ಯಾದಗಿರಿ: ಆ್ಯಂಬುಲೆನ್ಸ್ ತೆರಳುವ ಮಾರ್ಗದಲ್ಲಿ ಬೈಕ್ ನಿಲ್ಲಿಸಬೇಡಿ ಎಂದಿದ್ದಕ್ಕೆ ದುಷ್ಕರ್ಮಿಗಳ ಗುಂಪೊಂದು ಆಸ್ಪತ್ರೆಗೆ ನುಗ್ಗಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿರುವ ಘಟನೆ ಶಹಾಪುರ ತಾಲೂಕಾಸ್ಪತ್ರೆಯಲ್ಲಿ ನಡೆದಿದೆ.
ಮಂಜುನಾಥ್ ಎಂಬಾತ ಆ್ಯಂಬುಲೆನ್ಸ್ ತೆರಳುವ ಮಾರ್ಗದಲ್ಲಿ ಬೈಕ್ ನಿಲ್ಲಿಸುತ್ತಿರುವುದನ್ನು ಗಮನಿಸಿದ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್, ಇಲ್ಲಿ ಬೈಕ್ ನಿಲ್ಲಿಸಿದರೆ ಆ್ಯಂಬುಲೆನ್ಸ್ ತೆರಳಲು ಸಮಸ್ಯೆಯಾಗುತ್ತದೆ. ದಯವಿಟ್ಟು ಇಲ್ಲಿ ನಿಲ್ಲಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಇದರಿಂದ ಕುಪಿತಗೊಂಡ ಮಂಜುನಾಥ್ ಗ್ಯಾಂಗ್ ಕಟ್ಟಿಕೊಂಡು ಬಂದು ಆಸ್ಪತ್ರೆಯೊಳಗೆ ನುಗ್ಗಿ ಸೆಕ್ಯುರಿಟಿ ಗಾರ್ಡ್ಗೆ ಮನಬಂದಂತೆ ಥಳಿಸಿದ್ದಾರೆ. ಈ ದೃಶ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿ ಮಂಜುನಾಥ್ನನ್ನು ಬಂಧಿಸಲಾಗಿದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಐಷಾರಾಮಿ ಮನೆ, ಕಚೇರಿಗಳ ಮೇಲೆ ಐಟಿ ದಾಳಿ