ಯಾದಗಿರಿ: ಭೀಮಾನದಿಗೆ 1ಲಕ್ಷ 75 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾದ ಹಿನ್ನೆಲೆ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆ ಜನರು ಎಚ್ಚರದಿಂದಿರುವಂತೆ ಡಂಗುರ ಸಾರಿ ಮನವಿ ಮಾಡಲಾಗಿದೆ.
ಯಾವುದೇ ಕಾರಣಕ್ಕೂ ಜನರು ನದಿ ತೀರಕ್ಕೆ ಹೋಗಬಾರದೆಂದು ಡಂಗುರ ಸಾರಿ ಜಾಗೃತಿ ಮೂಡಿಸಲಾಗಿದ್ದು, ಜಾನುವಾರುಗಳನ್ನು ಸಹಿತ ನದಿ ತೀರಕ್ಕೆ ತೆಗೆದುಕೊಂಡು ಹೋಗದಂತೆ ಹಳ್ಳಿ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ, ಬೂದನೂರು ಹಾಗೂ ವಿವಿಧ ಕಡೆ ಎಚ್ಚರಿಕೆ ನೀಡಲಾಗಿದೆ. ಇತ್ತ ನದಿ ತೀರದ ಗ್ರಾಮಗಳಾದ ಶಿವನೂರು, ಮಾಚನೂರು, ಬೂದಿಹಾಳ ಗ್ರಾಮಕ್ಕೆ ವಡಗೇರಾ ತಹಶೀಲ್ದಾರ್ ಸುರೇಶ್ ಅಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಜಾಗ ತಮ್ಮದೆಂದು ವೃದ್ಧೆಯ ಗುಡಿಸಲು ಧ್ವಂಸ.. ವಸ್ತುಗಳನ್ನು ಬೀದಿಗೆ ಎಸೆದು ಪುಂಡಾಟ...!