ಗುರುಮಿಠಕಲ್: ರಾಜ ರಮೇಶ್ ಗೌಡ ಅಭಿಮಾನಿಗಳ ಬಳಗ ಮತ್ತು ಸ್ಪಂದನ ಟೀಂ ಕಾರ್ಯಕರ್ತರು ಗುರುಮಠಕಲ್ ಪಟ್ಟಣದ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿದರು. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ, ಮನೆ ಮನೆಗೆ ಹಾಗೂ ಬೀದಿ ಬದಿಯ ವ್ಯಾಪಾರಸ್ಥರಿಗೆ ಮಾಸ್ಕ್ ವಿತರಿಸಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ರಾಜ ರಮೇಶ್ ಗೌಡ, ಕೊರೊನಾ ವೈರಸ್ ಜಗತ್ತಿನಲ್ಲೇ ಒಂದು ದೊಡ್ಡ ಭಯವನ್ನು ಹುಟ್ಟು ಹಾಕಿದೆ. ದೇಶದ ಜನರು ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಮುಂಜಾಗ್ರತೆ ಹಾಗೂ ಕೊರೊನಾ ನಿಯಂತ್ರಣ ಹಿನ್ನೆಲೆ ಲಾಕ್ಡೌನ್ ಜಾರಿ ಮಾಡಿದ್ದಾರೆ. ಪ್ರತಿಯೊಬ್ಬರೂ ಅದಕ್ಕೆ ಬೆಂಬಲ ನೀಡಿ ಮನೆಯಲ್ಲಿ ಸುರಕ್ಷಿತವಾಗಿ ಇರಬೇಕು ಎಂದು ಮನವಿ ಮಾಡಿದರು.