ETV Bharat / state

5 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಎಫ್‌ಡಿಎ ಅಧಿಕಾರಿ - ಭ್ರಷ್ಟಾಚಾರ ನಿಗ್ರಹ ದಳ

ನಿವೇಶನವೊಂದರ ಮುಟೇಷನ್‌ ಮಾಡಿಕೊಡಲು 20 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕ ಸಿದ್ರಾಮೇಶ್ವರ ಎಂಬುವರನ್ನ ಯಾದಗಿರಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

acb
ಎಫ್‌ಡಿಎ ಅಧಿಕಾರಿ ಲಂಚ ಪಡೆಯುವ ವೇಳೆ ಎಸಿಬಿ ದಾಳಿ
author img

By

Published : Mar 25, 2022, 10:28 AM IST

ಯಾದಗಿರಿ: ನಿವೇಶನದ ಖಾತೆ ಮಾಡಿಕೊಡಲು ನಗರಸಭೆ ಕಚೇರಿ ವರ್ಗಾವಣೆ ವಿಭಾಗದ ಎಫ್‌ಡಿಎ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿರುವ ಘಟನೆ ನಗರದ ತಿಮ್ಮಾಪುರ ಬಸ್ ನಿಲ್ದಾಣ ಬಳಿ ಗುರುವಾರ ಸಂಜೆ ನಡೆದಿದೆ. ಪ್ರಥಮ ದರ್ಜೆ ಸಹಾಯಕ ಸಿದ್ರಾಮೇಶ್ವರ ಬಂಧಿತ ಆರೋಪಿ.

ಯಾದಗಿರಿ ನಗರದ ಪುರಸಭೆ ಮಾಜಿ ಸದಸ್ಯ ರಾಜಾ ರಾಮಪ್ಪ ನಾಯಕ (ಜೇಜಿ) ಎಂಬುವರು ನಿವೇಶನವೊಂದರ ಮುಟೇಷನ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ, ಖಾತೆ ಮಾಡಿ ಕೊಡಲು ಪ್ರಥಮ ದರ್ಜೆ ಸಹಾಯಕ ಸಿದ್ರಾಮೇಶ್ವರ 20 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆ ಹಣ ನೀಡಲು ನಗರದ ತಿಮ್ಮಾಪುರ ಬಸ್ ನಿಲ್ದಾಣ ಬಳಿ ಬರುವಂತೆ ರಾಜಾ ರಾಮಪ್ಪ ನಾಯಕ ಎಫ್‌ಡಿಎ ಅಧಿಕಾರಿಗೆ ತಿಳಿಸಿದ್ದಾರೆ. ಅದರಂತೆ, ಸಿದ್ರಾಮೇಶ್ವರ ಅಲ್ಲಿಗೆ ಹೋಗಿ ಐದು ಸಾವಿರ ರೂಪಾಯಿಗಳು ಸ್ವೀಕರಿಸುವಾಗ ಎಸಿಬಿ, ಡಿವೈಎಸ್‌ಪಿ ಉಮಾಪತಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದೆ.

ಎಫ್‌ಡಿಎ ಅಧಿಕಾರಿ ಲಂಚ ಪಡೆಯುವ ವೇಳೆ ಎಸಿಬಿ ದಾಳಿ

ಈ ಕುರಿತು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಪೂರ್ಣಗೊಂಡ ಬಳಿಕ ಸಿದ್ರಾಮೇಶ್ವರ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗುವುದು ಎಂದು ಡಿವೈಎಸ್‌ಪಿ ಉಮಾಪತಿ ಬಿ. ತಿಳಿಸಿದ್ದಾರೆ. ಸಿಪಿಐ ಬಸವರಾಜ ಮುರದೇಹಾಳ, ಬಾಬಾ ಸಾಹೇಬ ಪಾಟೀಲ, ಸಿಬ್ಬಂದಿ ವಿಜಯಕುಮಾರ, ಅಮರನಾಥ ನೀಲಕಂಠ, ಮಲ್ಲಮ್ಮ, ಸಾಬಣ್ಣ ಹಾಗೂ ಬಂಡೆಪ್ಪ ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ: Watch... ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಖತ್​ ಸ್ಟೆಪ್ ಹಾಕಿದ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.