ETV Bharat / state

ಕುಮಾರಸ್ವಾಮಿ ಪಂಚತಾರಾ ಹೋಟೆಲ್​ಗಳಲ್ಲಿಯೇ ಕಾಲ ಕಳೆದಿದ್ದಾರೆ: ಬಿಎಸ್​ವೈ

author img

By

Published : Jun 11, 2019, 10:47 PM IST

ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿ ಪಂಚತಾರಾ ಹೋಟೆಲ್​ಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಕಾಲ ಕಳೆದಿದ್ದಾರೆ ಎಂದು ಆರೋಪಿದರು.

ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ

ಯಾದಗಿರಿ: ಜಿಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದು, ಜಾನುವಾರಗಳು ಕಸಾಯಿಖಾನೆಗೆ ತೆರಳುತ್ತಿವೆ. ಇದನ್ನು ನೋಡಿಯೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

ಬರ ಪರಿಶೀಲನೆಗೆಂದು ಜಿಲ್ಲೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಗೋಶಾಲೆಗಳನ್ನು ತೆರೆಯದಿರುವ ಹಿನ್ನೆಲೆ ಜಾನುವಾರುಗಳು ಅಸುನೀಗುತ್ತಿವೆ. ಅಕ್ರಮವಾಗಿ ಜಾನುವಾರಗಳು ಕಸಾಯಿಖಾನೆಗೆ ಹೋಗುತ್ತಿದ್ದರು ಸರ್ಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಯಡಿಯೂರಪ್ಪ

ಕುಮಾರಸ್ವಾಮಿ ಅಧಿಕಾರ ಬಂದ ದಿನದಿಂದಲೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬರೀ ಪಂಚತಾರಾ ಹೋಟೆಲ್​ಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಕಾಲ ಕಳೆದಿದ್ದಾರೆ. ಈಗ ಮಾತ್ರ ಗ್ರಾಮ ವಾಸ್ತವ್ಯ ಮಾಡುವ ಮುಖಾಂತರ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಜಿಂದಾಲ್​ ಕಂಪನಿಯಿಂದ ಮೈತ್ರಿ ಸರ್ಕಾರ ಕೋಟ್ಯಂತರ ರೂ. ಕಿಕ್​ಬ್ಯಾಕ್​ ಪಡೆದುಕೊಂಡಿದ್ದು, ಕೇವಲ ಒಂದು ಲಕ್ಷ ರೂ. ಹಣಕ್ಕೆ ಜಮೀನನ್ನು ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್: ಸಿ ಎಂ ಕುಮಾರಸ್ವಾಮಿ ವಿರುದ್ಧ ಬಿ ಎಸ್ ವೈ ಆಕ್ರೋಶ.

ನಿರೂಪಕ : ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ್ ಬಿ ಎಸ್ ಯಡಿಯೂರಪ್ಪ ಮೈತ್ರಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾದಗಿರಿ ಜಿಲ್ಗೆ ಬರ ಪರಶೀಲನೆಗೆಂದು ಆಗಮಿಸಿದ ಅವರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಜನ ಜಾನುವಾರಗಳಿಗೆ ಕುಡಿಯುವ ನೀರ ಇಲ್ಲದಂತೆ ಪರಿಸ್ಥಿತಿ ಉದ್ಭವಾಗಿದೆ.

ಜಿಲ್ಲೆಯಲ್ಲಿ ಭೀಕರ ಬರಗಾಲ ಉದ್ಧಬವಾಗಿದೆ. ತಾಲೂಕ ಹಾಗೂ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆಯದಿರುವ ಹಿನ್ನೆಲೆ ಜಾನುವಾರುಗಳು ಹಸುನಿಗುತ್ತಿವೆ. ಅಕ್ರಮವಾಗಿ ಜಾನುವಾರಗಳು ಕಸಾಯಿಖಾನೆಗೆ ಹೋಗುತ್ತಿದ್ರು ಕೂಡ ಸರಕಾರ ಕಣ್ಣುಮುಚ್ವಿ ಕುಳಿತಿದೆ ಎಂದು ಪರೋಕ್ಷವಾಗಿ ಸರಕಾರದ ವಿರುದ್ಧ ಗುಡುಗಿದರು.

