್ ಪಿಐ ದೌಲತ್ ಎನ್ ಕೆ ಅವರಿಗೆ ಶನಿವಾರದಂದು ಚಿರತೆ ಕಂಡಿದ್ದು, ಈ ಬಗ್ಗೆ ಅವರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಚಿರತೆಯ ಹೆಜ್ಜೆಗಳ ಜಾಡನ್ನು ಆಧರಿಸಿ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಚಂಡರಕಿ, ಮಡೇಪಲ್ಲಿ, ಕೇಶ್ವರ ಗ್ರಾಮಗಳ ಜಮೀನಿನ ರೈತರು, ಸಾರ್ವಜನಿಕರು ಸೇರಿದಂತೆ ಸೇಡಂ ತಾಲೂಕಿನ ಗ್ರಾಮಸ್ಥರು, ಜಾನುವಾರುಗಳನ್ನು ಕಾಯುವವರು ಎಚ್ಚರಿಕೆಯಿಂದ ಇರುವಂತೆ ಡಂಗೂರ ಸಾರಲಾಗಿದೆ. ಮಿನಾಸಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಜರಾಪೂರ ಸೇರಿದಂತೆ ದಟ್ಟ ಅರಣ್ಯಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಡಂಗುರ ಸಾರಿ ಜಾಗೃತಿ ಮೂಡಿಸಲಾಗಿದೆ.

ಚಂಡರಕಿ ಗ್ರಾಮದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ

ಸೋಮವಾರದಂದು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆ ಪಂಜರ ಅಳವಡಿಸಿ, ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸಂಡೂರು ಎನ್​ಎಂಡಿಸಿ ಬಳಿ ಚಿರತೆ ಪ್ರತ್ಯಕ್ಷ.. ವಿಡಿಯೋ

ಗುರುಮಠಕಲ್ ತಾಲೂಕಿನ ಚಂಡರಕಿ ಮತ್ತು ಮಿನಾಸಫುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ಸಂಚಾರ ಕಂಡುಬಂದಿದೆ. ಸಾರ್ವಜನಿಕರು, ರೈತರು ಮತ್ತು ಜಾನುವಾರುಗಳ ಮಾಲೀಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸ್​ ಪ್ರಕರಣೆಯಲ್ಲಿ ಸಹ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.