ETV Bharat / state

ಯಾದಗಿರಿಯಲ್ಲಿ ನಕಲಿ ರಸಗೊಬ್ಬರ ಮಾರಾಟ .. ನಾಲ್ವರು ಆರೋಪಿಗಳ ಬಂಧನ - Police arrested four people who were selling fake fertilizer to farmers

ನಕಲಿ ರಸಗೊಬ್ಬರ ಮಾರಾಟ- ರೈತರಿಗೆ ಮಕ್ಮಲ್​ ಟೋಪಿ ಹಾಕ್ತಿದ್ದ ಚಾಲಾಕಿಗಳು- ನಾಲ್ವರು ಆರೋಪಿಗಳ ಬಂಧನ

four-arrested-for-selling-fake-fertilizer-in-yadgiri
ನಕಲಿ ರಸಗೊಬ್ಬರ ಮಾರಾಟ: ನಾಲ್ವರನ್ನು ಬಂಧಿಸಿದ ಪೊಲೀಸರು
author img

By

Published : Jul 21, 2022, 3:47 PM IST

ಯಾದಗಿರಿ : ರೈತರಿಗೆ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಭೀರಲಿಂಗ ನಾಗನಟಗಿ, ಮುತ್ತಪ್ಪ ಪೂಜಾರಿ, ಪರಮಾನಂದ ಕೋಣಸಿರಸಗಿ, ಭೀಮ್‌ಸಿಂಗ್ ರಾಠೋಡ್ ಎಂದು ಗುರುತಿಸಲಾಗಿದೆ. ಪೊಲೀಸ್ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 520 ರಸಗೊಬ್ಬರ ಚೀಲಗಳು, 2 ಖಾಸಗಿ ಕಂಪನಿಯ ಗೊಬ್ಬರದ ಚೀಲಗಳನ್ನು ಹೊಲೆಯುವ ಯಂತ್ರಗಳು, ಡಿಎಪಿ ಹೆಸರಿನ 320 ಹೊಸ ಖಾಲಿ ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ನಕಲಿ ರಸಗೊಬ್ಬರ ಮಾರಾಟ: ನಾಲ್ವರನ್ನು ಬಂಧಿಸಿದ ಪೊಲೀಸರು

ಹೊಸಗೇರಾ ಗ್ರಾಮ ಪಂಚಾಯತ್​ ಬಳಿ ಇರುವ ಸಮುದಾಯ ಭವನದ ಮುಂದೆ ಓರ್ವ ವ್ಯಕ್ತಿಯು ರೈತರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಎಸ್ಪಿ ಡಾ. ವೇದಮೂರ್ತಿ, ಡಿವೈಎಸ್ಪಿ ಮಂಜುನಾಥ ಟಿ. ಅವರ ಮಾರ್ಗದರ್ಶನದಲ್ಲಿ ಕೃಷಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಶಹಾಪುರ ಸಿಪಿಐ ಚೆನ್ನಯ್ಯ ಹಿರೇಮಠ, ಗೋಗಿ ಪಿಎಸ್‌ಐ ಅಯ್ಯಪ್ಪ, ಭೀ.ಗುಡಿ ಪಿಎಸ್‌ಐ ಸಂತೋಷ್ ರಾಠೋಡ್, ಗೋಗಿ ತನಿಖಾ ಪಿಎಸ್‌ಐ ಸೋಮಲಿಂಗಪ್ಪ, ಸಿಬ್ಬಂದಿಗಳಾದ ಪ್ರೇಮ್‌ಸಿಂಗ್, ಶರಣಗೌಡ, ಭೀಮಣ್ಣ, ಬಂದೇನವಾಜ್, ನಿಲೇಶ, ಹಣಮಂತ್ರಾಯ, ರವಿಕುಮಾರ, ಶ್ರೀನಿವಾಸ, ವೆಂಕೋಬ, ಮಾನಪ್ಪ (ಭೀ.ಗುಡಿ ಪೊಲೀಸ್ ಠಾಣೆ)ಮುಂತಾದವರು ಭಾಗಿಯಾಗಿದ್ದರು.

ರೈತರು ಇಂತಹ ವ್ಯಕ್ತಿಗಳ ಮೋಸಕ್ಕೆ ಒಳಗಾಗದೆ ಅಧಿಕೃತ ರಸಗೊಬ್ಬರ ಮಾರಾಟಗಾರರ ಬಳಿ ಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಔಷಧ ಮತ್ತು ಇತರೆ ಅಗತ್ಯಕೃಷಿ ಪರಿಕರಗಳನ್ನು ಖರೀದಿಸಬೇಕೆಂದು ಜಿಲ್ಲಾ ಎಸ್ಪಿ ವೇದಮೂರ್ತಿ ಮನವಿ ಮಾಡಿದ್ದಾರೆ.

ಓದಿ : ಬಾರ್​ಗೆ ಬಂದು ಕಂಠಪೂರ್ತಿ ಕುಡಿದ.. ಬಿಲ್​ ಕೊಟ್ಟ ಸಪ್ಲೈಯರ್​ಗೆ ಚಾಕುವಿನಿಂದ ಇರಿದು ಕೊಂದ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.