ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದ ಒಳ ಹರಿವು ಹೆಚ್ಚಾದ ಹಿನ್ನಲೆ ಸಂತ್ರಸ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದಾರೆ.
ನಾರಾಯಣಪುರ ಬಸವ ಸಾಗರ ಜಲಾಶಯದಿಂದ ಸುಮಾರು ಎರಡೂವರೆ ಲಕ್ಷ ಕ್ಯೂಸೆಕ್ ನೀರು ಕೃಷ್ಣ ನದಿಗೆ ಹರಿಸಿದ ಹಿನ್ನಲೆ, ಶಹಾಪುರ ತಾಲೂಕಿನ ಕೊಳ್ಳೂರ ಬ್ರಿಡ್ಜ್ ಗ್ರಾಮವು ಸಂಪೂರ್ಣವಾಗಿ ಜಲಾವೃತವಾಗುತ್ತಿದೆ ಎಂದು ಅಸಮಾಧನಾ ವ್ಯಕ್ತಪಡಿಸಿದರು.
ಪ್ರತಿ ವರ್ಷವೂ ಕೃಷ್ಣೆಯ ಹಾಗೂ ಮಳೆ ನೀರಿನಿಂದ ಕೊಳ್ಳೂರ ಬ್ರಿಡ್ಜ್ ಗ್ರಾಮವು ಸಂಪೂರ್ಣವಾಗಿ ಜಲಾವೃತವಾಗುತ್ತಿದೆ. ಇದರ ಮುಖಾಂತರವೇ ನಾವು ರಾಯಚೂರ ಜಿಲ್ಲೆಯ ದೇವದುರ್ಗಕ್ಕೆ ತೇರಳುತ್ತೇವೆ. ನಮಗೆ ಶಹಾಪುರ ಹಾಗೂ ಯಾದಗಿರಿ ಜಿಲ್ಲೆಯು ಬಹಳ ದೂರವಾಗುತ್ತಿದೆ. ಹೀಗಾಗಿ ಯಾವುದೆ ಕೆಲಸವಿದ್ದರೂ ದೇವದುರ್ಗ ಹೋಗುತ್ತೇವೆ. ಈ ಬ್ರಿಡ್ಜ್ ತುಂಬುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಕೊಳ್ಳೂರ ಬ್ರಿಡ್ಜ್ ಗ್ರಾಮದಲ್ಲಿ ಗರ್ಭಿಣಿಯರಿಗೆ ಹಾಗೂ ಶಾಲಾ ಮಕ್ಕಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಯೋಜನೆಯಡಿಯಲ್ಲಿ ಈ ಬ್ರಿಡ್ಜ್ನ್ನು ಸುಮಾರು ಹದಿನೈದರಿಂದ ಇಪ್ಪತ್ತು ಫೀಟ್ ವರೆಗೂ ಎತ್ತರಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.