ಸುರಪುರ: ದೇಶದಲ್ಲಿನ ಇಷ್ಟಲಿಂಗದಾರಿ ಸ್ವಾಮೀಜಿಗಳು ಮತ್ತು ಲಿಂಗಾಯತ ಜನರು ನಿನ್ನೆ ಸಂಜೆ 7 ಗಂಟೆಗೆ ಕರೆ ನೀಡಿದ್ದ ಇಷ್ಟಲಿಂಗ ಪೂಜೆ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ ಸಲ್ಲಿಸಲಾಯಿತು.
ತಾಲೂಕಿನ ಹೆಸರಾಂತ ಮಠಗಳಲ್ಲಿ ಒಂದಾದ ತಾಲೂಕಿನ ಕರಡಕಲ್ ಗ್ರಾಮದ ನಾಲವಾರ ಕೋರಿಸಿದ್ದೇಶ್ವರರ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಎರಡು ವರ್ಷದ ಮಗು ವಚನ ಆರ್.ಕುಂಬಾರ ಇಷ್ಟಲಿಂಗ ಧ್ಯಾನಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಲಾಗಿದೆ.
ಅನೇಕ ಜನರು ಕೂಡ ಇಷ್ಟಲಿಂಗ ಪೂಜೆಯ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ ಮಾಡಿದ್ದಾರೆ. ಭಾರತ ಎಂಬುದು ವಿವಿಧ ಸಂಸ್ಕೃತಿ ಮತ್ತು ಆಚರಣೆಗಳ ದೇಶವಾಗಿದ್ದು, ಇಷ್ಟಲಿಂಗ ಧರಿಸಿದವರು ದೇಶದಲ್ಲಿನ ಕೊರೊನಾ ನಿರ್ಮೂಲನೆಗಾಗಿ ಮಾಡಿದ ಪ್ರಾರ್ಥನೆ ಫಲ ಎಷ್ಟರ ಮಟ್ಟಿಗೆ ಫಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.