ರಾಜ್ಯದ ಮುಖ್ಯಂತ್ರಿ ಕುಮಾರಸ್ವಾಮಿ ಅಧಿಕಾರ ಬಂದ ದಿನದಿಂದಲೂ ಯಾವುದೆ ಅಭಿವೃದ್ಧಿ ಕೆಲಸ ಮಾಡದೆ ಪೈಸ್ಟಾರ್ ಹೊಟೇಲ್ಗಳ್ಲಿ ವಾಸ್ಯವ್ಯ ಹೂಡಿದ್ದಾರೆ. ಈಗ ಮಾತ್ರ ಗ್ರಾಮ ವಾಸ್ತವ್ಯ ಮಾಡುವ ಮುಖಾಂತರ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದರು.

ರಾಜ್ಯದಲ್ಲಿ ನೀರುದ್ಯೋಗಿಗಳು ಹೆಚ್ಚಾಗಿದ್ದಾರೆ. ಉದ್ಯೋಗ ನೀಡುವಲ್ಲಿ ಮೈತ್ರಿ ಸರಕಾರ ವಿಫಲವಾಗಿದೆ. ಉದ್ಯೋಗವಿಲ್ಲದೆ ಜಿಲ್ಲೆಯ ಜನರು ಬೇರೆ ರಾಜ್ಯಗಳಲ್ಲಿಗೆ ಗುಳೆ ಹೋಗುತ್ತಿದ್ದಾರೆ.
ಬಳ್ಳಾರಿ ಜಿಂದಾಲ್ ಪ್ರಕರಣ ಸಂಬಂಧಿಸಿದಂತೆ ಉದ್ದೆಮೆದಾರರಿಗೆ ಕಡಿಮೆ ದರದಲ್ಲಿ ಜಮೀನು ನೀಡುವುದನ್ನು ವಿರೋಧಿಸಿ ಆಕ್ಷೇಪ ವ್ಯಕ್ತಪಡಿಸಿದ ಅವರು ರಾಜ್ಯದ ಜನರ ತೇರಿಗೆ ದುಡ್ಡನ್ನು ಅನಾವಶ್ಯಕವಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಕುಟುಕಿದರು.

Body:ಬಳ್ಳಾರಿ ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈತ್ರಿ ಸರಕಾರ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ಕೀಕಪ್ಯಾಕ ಪಡೆದುಕೊಂಡಿದ್ದು ಕೇವಲ್ ಒಂದು ಲಕ್ಷ ರೂಪಾಯಿ ಹಣಕ್ಕೆ ಸರಕಾರದ ಜಮೀನನ್ನು ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿಯೆಂದು ಮೈತ್ರಿ ಸರಕಾರವನ್ನು ಪ್ರಶ್ನಸಿದರು.

Conclusion:ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿ ಎಂ ಕುಮಾರ ಸ್ವಾಮಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಮಾಧ್ಯಮದ ಮೇಲೆ ನಂಬಿಕೆ ಇಲ್ಲದೆ ಅವರ ಮೇಲೆ ಹರಿಹಾಯ್ಯುವುದು ಸರಿಯಲ್ಲ. ಅವರ ಶ್ರೀಮತಿ ಅನಿತಾ ಕುಮಾರಸ್ವಾಮಿಯರೂ ಕೂಡ ಮಾಧ್ಯಮದ ಮೇಲೆ ನಂಬಿಕೆಯಿಲ್ಲದೆ ಹಾಗೆ ನಡೆದುಕೊಳ್ಳವುದು ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಪರೋಕ್ಷವಾಗಿ ಸಿ‌ ಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.