ಸುರಪುರ: ತಾಲ್ಲೂಕಿನ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಂಭಾವಿ ಪಟ್ಟಣದ ಕುಂಚಿ ಕೊರವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ಸಣ್ಣ ಸಣ್ಣ ಗುಡಿಸಲುಗಳನ್ನು ಹಾಕಿಕೊಂಡು ಅನೇಕ ವರ್ಷಗಳಿಂದ ಜೀವನ ನಡೆಸುತ್ತಿದ್ದು, ಈಗ ಮಳೆಗಾಲವಾದ್ದರಿಂದ ಎಲ್ಲಾ ಗುಡಿಸಲುಗಳಲ್ಲಿ ನೀರು ನುಗ್ಗಿರುವ ಪರಿಣಾಮ ಹಗಲಿರುಳು ನಿದ್ದೆ ಇಲ್ಲದೆ, ಅಗತ್ಯ ವಸ್ತುಗಳಿಲ್ಲದೆ ಇವರು ತೊಂದರೆ ಪಡುತ್ತಿದ್ದಾರೆ.
ಸರ್ಕಾರ ಕೊಳಗೇರಿ ನಿವಾಸಿಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಹಕ್ಕು ಪತ್ರ ನೀಡಿದೆ. ಆದರೆ, ಇದನ್ನು ಕೊಡುವಲ್ಲಿ ಪುರಸಭೆ ನಿರ್ಲಕ್ಷ್ಯ ತೋರಿರುವುದರಿಂದ ಕುಂಚಿ ಕೊರವರು ಹಗಲಿರುಳು ವೇದನೆಯನ್ನುನುಭವಿಸುತ್ತಿದ್ದಾರೆ.