ಗುರುಮಠಕಲ್: ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ವಾಹಕನೊಬ್ಬ ಪ್ರಯಾಣಿಕನಿಗೆ ಬೂಟುಗಾಲಿನಿಂದ ಒದ್ದು ಥಳಿಸಿದ ಅಮಾನವೀಯ ಘಟನೆ ನಡೆದಿದೆ. ನಿರ್ವಾಹಕ ಬೂಟಿನಿಂದ ಒದೆಯುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಈಶಾನ್ಯ ಸಾರಿಗೆ ಸಂಸ್ಥೆಯ ಗುರುಮಠಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನಿರ್ವಾಹಕ ಪ್ರಯಾಣಿಕನಿಗನೊಬ್ಬನಿಗೆ ಮನಬಂದಂತೆ ಥಳಿಸಿದ್ದಾರೆ. ಪ್ರಯಾಣಿಕ ಹೈದ್ರಾಬಾದ್ಗೆ ತೆರಳುತ್ತಿದ್ದ ಎನ್ನಲಾಗಿದ್ದು, ನಿರ್ವಾಹಕ ಸಿದ್ದಪ್ಪನಿಗೆ ಬೋರ್ಡ್ ಯಾಕೆ ಹಾಕಿಲ್ಲವೆಂದು ಪ್ರಶ್ನೆ ಮಾಡಿದ್ದಾನೆ, ಇದರಿಂದ ಕೋಪಗೊಂಡ ನಿರ್ವಾಹಕ ಪ್ರಯಾಣಿಕರೆದರು ಪ್ರಶ್ನೆ ಮಾಡಿದ ಪ್ರಯಾಣಿಕನಿಗೆ ಥಳಿಸಿ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಈ ವೇಳೆ ಥಳಿತಕ್ಕೊಳಕ್ಕಾದ ಪ್ರಯಾಣಿಕ ನನಗೆ ಯಾಕೆ ಹೊಡೆಯುತ್ತಿದ್ದೀರಿ ನಾನೇನು ತಪ್ಪು ಮಾಡಿಲ್ಲವೆಂದು ಪರಿ ಪರಿಯಾಗಿ ಬೇಡಿಕೊಂಡರು ಸುಮ್ಮನಿರದ ನಿರ್ವಾಹಕ ಮನಬಂದಂತೆ ಥಳಿಸಿದ್ದಾನೆ. ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು , ಗುರುಮಠಕಲ್ ಬಸ್ ಘಟಕದ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಪ್ರಯಾಣಿಕ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಕ್ಕೆ ನಿರ್ವಾಹಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಈಗಾಗಲೇ ನಿರ್ವಾಹಕನಿಂದ ಮಾಹಿತಿ ಪಡೆದಿದ್ದೇವೆ. ಪ್ರಯಾಣಿಕರ ಜೊತೆ ಚೆನ್ನಾಗಿ ವರ್ತನೆ ತೊರಬೇಕಾಗಿತ್ತು. ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಗುರುಮಠಕಲ್ ಡಿಪೋ ಮ್ಯಾನೇಜರ್
ರವಿಶಂಕರ್ ಪತಂಗೆ ಹೇಳಿದ್ದಾರೆ.
ಇದನ್ನು ಓದಿ:ಇನ್ಮುಂದೆ ಬಸ್ ಪ್ರಯಾಣದ ವೇಳೆ ಮೊಬೈಲ್‌ನಿಂದ ಜೋರಾದ ಶಬ್ದ ಬರುವಂತಿಲ್ಲ